
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಅವರ ಗ್ಯಾಂಗ್ ನ್ನು ಬಂಧಿಸಿದಾಗಿನಿಂದ ಬೆಚ್ಚಿಬೀಳಿಸುವ ಸಂಗತಿಗಳು ಹೊರಬೀಳುತ್ತಿವೆ. ಆರೋಪಿಗಳು ನೀಡಿದ ಚಿತ್ರಹಿಂಸೆಯಿಂದ ಉಂಟಾದ ಆಘಾತ ಮತ್ತು ರಕ್ತಸ್ರಾವದಿಂದ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಆದರೆ, ದರ್ಶನ್ ಮೇಲಿನ ಕೊಲೆ ಆರೋಪವನ್ನು ಕೈಬಿಡಲು ಆರೋಪಿಗಳು ಮರಣೋತ್ತರ ಪರೀಕ್ಷೆಯ ವರದಿಯನ್ನು ತಿರುಚಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ತೋರಿಸಲು ಮರಣೋತ್ತರ ಪರೀಕ್ಷೆ ನಡೆಸಿದ ಅಧಿಕಾರಿಗಳಿಗೆ 1 ಕೋಟಿ ರೂ. ಆಮಿಷವೊಡಿರುವುದಾಗಿ ತಿಳಿದುಬಂದಿದೆ. ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಮತ್ತು ಇತರ 16 ಮಂದಿಯನ್ನು ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರಾ ಗೌಡ ಅವರಿಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಅಪಹರಿಸಿ, ಬೆಂಗಳೂರಿಗೆ ಕರೆತಂದು, ಶೆಡ್‌ನಲ್ಲಿ ಇರಿಸಿ, ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದೀಗ ಮರಣೋತ್ತರ ಪರೀಕ್ಷೆ ವರದಿಯಲ್ಲಿ ರೇಣುಕಾಸ್ವಾಮಿ ಸಾವಿಗೂ ಮುನ್ನ ಕ್ರೂರವಾಗಿ ಚಿತ್ರಹಿಂಸೆ ನೀಡಿರುವುದು ದೃಢಪಟ್ಟಿದೆ. ಆತನ ದೇಹದಲ್ಲಿ ನಾಲ್ಕು ಮುರಿತಗಳು ಸೇರಿದಂತೆ 15 ಗಾಯದ ಗುರುತುಗಳಿವೆ ಎಂದು ಅದು ಹೇಳಿದೆ.
ಶೆಡ್‌ನಲ್ಲಿದ್ದ ಮಿನಿ ಟ್ರಕ್‌ಗೆ ರೇಣುಕಾಸ್ವಾಮಿಯ ತಲೆಯನ್ನು ಹೊಡೆಯಲಾಗಿದೆ. ದೇಹದ ತಲೆ, ಹೊಟ್ಟೆ, ಎದೆ ಮತ್ತು ಇತರ ಭಾಗಗಳಲ್ಲಿ ಗಾಯದ ಗುರುತುಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಬಂಧಿತ ಆರೋಪಿಗಳಲ್ಲಿ ಒಬ್ಬರು, ಪೊಲೀಸ್ ಅಪ್ರೋವರ್ ಆಗಲು ಒಪ್ಪಿಕೊಂಡಿದ್ದು, ದರ್ಶನ್ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಬಲದಿಂದ ಒದ್ದು, ಆತನ ತಲೆಯನ್ನು ಮಿನಿ ಟ್ರಕ್‌ಗೆ ಗುದ್ದಿಸಿರುವುದಾಗಿ ಮೂಲಗಳು ಹೇಳಿವೆ.
Advertisement