ಚನ್ನಪಟ್ಟಣ ಉಪಚುನಾವಣೆಗೆ ದರ್ಶನ್ ಕಣಕ್ಕಿಳಿಸಲು DK ಸಹೋದರರು ಯೋಜಿಸಿದ್ದರೇ?

ಹೆಚ್ ಡಿ ಕುಮಾರಸ್ವಾಮಿ ಸಂಸತ್ ಗೆ ಮಂಡ್ಯದಿಂದ ಆಯ್ಕೆಯಾಗಿದ್ದು, ಅವರು ಚನ್ನಪಟ್ಟಣ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಈ ಕ್ಷೇತ್ರದ ಉಪಚುನಾವಣೆಗೆ ಚುನಾವಣಾ ಆಯೋಗ ಇನ್ನಷ್ಟೇ ದಿನಾಂಕ ನಿಗದಿಪಡಿಸಬೇಕಿದೆ.
Actor Darshan, DK Suresh, DK Shivakumar
ನಟ ದರ್ಶನ್- ಡಿಕೆ ಸುರೇಶ್, ಡಿಕೆ ಶಿವಕುಮಾರ್ online desk

ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವುಗೊಳ್ಳಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಈ ಉಪಚುನಾವಣೆಯಲ್ಲಿ ನಟ ದರ್ಶನ್ ಅವರನ್ನು ಕಣಕ್ಕಿಳಿಸಲು ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಚಿಂತನೆ ನಡೆಸಿದ್ದರು ಎಂದು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಹೇಳಿದ್ದಾರೆ.

ನಟ ದರ್ಶನ್ ಈಗ ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಎಂಬುವವರ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಹೆಚ್ ಡಿ ಕುಮಾರಸ್ವಾಮಿ ಸಂಸತ್ ಗೆ ಮಂಡ್ಯದಿಂದ ಆಯ್ಕೆಯಾಗಿದ್ದು, ಅವರು ಚನ್ನಪಟ್ಟಣ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಈ ಕ್ಷೇತ್ರದ ಉಪಚುನಾವಣೆಗೆ ಚುನಾವಣಾ ಆಯೋಗ ಇನ್ನಷ್ಟೇ ದಿನಾಂಕ ನಿಗದಿಪಡಿಸಬೇಕಿದೆ.

ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ಅಚ್ಚರಿಯ ಅಭ್ಯರ್ಥಿ ಈಗ ಕಂಬಿ ಹಿಂದೆ ಇದ್ದಾರೆ. ಅವರ ಅಚ್ಚರಿಯ ಅಭ್ಯರ್ಥಿ ಯಾರೆಂದು ನನಗೆ ತಿಳಿದಿದೆ. ಅವರು ಯಾರನ್ನು ಕಣಕ್ಕಿಳಿಸಲು ಬಯಸಿದ್ದರು, ಅವರು ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ ಮತ್ತು ಕಂಬಿ ಹಿಂದೆ ಇದ್ದಾರೆ. ಅಚ್ಚರಿಯ ಅಭ್ಯರ್ಥಿ ಅಥವಾ ಯಾರಾದರೂ ಬರಲಿ, ಎರಡೂ ಪಕ್ಷಗಳು (ಬಿಜೆಪಿ ಮತ್ತು ಜೆಡಿಎಸ್) ಚುನಾವಣೆಗೆ ಸಿದ್ಧರಿದ್ದೇವೆ ಎಂದು ಮಾಜಿ ಸಚಿವ ಸುರೇಶ್‌ ಅವರು ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಯ ಪ್ರಶ್ನೆಗೆ ಎಂಎಲ್ ಸಿ ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

Actor Darshan, DK Suresh, DK Shivakumar
ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್ ಪರವಾಗಿ ಸರ್ಕಾರದ ಮೇಲೆ ಒತ್ತಡ; ಆರೋಪ ತಳ್ಳಿಹಾಕಿದ ಡಿಕೆ ಶಿವಕುಮಾರ್

ಸ್ವತಃ ನಟರೂ ಆಗಿದ್ದ ಯೋಗೇಶ್ವರ್ ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. "ಅವರಿಗೆ ರಾಜಕೀಯಕ್ಕೆ ಬರಲು ಆಸಕ್ತಿ ಇತ್ತು, ಬಹುಶಃ ಅವರು ಸಾರ್ವಜನಿಕ ಜೀವನಕ್ಕೆ ಬರಲು ಬಯಸಿದ್ದರು. ಘಟನೆ ಬಗ್ಗೆ ವಿಷಾದವಿದೆ. ದುರಂತ" ಎಂದಷ್ಟೇ ಹೇಳಿದ್ದಾರೆ. ಬಿಜೆಪಿ-ಜೆಡಿ(ಎಸ್) ಮೈತ್ರಿಯಿಂದ ಚನ್ನಪಟ್ಟಣ ಉಪಚುನಾವಣೆಯ ಸಂಭಾವ್ಯ ಅಭ್ಯರ್ಥಿಗಳಲ್ಲಿ ಯಾಗೇಶ್ವರ್ ಕೂಡ ಒಬ್ಬರು ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಕುಮಾರಸ್ವಾಮಿಯಿಂದ ಸೋತ ಕಾಂಗ್ರೆಸ್‌ನ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ದರ್ಶನ್ ಪ್ರಚಾರ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com