ಪಾದಚಾರಿಗಳ ಅಪಘಾತ ತಪ್ಪಿಸಲು ಕ್ರಮ: ತುಮಕೂರು ಮುಖ್ಯರಸ್ತೆಯಲ್ಲಿ BMRCL ನಿಂದ ಸುರಕ್ಷತಾ ತಡೆಗೋಡೆ ನಿರ್ಮಾಣ

ಯಶವಂತಪುರದಿಂದ ನಾಗಸಂದ್ರದವರೆಗಿನ ಬಿಎಂಆರ್‌ಸಿಎಲ್‌ನ ಹಸಿರು ಮಾರ್ಗವು ತುಮಕೂರು ರಸ್ತೆಯುದ್ದಕ್ಕೂ ಹಾದು ಹೋಗುತ್ತಿದ್ದು, ಈ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಂದಾಗಿ ಸಾರ್ವಜನಿಕರು ಅಪಾಯಕ್ಕೆ ಸಿಲುಕಿದ್ದಾರೆ.
ಪಾದಚಾರಿಗಳ ಸುರಕ್ಷತೆಗಾಗಿ ಯಶವಂತಪುರದಿಂದ ಸ್ಯಾಂಡಲ್ ಸೋಪ್ ಮೆಟ್ರೋ ನಿಲ್ದಾಣಗಳವರೆಗೆ ತನ್ನ ನಿಲ್ದಾಣಗಳ ಕೆಳಗಿನ ರಸ್ತೆಯಲ್ಲಿ BMRCL ನಿಂದ ಬ್ಯಾರಿಕೇಡಿಂಗ್ ನಿರ್ಮಾಣ
ಪಾದಚಾರಿಗಳ ಸುರಕ್ಷತೆಗಾಗಿ ಯಶವಂತಪುರದಿಂದ ಸ್ಯಾಂಡಲ್ ಸೋಪ್ ಮೆಟ್ರೋ ನಿಲ್ದಾಣಗಳವರೆಗೆ ತನ್ನ ನಿಲ್ದಾಣಗಳ ಕೆಳಗಿನ ರಸ್ತೆಯಲ್ಲಿ BMRCL ನಿಂದ ಬ್ಯಾರಿಕೇಡಿಂಗ್ ನಿರ್ಮಾಣ
Updated on

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ತುಮಕೂರು ರಸ್ತೆಯಲ್ಲಿ ಯಶವಂತಪುರದಿಂದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಕಡೆಗೆ ಸಾಗುವ ಮೆಟ್ರೊ ಪ್ರಯಾಣಿಕರು ಮತ್ತು ರಸ್ತೆ ದಾಟುವ ಇತರ ಪಾದಚಾರಿಗಳಿಗೆ ಅಪಘಾತಗಳಾಗದಂತೆ ಅನಾಹುತ ತಪ್ಪಿಸಲು ಬ್ಯಾರಿಕೇಡ್ ಹಾಕಿದೆ. ಸಂಚಾರ ಪೊಲೀಸರು ಬಿಎಂಆರ್‌ಸಿಎಲ್‌ಗೆ 1.5 ಕಿಮೀ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.

ಯಶವಂತಪುರದಿಂದ ನಾಗಸಂದ್ರದವರೆಗಿನ ಬಿಎಂಆರ್‌ಸಿಎಲ್‌ನ ಹಸಿರು ಮಾರ್ಗವು ತುಮಕೂರು ರಸ್ತೆಯುದ್ದಕ್ಕೂ ಹಾದು ಹೋಗುತ್ತಿದ್ದು, ಈ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಂದಾಗಿ ಸಾರ್ವಜನಿಕರು ಅಪಾಯಕ್ಕೆ ಸಿಲುಕಿದ್ದಾರೆ. ಯಶವಂತಪುರದಲ್ಲಿ ಸ್ಥಾಪಿಸಲಾದ ಸ್ಟೀಲ್ ಬ್ಯಾರಿಕೇಡ್ 500 ಮೀಟರ್ ಉದ್ದ ಮತ್ತು 7 ಮೀಟರ್ ಎತ್ತರಕ್ಕೆ ಸಾಗುತ್ತದೆ.

ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಈ ಬಗ್ಗೆ TNIE ಜೊತೆ ಮಾತನಾಡಿ, ಸಂಚಾರ ಪೊಲೀಸರ ಶಿಫಾರಸಿನ ಮೇರೆಗೆ ಈ ರಸ್ತೆಯ ಮಧ್ಯಭಾಗದಲ್ಲಿ BMRCL ಈ ವರ್ಷದ ಆರಂಭದಲ್ಲಿ ಬ್ಯಾರಿಕೇಡಿಂಗ್ ಹಾಕಿತು ಎಂದರು. ಯಶವಂತಪುರ ಟ್ರಾಫಿಕ್ ಇನ್‌ಸ್ಪೆಕ್ಟರ್ ಬಿ ಚಿದಾನಂದ, ಕಳೆದ ಎರಡು ವರ್ಷಗಳಲ್ಲಿ, ನಾವು ಈ ರಸ್ತೆಯಲ್ಲಿ ಕೆಲವು ಸಾವು-ನೋವುಗಳು ಉಂಟಾಗಿವೆ. 2024 ರ ಐದು ತಿಂಗಳಲ್ಲಿ ನಾವು ಯಾವುದೇ ಪಾದಚಾರಿ ಅಪಘಾತಗಳನ್ನು ನೋಡಿಲ್ಲ ಎಂದರು.

2023 ರಲ್ಲಿ, ಪಾದಚಾರಿಗಳು ದಾಟುವಾಗ ವೇಗವಾಗಿ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು ಮೂರು ಸಾವುಗಳು ಮತ್ತು ನಾಲ್ಕು ಗಾಯಗಳು ಸಂಭವಿಸಿವೆ ಎಂದು ಸಂಚಾರ ಮೂಲಗಳು ತಿಳಿಸಿವೆ. ಬ್ಯಾರಿಕೇಡ್ ದಾಟಲು ಸಾಧ್ಯವಾಗದ ಕಾರಣ ಈ ವರ್ಷ ಯಾವುದೇ ಅಪಘಾತಗಳು ಸಂಭವಿಸಿಲ್ಲ. ಕಳೆದ ತಿಂಗಳು ಈ ರಸ್ತೆಯಲ್ಲಿ ಮಹಿಳೆಯೊಬ್ಬರು ಬ್ಯಾರಿಕೇಡ್ ಇಲ್ಲದ ಭಾಗವನ್ನು ದಾಟುವಾಗ ಕಾರು ಡಿಕ್ಕಿ ಹೊಡೆದು ಅಪಘಾತದಲ್ಲಿ ಮೃತಪಟ್ಟರು. ಸುರಕ್ಷತಾ ತಡೆಗೋಡೆ ವಿಸ್ತರಿಸುವ ಅಗತ್ಯವಿದೆ ಎಂದು ಮನಗಂಡಿದ್ದೇವೆ ಎಂದರು.

ಪಾದಚಾರಿಗಳ ಸುರಕ್ಷತೆಗಾಗಿ ಯಶವಂತಪುರದಿಂದ ಸ್ಯಾಂಡಲ್ ಸೋಪ್ ಮೆಟ್ರೋ ನಿಲ್ದಾಣಗಳವರೆಗೆ ತನ್ನ ನಿಲ್ದಾಣಗಳ ಕೆಳಗಿನ ರಸ್ತೆಯಲ್ಲಿ BMRCL ನಿಂದ ಬ್ಯಾರಿಕೇಡಿಂಗ್ ನಿರ್ಮಾಣ
ಆತ್ಮಹತ್ಯೆ ತಡೆ BMRCL ಮುಂದು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ ಶೀಘ್ರದಲ್ಲೇ ಅಳವಡಿಕೆ!

ಮಾರನಪಾಳ್ಯದಿಂದ ಸಿಎನ್‌ಟಿಐ ಜಂಕ್ಷನ್‌ವರೆಗೆ ಬ್ಯಾರಿಕೇಡಿಂಗ್‌ ವಿಸ್ತರಿಸುವಂತೆ ಸಂಚಾರ ಪೊಲೀಸರು ಕಳೆದ ವಾರ ಬಿಎಂಆರ್‌ಸಿಎಲ್‌ನ ಬೈಯಪ್ಪನಹಳ್ಳಿ ಕಚೇರಿಯಲ್ಲಿ ಜನರಲ್‌ ಮ್ಯಾನೇಜರ್‌ಗೆ ಲಿಖಿತ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರ ಮನವಿ ಮೇರೆಗೆ ಎರಡು ತಿಂಗಳ ಹಿಂದೆ ಏಳು ಅಡಿ ಎತ್ತರದಲ್ಲಿ ಸ್ಟೀಲ್ ಬ್ಯಾರಿಕೇಡ್ ಅಳವಡಿಸಿದ್ದೇವೆ ಎಂದು ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬ್ಯಾರಿಕೇಡ್ ವಿಸ್ತರಿಸುವ ಬಗ್ಗೆ ಬಿಎಂಆರ್‌ಸಿಎಲ್ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com