ದರ್ಶನ್ ಮನುಷ್ಯನ ರಾಕ್ಷಸನಾ?: ವಿಡಿಯೋ ನೋಡಿ ದಂಗಾದ ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ನ ಕ್ರೌರ್ಯದ ಒಂದೊಂದೇ ಮುಖ ಅನಾವರಣಗೊಳ್ಳುತ್ತಿದೆ.
CM Siddaramaiah
ಸಿಎಂ ಸಿದ್ದರಾಮಯ್ಯ online desk
Updated on

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ನ ಕ್ರೌರ್ಯದ ಒಂದೊಂದೇ ಮುಖ ಅನಾವರಣಗೊಳ್ಳುತ್ತಿದೆ.

ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿರುವ ವಿಡಿಯೋ ಲಭ್ಯವಾಗಿದ್ದು, ಸಿಎಂ ಸಿದ್ದರಾಮಯ್ಯ ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗುತ್ತಿದೆ.

ನಟ ದರ್ಶನ್ ಬಂಧನಕ್ಕೆ ಒಳಗಾಗುವ ಮೊದಲು ಆತ ಎಸಗಿದ್ದ ಕೃತ್ಯದ ವಿಡಿಯೋಗಳನ್ನು ಅಧಿಕಾರಿಗಳು ಸಿಎಂ ಸಿದ್ದರಾಮಯ್ಯಗೆ ತೋರಿಸಿದ್ದರು. ಈ ವೇಳೆ ವಿಡಿಯೋ ನೋಡಿ ದಂಗಾದ ಸಿಎಂ, ದರ್ಶನ್ ಮನುಷ್ಯನಾ ಅಥವಾ ರಾಕ್ಷಸನಾ ಎಂದು ಪ್ರಶ್ನಿಸಿದ್ದರಂತೆ.

CM Siddaramaiah
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ: ಸ್ಯಾಂಡಲ್ ವುಡ್ ಪ್ರತಿಕ್ರಿಯೆ ಹೀಗಿತ್ತು...

ಬೆಂಗಳೂರು ಪೊಲೀಸ್ ಕಮಿಷನರ್ ದರ್ಶನ್ ವಿಡಿಯೋ ತೋರಿಸಿ ಸಿಎಂ ಬಳಿ ಅನುಮತಿ ಪಡೆದು ದರ್ಶನ್ ರನ್ನು ಬಂಧಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com