
ಬೆಂಗಳೂರು: ರಾಗಿಗುಡ್ಡದಲ್ಲಿ ದಕ್ಷಿಣ ಭಾರತದ ಅತಿ ಎತ್ತರದ ರೋಡ್-ಕಮ್-ರೈಲು ಮೇಲ್ಸೇತುವೆಯನ್ನು ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಮೊದಲ ಹಂತದಲ್ಲಿ ಎರಡೂ ಬದಿಗಳಲ್ಲಿ ಎರಡು ರಸ್ತೆ ಮಾರ್ಗ ನಿರ್ಮಿಸಲಾಗಿದ್ದು, ಇಲ್ಲಿ ಬಸ್, ಕಾರು ಸೇರಿ ಎಲ್ಲಾ ರೀತಿಯ ವಾಹನಗಳು ಸಂಚರಿಸಲಿವೆ. ಎರಡನೇ ಹಂತದಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲಿದೆ. ಮೆಟ್ರೋ ಕಂಬಕ್ಕೆ ಎರಡೂ ಬದಿಯಲ್ಲಿ ರೆಕ್ಕೆಗಳ ರೀತಿಯಲ್ಲಿ ಈ ಸೇತುವೆಗಳನ್ನು ಅಳವಡಿಸಲಾಗಿದೆ.
ಈ ಡಬ್ಬಲ್ ಡೆಕ್ಕರ್ ಮೇಲ್ಸೇತುವೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಫ್ಲೈಓವರ್‌ನ ಮೊದಲ ಹಂತದ ರಸ್ತೆ, ನೆಲದಿಂದ 8 ಮೀಟರ್ ಎತ್ತರ ಮತ್ತು ಮೂರು ಇಳಿಜಾರುಗಳು ಅಂತಿಮವಾಗಿ ಸಿದ್ಧವಾಗಿವೆ. ಇದರ ಅಧಿಕೃತ ಚಾಲನೆಗಾಗಿ ಮುಖ್ಯಮಂತ್ರಿಗಳ ಕಛೇರಿಯಿಂದ ದಿನಾಂಕಗಳಿಗಾಗಿ ಕಾಯುತ್ತಿದೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯ ಉದ್ಯೋಗಿಗಳಿಗೆ ಇದರಿಂದ ಭಾರೀ ಟ್ರಾಫಿಕ್ ಜಾಮ್ ನಿಂದ ಮುಕ್ತಿ ಪಡೆಯಲಿದ್ದಾರೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಮಾರೇನಹಳ್ಳಿ ರಸ್ತೆಯಲ್ಲಿ 31 ಮೀಟರ್ ಎತ್ತರದಲ್ಲಿ 330 ಕೋಟಿ ರು. ವೆಚ್ಚದ ಮೇಲ್ಸೇತುವೆಯನ್ನು ನಿರ್ಮಿಸಿದ್ದು, ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಮಾರ್ಗವನ್ನು ಎರಡನೇ ಹಂತದಲ್ಲಿ ಹಾಕಲಾಗಿದೆ. ಎಲಿವೇಟೆಡ್ ರಸ್ತೆಯ ಮೇಲೆ ಮೆಟ್ರೋ ಮಾರ್ಗವನ್ನು ಹೊಂದಿರುವ ದಕ್ಷಿಣ ಭಾರತದಲ್ಲಿ ಇದು ಮೊದಲ ಫ್ಲೈಓವರ್ ಆಗಿದೆ ಎಂದು ದಕ್ಷಿಣ ವಿಭಾಗದ ಟ್ರಾಫಿಕ್ ಡಿಸಿಪಿ ಶಿವ ಪ್ರಕಾಶ್ ದೇವರಾಜು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ರಸ್ತೆ ಸಂಚಾರಕ್ಕೆ ತೆರೆದಾಗ, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ದಟ್ಟಣೆಯನ್ನು ಶೇ.25 ರಿಂದ ಶೇ.30 ರಷ್ಟು ಕಡಿಮೆ ಮಾಡುತ್ತದೆ. ಆದರೆ, ಈ ಟ್ರಾಫಿಕ್ ಸಮಸ್ಯೆ ಎಚ್‌ಎಸ್‌ಆರ್ ಲೇಔಟ್ ಮತ್ತು ಬೊಮ್ಮನಹಳ್ಳಿಗೆ ಶಿಫ್ಟ್ ಆಗುವ ಸಾಧ್ಯತೆಯಿದೆ ಹೀಗಾಗಿ ನಾವು ಕಾದು ನೋಡೋಣ ಎಂದು ಹೇಳಿದ್ದಾರೆ.
ಮೂರು ಇಳಿಜಾರುಗಳು ಮತ್ತು ಲೂಪ್‌ಗಳು ಸೇರಿದಂತೆ ಒಟ್ಟು 5.23 ಕಿಮೀ ಉದ್ದದ ರಸ್ತೆಯನ್ನು ಶೀಘ್ರದಲ್ಲೇ ತೆರೆಯಲು ಸಿದ್ಧವಾಗಿದೆ. ಇದು ಸಿಗ್ನಲ್-ಫ್ರೀ ಆಗಿರುತ್ತದೆ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ಹೇಳಿದ್ದಾರೆ.
ಉಡಾವಣೆಗೂ ಮುನ್ನ ಫ್ಲೈಓವರ್‌ಗೆ ಭೇಟಿ ನೀಡಿದಾಗ ರಾಗಿಗುಡ್ಡದಿಂದ ಸಿಎಸ್‌ಬಿ ಜಂಕ್ಷನ್‌ವರೆಗೆ 3.3 ಕಿಮೀ ಉದ್ದದ ಹೊಸ 20 ಮೀಟರ್ ಅಗಲದ ರಸ್ತೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇಲ್ಲಿ ಐದು ರ್ಯಾಂಪ್ಸ್ ಯೋಜಿಸಲಾಗಿದೆ. ಎ, ಬಿ ಮತ್ತು ಸಿ ರಾಂಪ್‌ಗಳನ್ನು ಈಗ ತೆರೆಯಲಾಗಿದ್ದರೂ, ನಾವು ಮಾರ್ಚ್ 2025 ರೊಳಗೆ ಡಿ ಮತ್ತು ಇ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಎ’ ರ‍್ಯಾಂಪ್ ಸಿಎಸ್‌ಬಿ ಜಂಕ್ಷನ್‌ನಿಂದ ಹೊಸೂರಿನವರೆಗಿನ ಹೊಸ ರಸ್ತೆಯ ವಿಸ್ತರಣೆಯಾಗಿದೆ. ಈ ಜಂಕ್ಷನ್‌ನಲ್ಲಿ, ರಸ್ತೆಯು ಎಚ್‌ಎಸ್‌ಆರ್ ಲೇಔಟ್‌ಗೆ ಕವಲೊಡೆಯುತ್ತದೆ, ಇದನ್ನು 'ಸಿ' ರಾಂಪ್ ಮಾಡುತ್ತದೆ. ‘ಬಿ’ ರ‍್ಯಾಂಪ್ ಫ್ಲೈಓವರ್‌ನ ನೆಲಮಟ್ಟವನ್ನು ‘ಎ’ ರಾಂಪ್‌ಗೆ ಸಂಪರ್ಕಿಸುತ್ತದೆ. ರ್ಯಾಂಪ್ ಗಳಲ್ಲಿ ಲೂಪ್‌ಗಳನ್ನು ಜೋಡಿಸಲಾಗಿದೆ ಎಂದು ಬಿಎಂಆರ್ ಸಿಎಎಲ್ ಅಧಿಕಾರಿ ತಿಳಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಇಳಿಜಾರುಗಳು ಇನ್ನೂ ಪೂರ್ಣಗೊಂಡಿಲ್ಲ. ‘ಡಿ’ ರ‍್ಯಾಂಪ್ ಎಚ್‌ಎಸ್‌ಆರ್ ಲೇಔಟ್‌ನಿಂದ ರಾಗಿಗುಡ್ಡಕ್ಕೆ ಸಂಪರ್ಕ ಕಲ್ಪಿಸಿದರೆ, ‘ಇ’ ರಾಂಪ್ ಬಿಟಿಎಂ ಲೇಔಟ್‌ನಿಂದ ಫ್ಲೈಓವರ್‌ನ ಮೊದಲ ಹಂತಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಹಳದಿ ಲೈನ್ ಮತ್ತು ಪಿಂಕ್ ಲೈನ್ (ನಾಗವಾರದಿಂದ ಕಾಳೇನ ಅಗ್ರಹಾರ) ಗಾಗಿ ಜಯದೇವ ಇಂಟರ್ ಚೇಂಜ್ ನಿಲ್ದಾಣವನ್ನು ನಿರ್ಮಿಸಲು BMRCL ಜೂನ್ 2020 ರಲ್ಲಿ ಐಕಾನಿಕ್ ಜಯದೇವ ಮೇಲ್ಸೇತುವೆಯನ್ನು ಕೆಡವಿತ್ತು, ಹೀಗಾಗಿ ಇಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ.
ಫ್ಲೈಓವರ್ ಹಲವು ಗಡುವುಗಳನ್ನು ಕಳೆದುಕೊಂಡಿದೆ. ರಾಜ್ಯ ಸರ್ಕಾರವು ಜನವರಿ 2017 ರಲ್ಲಿ ಯೋಜನೆಯನ್ನು ಅನಾವರಣಗೊಳಿಸಿತು ಮತ್ತು ಫ್ಲೈಓವರ್ ಡಿಸೆಂಬರ್ 2020 ರೊಳಗೆ ಪೂರ್ಣಗೊಳ್ಳಬೇಕಿತ್ತು. ಮೊದಲ ಟೆಂಡರ್ ಅನ್ನು ಏಪ್ರಿಲ್ 2018 ರಲ್ಲಿ ಕರೆಯಲಾಗಿತು, ಆದರೆ, ಒಬ್ಬನೇ ಬಿಡ್ಡರ್ ಇದ್ದ ಕಾರಣ ಅದನ್ನು ಅನುಮೋದಿಸಲಿಲ್ಲ. ಅದು ಕೆಲವು ಬಾರಿ ಮರು-ಟೆಂಡರ್ ಕರೆಯಬೇಕಾಯಿತು. ಇದು ಅಕ್ಟೋಬರ್ 2021, ಜೂನ್ 2022, ಮಾರ್ಚ್ ಮತ್ತು ಡಿಸೆಂಬರ್ 2023 ಮತ್ತು ಮಾರ್ಚ್ 2024 ರ ಗಡುವನ್ನು ಕಳೆದುಕೊಂಡಿದೆ. ಕಳೆದ ವರ್ಷ ಫ್ಲೈಓವರ್ ಸಿದ್ಧವಾಗಿತ್ತು ಆದರೆ ರ್ಯಾಂಪ್ ಗಳು ಪೂರ್ಣಗೊಂಡಿರಲಿಲ್ಲ.
Advertisement