ನಟ ಪ್ರಥಮ್, ಉಮಾಪತಿಗೆ ಅವಾಚ್ಯ ಪದಗಳಿಂದ ನಿಂದನೆ: ಕ್ಷಮೆ ಕೇಳಿದ ದರ್ಶನ್ ಅಭಿಮಾನಿ!

ದರ್ಶನ್ ವಿರುದ್ಧ ಹೇಳಿಕೆ ಆರೋಪದಲ್ಲಿ ನಟ ಪ್ರಥಮ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ ದರ್ಶನ್ ಅಭಿಮಾನಿ ಕೊನೆಗೂ ಕ್ಷಮೆ ಕೇಳಿದ್ದಾನೆ.
ಪ್ರಥಮ್, ದರ್ಶನ್, ದರ್ಶನ್ ಅಭಿಮಾನಿ ಸಾಂದರ್ಭಿಕ ಚಿತ್ರ
ಪ್ರಥಮ್, ದರ್ಶನ್, ದರ್ಶನ್ ಅಭಿಮಾನಿ ಸಾಂದರ್ಭಿಕ ಚಿತ್ರ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ವಿಚಾರಣೆಗೆ ನಟ ದರ್ಶನ್ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿದ್ದಾಗ ಹೊರಗಡೆ ಜಮಾಯಿಸಿದ್ದ ಕೆಲ ಅಭಿಮಾನಿಗಳು ರಂಪ ರಾದ್ದಾಂತ ಮಾಡಿದ್ದರು. ಈ ವೇಳೆ ದರ್ಶನ್ ವಿರುದ್ಧ ಹೇಳಿಕೆ ಆರೋಪದಲ್ಲಿ ನಟ ಪ್ರಥಮ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ ದರ್ಶನ್ ಅಭಿಮಾನಿ ಕೊನೆಗೂ ಕ್ಷಮೆ ಕೇಳಿದ್ದಾನೆ. ಆತ ವೀಡಿಯೋ ಮಾಡಿ ಇಬ್ಬರ ಕ್ಷಮೆ ಕೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ಹಂಚಿಕೊಂಡು ಪ್ರಥಮ್ ಪೋಸ್ಟ್ ಮಾಡಿದ್ದಾರೆ.

ಪ್ರಥಮ್, ದರ್ಶನ್, ದರ್ಶನ್ ಅಭಿಮಾನಿ ಸಾಂದರ್ಭಿಕ ಚಿತ್ರ
ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

ಮಾತಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ. ನಮ್ಮ ಫೋನ್ ಪೊಲೀಸ್ ವಶಪಡಿಸಿಕೊಂಡು ಎಲ್ಲಾ ಕಾಮೆಂಟ್ಸ್, ಮೆಸೇಜ್‌ನ ಗಮನಿಸುತ್ತಿದ್ದಾರೆ. ಯಾರಿಗೋಸ್ಕರವೋ ದಯವಿಟ್ಟು ನಿಮ್ಮ‌ಲೈಫ್‌ನ ಹಾಳುಮಾಡಿಕೊಳ್ಳಬೇಡಿ; ಕನ್ನಡಕ್ಕಾಗಿ, ಕಾವೇರಿಗಾಗಿ ಬೇಕಿದ್ರೆ ಜೈಲಿಗೆ ಹೋಗಿ. ಪುಂಡಾಟ ಆಡ್ಕೊಂಡು ನಿಮ್ ಕುಟುಂಬ ಬೀದಿಗೆ ತರಬೇಡಿ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ" ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

"ನನ್ನ ಹೆಸರು ಚೇತನ್. ನಾನು ದರ್ಶನ್ ಅಭಿಮಾನಿ. ಅವತ್ತು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಬಳಿ ಹೋಗಿದ್ದೆ. ಉಮಾಪತಿ ಹಾಗೂ ಪ್ರಥಮ್ ಅವರ ಬಗ್ಗೆ ಮಾತನಾಡಿದ್ದೆ. ಕಾನೂನು ಪ್ರಕಾರ ಏನಿದೆ, ನಾನು ಅವರಿಗೆ ತಲೆ ಬಾಗುತ್ತೇನೆ. ನನ್ನಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಿಬಿಡಿ" ಎಂದು ಕೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com