ರಾಜ್ಯದ ಜನತೆಗೆ ಗಾಯದ ಮೇಲೆ ಬರೆ: ನಂದಿನಿ ಹಾಲಿನ ದರ 2 ರೂ. ಏರಿಕೆ; ನಾಳೆಯಿಂದಲೇ ಜಾರಿ

ಕೆಎಂಎಫ್‌ ಇಡೀ ರಾಷ್ಟ್ರದಲ್ಲಿ ಅತಿ ದೊಡ್ಡ ಎರಡನೇ ದೊಡ್ಡ ಹಾಲಿನ ಮಂಡಳಿಯಾಗಿದೆ. 98 ಲಕ್ಷದ 17 ಸಾವಿರ ಲೀಟರ್ ಹಾಲು ನಮ್ಮಲ್ಲಿ ಶೇಖರಣೆ ಆಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ ನಂದಿನಿ ಹಾಲಿನ ದರಗಳನ್ನು ಏರಿಕೆ ಮಾಡಿದೆ. ಪ್ರತಿ ಲೀಟರ್‌ಗೆ 2 ರುಪಾಯಿ ಏರಿಕೆ ಮಾಡಲಾಗಿದ್ದು, ಒಂದು ಲೀಟರ್‌ ಹಾಲಿನ ದರ ನಾಳೆಯಿಂದ 44 ರೂ. ಆಗುತ್ತಿದೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಂದಿನಿ ಹಾಲಿನ ದರ ಹೆಚ್ಚಿಸಿದೆ ಎಂದು ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಲೀಟರ್‌ ಹಾಲಿಗೆ 2 ರೂ.ಏರಿಕೆ ಮಾಡಲಾಗಿದೆ. ಹಾಗೂ ಅರ್ಧ ಲೀಟರ್‌ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ. ಆದರೆ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್‌ (1 ಲೀಟರ್)‌ ಪ್ಯಾಕೆಟ್‌ ಹಾಲು ಇನ್ಮುಂದೆ 1,050 ಎಂಎಲ್‌ ಹಾಗೂ ಅರ್ಧ ಲೀಟರ್‌ ಪ್ಯಾಕೆಟ್‌ ಹಾಲು 550 ಎಂಎಲ್‌ ಹೆಚ್ಚುವರಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ಕೆಎಂಎಫ್‌ ಇಡೀ ರಾಷ್ಟ್ರದಲ್ಲಿ ಅತಿ ದೊಡ್ಡ ಎರಡನೇ ದೊಡ್ಡ ಹಾಲಿನ ಮಂಡಳಿಯಾಗಿದೆ. 98 ಲಕ್ಷದ 17 ಸಾವಿರ ಲೀಟರ್ ಹಾಲು ನಮ್ಮಲ್ಲಿ ಶೇಖರಣೆ ಆಗುತ್ತಿದೆ. ಒಂದು ಕೋಟಿ ಲೀಟರ್ ಹಾಲಿನ ಶೇಖರಣೆ ಮಾಡಲು ಸಿದ್ಧರಾಗಿದ್ದೇವೆ. 27 ಲಕ್ಷ ಹಾಲು ಉತ್ಪಾದಕ ರೈತರಿಂದ ನಮಗಿದು ಸಾಧ್ಯವಾಗಿದೆ. 30 ಲಕ್ಷ ಲೀಟರ್ ಹಾಲು, ಹಾಲಿನ ಪೌಡರ್‌ಗೆ ಮೀಸಲಾಗಿದೆ ಎಂದು ಭೀಮಾ ನಾಯ್ಕ್‌ ಮಾಹಿತಿ ನೀಡಿದ್ದಾರೆ. ಬೇರೆ ರಾಜ್ಯಗಳಿಗೆ ಹಾಲಿನದರ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಪ್ಯಾಕೆಟ್ ಹಾಲಿನ ಬೆಲೆ ಕಡಿಮೆ ಇದೆ ಎಂದು ಹೇಳಿದ್ದಾರೆ. ನಾಳೆಯಿಂದಲೇ ಪರಿಷೃತ ಹಾಲಿನ ದರಗಳು ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಜಾಗತಿಕ ಮಾರುಕಟ್ಟೆಗೆ ನಂದಿನಿ ಬ್ರಾಂಡ್‌ ವಿಸ್ತರಣೆ: ಕೆಎಂಎಫ್‌ ಎಂಡಿ ಎಂಕೆ ಜಗದೀಶ್

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com