Karnataka DGP ಕಮಲ್ ಪಂತ್ ನಿವೃತ್ತಿ; ಹಿರಿಯ ಅಧಿಕಾರಿ ಪ್ರಣಬ್ ಮೊಹಾಂತಿ ನೇಮಕ ಸಾಧ್ಯತೆ

ಕಮಲ್ ಪಂತ್(DGP) ಅವರು ಆಗಸ್ಟ್ 1, 2020 ರಂದು ಉನ್ನತ ಹುದ್ದೆಯನ್ನು ಸ್ವೀಕರಿಸಿದ 10 ದಿನಗಳ ನಂತರ ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು.
ಕಮಲ್ ಪಂತ್
ಕಮಲ್ ಪಂತ್
Updated on

ಬೆಂಗಳೂರು: 1990ರ ವಿಭಾಗದ ಹಿರಿಯ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿ, ಪೊಲೀಸ್ ಮಹಾನಿರ್ದೇಶಕರು(DGP) ಕಮಾಂಡೆಂಟ್ ಜನರಲ್, ಗೃಹ ರಕ್ಷಕರು ಮತ್ತು ನಾಗರಿಕ ರಕ್ಷಣಾ ನಿರ್ದೇಶಕರಾಗಿ 34 ವರ್ಷಗಳ ಸೇವೆ ಸಲ್ಲಿಸಿ ಕಮಲ್ ಪಂತ್ ಅವರು ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ. 1994 ರ ಬ್ಯಾಚ್‌ನ ಐಪಿಎಸ್‌ನ ಹಿರಿಯ-ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP), ಪೊಲೀಸ್ ಕಂಪ್ಯೂಟರ್ ವಿಂಗ್ (PCW) ಪ್ರಣಬ್ ಮೊಹಾಂತಿ ಅವರು ಈ ವಾರ ಡಿಜಿಪಿಯಾಗಿ ಬಡ್ತಿ ಪಡೆಯುವ ಸಾಧ್ಯತೆಯಿದೆ.

ಕಮಲ್ ಪಂತ್(DGP) ಅವರು ಆಗಸ್ಟ್ 1, 2020 ರಂದು ಉನ್ನತ ಹುದ್ದೆಯನ್ನು ಸ್ವೀಕರಿಸಿದ 10 ದಿನಗಳ ನಂತರ ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಆಗಸ್ಟ್ 11 ರಂದು ಬೆಂಗಳೂರು ಪೂರ್ವ ಭಾಗದಲ್ಲಿ ಕಾಂಗ್ರೆಸ್ ನ ಪುಲಕೇಶಿ ನಗರ ಶಾಸಕನ ಸೋದರಳಿಯನ ಅತ್ಯಾಚಾರದ ಪೋಸ್ಟ್‌ನಿಂದ ಭಾರೀ ಗಲಭೆಯೆದ್ದು, 2000 ಕ್ಕೂ ಹೆಚ್ಚು ಜನರ ಗುಂಪಿನೊಂದಿಗೆ ಡಿಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯನ್ನು ಧ್ವಂಸಗೊಳಿಸಿದ್ದರು. ಶಾಸಕರ ಮನೆಗೆ ಕೂಡ ಬೆಂಕಿ ಹಚ್ಚಿದ್ದರು.

ಇದು ಕೋವಿಡ್ -19 ಸಾಂಕ್ರಾಮಿಕದ ಮಧ್ಯದಲ್ಲಿ ನಡೆದ ಘಟನೆಯಾಗಿದ್ದರಿಂದ ಕಮಲ್ ಪಂತ್ ಅವರಿಗೆ ಅಗ್ನಿಪರೀಕ್ಷೆಯಾಗಿತ್ತು. ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಕೋವಿಡ್-19 ಸಾಂಕ್ರಾಮಿಕ ಪ್ರೋಟೋಕಾಲ್ ನ್ನು ಅನುಸರಿಸಿ ಕ್ವಾರಂಟೈನ್‌ನಲ್ಲಿದ್ದರು. ಗಲಭೆಗಳನ್ನು ನಿಯಂತ್ರಣಕ್ಕೆ ತರಲಾಯಿತು ಆದರೆ ಪೊಲೀಸರು, ಮಾಧ್ಯಮದವರು ಮತ್ತು ಇತರರು ಸೇರಿದಂತೆ ಅನೇಕರು ಬೆಂಕಿಯಲ್ಲಿ ಗಾಯಗೊಂಡರು. ಅಂದು ರಾತ್ರಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು,

ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ, ಪಂತ್ ಮತ್ತೊಂದು ದೊಡ್ಡ ಬಿಕ್ಕಟ್ಟನ್ನು ಎದುರಿಸಿದರು -- ಡ್ರಗ್ಸ್ ಕೇಸಿನಲ್ಲಿ ಸ್ಯಾಂಡಲ್ ವುಡ್ ನ ಅನೇಕ ನಟ-ನಟಿಯರು ಸಿಕ್ಕಿಹಾಕಿಕೊಂಡಿದ್ದರು. ಬಿಟ್‌ಕಾಯಿನ್ ಹಗರಣದ ನಂತರ ಕಮಿಷನರ್ ಆಗಿ ಅವರ ಅವಧಿಯನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು. ಹ್ಯಾಕರ್ ಶ್ರೀಕೃಷ್ಣ ಖಾತೆಯಿಂದ ಯಾವುದೇ ಬಿಟ್‌ಕಾಯಿನ್‌ಗಳು ವರ್ಗಾವಣೆಯಾಗಿಲ್ಲ ಅಥವಾ ಯಾವುದೇ ಬಿಟ್‌ಕಾಯಿನ್ ಕಳೆದುಹೋಗಿಲ್ಲ ಎಂದು ಅವರು ಆಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು.

ಕಮಲ್ ಪಂತ್
ಕರ್ನಾಟಕ ಅಗ್ನಿಶಾಮಕ ಇಲಾಖೆಗೂ ಸುಡುವ ಬೇಸಿಗೆ, ಬರ, ನೀರಿನ ಬವಣೆ; ಕಮಲ್ ಪಂತ್ ಕೊಟ್ಟ ಸಲಹೆ ಏನು?

ಕಠಿಣ ಅಧಿಕಾರಿ ಎಂದು ಹೆಸರುವಾಸಿಯಾಗಿರುವ ಕಮಲ್ ಪಂತ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಕೆಲವು ಸೂಕ್ಷ್ಮ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. 2015ರಲ್ಲಿ ಕಾರಾಗೃಹ ಎಡಿಜಿಪಿಯಾಗಿ, ಲೋಕಾಯುಕ್ತ ಕಚೇರಿಯಲ್ಲಿ ನಡೆದಿದ್ದ ಬಹುಕೋಟಿ ಭ್ರಷ್ಟಾಚಾರ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಅವರು, ಅಂದಿನ ಲೋಕಾಯುಕ್ತರ ಪುತ್ರ ಹಾಗೂ ಇತರ ಆರೋಪಿಗಳ ಪಟ್ಟಿ ಸಲ್ಲಿಸಿದ್ದರು.

ಎಡಿಜಿಪಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP), ಅವರು 2016 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನ್‌ಸ್ಟೆಬಲ್‌ಗಳನ್ನು (PC) ಒಳಗೊಂಡಿರುವ ಗ್ರೂಪ್ 'ಸಿ' ಪೊಲೀಸ್ ಸಿಬ್ಬಂದಿ, ರಾಜ್ಯದಲ್ಲಿ ಹೆಡ್ ಕಾನ್‌ಸ್ಟೆಬಲ್‌ಗಳು (HCs) ಮತ್ತು ಸಹಾಯಕ ಸಬ್-ಇನ್‌ಸ್ಪೆಕ್ಟರ್‌ಗಳು (ASIs)ಗಳ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ರಚಿಸಲಾದ ಔರಾದ್ಕರ್ ಸಮಿತಿಯ ಸದಸ್ಯರಾಗಿದ್ದರು.

ಉತ್ತರಪ್ರದೇಶದ ಭಾಗವಾಗಿದ್ದ ಉತ್ತರಾಖಂಡದಲ್ಲಿ ಜನಿಸಿದ ಕಮಲ್ ಪಂತ್ ದೆಹಲಿಯಲ್ಲಿ ಬೆಳೆದರು. 1992 ರಲ್ಲಿ ಅವರ ಕೇಡರ್ ರಾಜ್ಯವಾದ ಕರ್ನಾಟಕದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಶಿವಮೊಗ್ಗದಲ್ಲಿ ಸೇವೆ ಆರಂಭಿಸಿದ್ದರು. ನಾನು ಇಂದು ಏನಾಗಿದ್ದರೂ ನನ್ನ ಪೊಲೀಸ್ ಸೇವೆಯಿಂದ. ನನ್ನ ವೃತ್ತಿಜೀವನದುದ್ದಕ್ಕೂ ನನಗೆ ದೊರೆತ ಮನ್ನಣೆ ಮತ್ತು ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com