ಸರ್ಜಾಪುರ To ಹೆಬ್ಬಾಳ 3A ಹಂತದ ನಮ್ಮ ಮೆಟ್ರೋ ಮಾರ್ಗ 2031ರ ವೇಳೆಗೆ ಪೂರ್ಣ: BMRCL

ನಮ್ಮ ಮೆಟ್ರೋ ಮೂರನೇ ಹಂತದ 3ಎ ಲೈನ್‌ನ ಕಾಮಗಾರಿ 2031ಕ್ಕೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಬಿಎಂಆರ್ ಸಿಎಲ್ ತಿಳಿಸಿದೆ.
ನಮ್ಮ ಮೆಟ್ರೋ
ನಮ್ಮ ಮೆಟ್ರೋ
Updated on

ಬೆಂಗಳೂರು: ನಮ್ಮ ಮೆಟ್ರೋ ಮೂರನೇ ಹಂತದ 3ಎ ಲೈನ್‌ನ ಕಾಮಗಾರಿ 2031ಕ್ಕೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಬಿಎಂಆರ್ ಸಿಎಲ್ ತಿಳಿಸಿದೆ. ಸರ್ಜಾಪುರದಿಂದ ಹೆಬ್ಬಾಳದವರೆಗಿನ 36.5 ಕಿ.ಮೀ ಉದ್ದದ 3ಎ ಲೈನ್‌ನ ಕಾಮಗಾರಿಗೆ 2031 ರ ಗಡುವು ನಿಗದಿಪಡಿಸಲಾಗಿದೆ. 18 ತಿಂಗಳ ವಿಳಂಬದ ನಂತರ, BMRCL ಕಳೆದ ವಾರ ರಾಜ್ಯ ಸರ್ಕಾರಕ್ಕೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಿತ್ತು.

ಈ ಯೋಜನೆಗೆ 26,405 ಕೋಟಿ ರೂಪಾಯಿ ವೆಚ್ಚವಾಗಲಿದೆ ಮತ್ತು 28 ನಿಲ್ದಾಣಗಳನ್ನು ಹೊಂದಿರುತ್ತದೆ ಎಂದು ಬಹು ಮೆಟ್ರೋ ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23ರ ಬಜೆಟ್ ಭಾಷಣದಲ್ಲಿ ಈ ಮಾರ್ಗದ ಬಗ್ಗೆ ಘೋಷಣೆ ಮಾಡಿದ್ದು, ಡಿಪಿಆರ್ ಸಲ್ಲಿಸಲು ಎಂಟು ತಿಂಗಳ ಗಡುವನ್ನು ನಿಗದಿಪಡಿಸಿದ್ದರು. ಆಗ ಯೋಜನಾ ವೆಚ್ಚವನ್ನು 16,000 ಕೋಟಿ ರೂ. ಎಂದು ನಮೂದಿಸಲಾಗಿಯತ್ತು. ಆದರೆ ನಂತರ ಅದು ಹೆಚ್ಚಾಗಿದೆ.

DRP ಸಿದ್ಧಪಡಿಸಲು BMRCL ರೀನಾ ಕನ್ಸಲ್ಟಿಂಗ್‌ಗೆ ಗುತ್ತಿಗೆ ನೀಡಿತ್ತು ಎಂದು ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದೆ, “ಯೋಜನೆಯು ಕೋರಮಂಗಲ ಎರಡನೇ ಬ್ಲಾಕ್‌ನಿಂದ ಪಶುವೈದ್ಯಕೀಯ ಕಾಲೇಜುವರೆಗಿನ 14.4-ಕಿಮೀ ಸುರಂಗದಲ್ಲಿ 11 ನಿಲ್ದಾಣಗಳನ್ನು ಹೊಂದಿರುತ್ತದೆ. ಇದು 22.1 ಕಿಮೀ ಎತ್ತರದ ಕಾರಿಡಾರ್‌ನಲ್ಲಿ 17 ನಿಲ್ದಾಣಗಳನ್ನು ಹೊಂದಿರುತ್ತದೆ, ಇದು ಸರ್ಜಾಪುರದಿಂದ ಕೋರಮಂಗಲ ಎರಡನೇ ಬ್ಲಾಕ್‌ಗೆ ಚಲಿಸುತ್ತದೆ ಮತ್ತು ಪಶುವೈದ್ಯಕೀಯ ಕಾಲೇಜಿನಿಂದ ಹೆಬ್ಬಾಳದವರೆಗೆ ಸುರಂಗದ ಮೂಲಕ ಸಾಗುತ್ತದೆ.

ನಮ್ಮ ಮೆಟ್ರೋ
ನಮ್ಮ ಮೆಟ್ರೋ ಹಸಿರು ಲೈನ್ ವಿಸ್ತರಣೆ: ನಾಗಸಂದ್ರ-ಮಾದಾವರ ಮಾರ್ಗ ಸೆಪ್ಟೆಂಬರ್ ಅಂತ್ಯದ ವೇಳೆಗೆ ಆರಂಭ!

ಮಾರ್ಗದ ಕಾರ್ಯಾರಂಭವು BMRCL ಪ್ರಯಾಣಿಕರನ್ನು ಹೆಚ್ಚಿಸಲು ನಿರೀಕ್ಷಿಸಲಾಗಿದೆ. “ಅಧ್ಯಯನಗಳ ಪ್ರಕಾರ, ಈ ಮಾರ್ಗವು 2031 ರಲ್ಲಿ 6.21 ಲಕ್ಷ ದೈನಂದಿನ ಪ್ರಯಾಣಿಕರನ್ನು ಹೊಂದುವ ನಿರೀಕ್ಷೆಯಿದೆ; 2041 ರಲ್ಲಿ 7.2 ಲಕ್ಷ; 2051 ರಲ್ಲಿ 8.51 ಲಕ್ಷ ಮತ್ತು 2061 ರ ವೇಳೆಗೆ 9.5 ಲಕ್ಷ, ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಾರ್ಗಕ್ಕಾಗಿ ಒಟ್ಟು 5,400 ಮರಗಳನ್ನು ಕತ್ತರಿಸಲಾಗುವುದು ಮತ್ತು ಅವುಗಳಲ್ಲಿ ಅರ್ಧವನ್ನು ಬೇರೆಡೆ ಕಸಿ ಮಾಡಲು ನಿರ್ಧರಿಸಲಾಗಿದೆ ಎಂದು ಇನ್ನೊಂದು ಮೂಲಗಳು ತಿಳಿಸಿವೆ. ಮೆಟ್ರೊದ 3ಎ ಲೈನ್ ಎಂಟು ಇಂಟರ್‌ಚೇಂಜ್‌ಗಳನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು. ಸರ್ಜಾಪುರ, ಕಾರ್ಮೆಲಾರಂ, ಇಬ್ಲೂರು, ಅಗರ, ಡೈರಿ ಸರ್ಕಲ್, ಶಾಂತಿನಗರ, ಕೆಆರ್ ಸರ್ಕಲ್ ಮತ್ತು ಹೆಬ್ಬಾಳದಲ್ಲಿ ಇಂಟರ್ ಚೆಂಜ್ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com