ಬೆಂಗಳೂರು: ಮಾರ್ಚ್ 8 ಮಹಾಶಿವರಾತ್ರಿಯಿಂದ ಸಾರ್ವಜನಿಕ ರಜಾದಿನ ಮತ್ತು ವಾರಾಂತ್ಯಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ ಚಿಕ್ಕಬಳ್ಳಾಪುರ ಸುತ್ತಮುತ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅಗ್ಗದ ದರದಲ್ಲಿ ಹವಾ ನಿಯಂತ್ರಿತ ಬಸ್ಸು ಸಂಚಾರ ಸೇವೆ ಆರಂಭಿಸಲಿದೆ.
ಮಹಾ ಶಿವರಾತ್ರಿ ದಿನ ಆರಂಭಿಸಿ ರಜಾ ದಿನಗಳಲ್ಲಿ ಬಿಎಂಟಿಸಿ ಬಸ್ಸು ಮಧ್ಯಾಹ್ನ 12 ಗಂಟೆಗೆ ಹೊರಟು ಭೋಗ ನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ ದೇವಸ್ಥಾನ, ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ, ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ ಮತ್ತು ಇಶಾ ಫೌಂಡೇಶನ್ ಒಳಗೊಂಡು 500 ರೂಪಾಯಿಗೆ ಹವಾನಿಯಂತ್ರಿತ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಮತ್ತೆ ರಾತ್ರಿ 9.30ಕ್ಕೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆತಂದು ಬಿಡಲಿದ್ದಾರೆ.
Advertisement