ಚಿಕ್ಕಮಗಳೂರು: ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಬಜರಂಗದಳ ಮುಖಂಡನಿಗೆ ಗಡಿಪಾರು ನೋಟಿಸ್

ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಬಜರಂಗದಳ ಮುಖಂಡನಿಗೆ ಗಡಿಪಾರು ನೋಟಿಸ್ ನೀಡಲಾಗಿದೆ. ತುಡುಕೂರು ಮಂಜುಗೆ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಬಜರಂಗದಳ ಮುಖಂಡನಿಗೆ ಗಡಿಪಾರು ನೋಟಿಸ್ ನೀಡಲಾಗಿದೆ. ತುಡುಕೂರು ಮಂಜುಗೆ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದೆ. ಬಜರಂಗದಳ ಜಿಲ್ಲಾ ಘಟಕದ ಮಾಜಿ ಸಂಚಾಲಕ ಮಂಜು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಗಲಭೆ ಸೃಷ್ಟಿಸುವ ಕಾರಣ ನೀಡಿ ಗರಿಪಾರು ನೋಟಿಸ್ ಜಾರಿ ಮಾಡಲಾಗಿದೆ.

17 ಕಾರಣಗಳನ್ನು ನೀಡಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಾರ್ಚ್ 14 ರಂದು ಜಿಲ್ಲಾಧಿಕಾರಿ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ಸಂಘಟನೆ ಹೋರಾಟದಲ್ಲಿ ಮಂಜು ವಿರುದ್ಧ 24 ಕೇಸ್ ಗಳು ದಾಖಲಾಗಿದ್ದು, . ಇವುಗಳ ಪೈಕಿ 22 ಪ್ರಕರಣಗಳು ಖುಲಾಸೆಯಾಗಿವೆ. ಜಿಲ್ಲಾಡಳಿತ ನೀಡಿರುವ ಗಡಿಪಾರು ನೋಟಿಸ್ ಭಾರಿ ಚರ್ಚೆಗೆ ಕಾರಣವಾಗಿದೆ.

ಚಿಕ್ಕಮಗಳೂರು ತಾಲ್ಲೂಕು, ಆಲ್ಲೂರು ಹೋಬಳಿ, ಶುಡುಕೂರು ಗ್ರಾಮದ ವಾಸಿ ತುಡುಕೂರು ಮಂಜುನಾಥ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸಮಾಜಘಾತುಕ ಚಟುವಟಿಕೆಯಿಂದ ಸಾರ್ವಜನಿಕ ಶಾಂತಿ, ನೆಮ್ಮದಿ ಹಾಗೂ ಭದ್ರತೆ ಭಂಗ ಮಾಡಿ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸುವ ದೃಷ್ಠಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55(ಎ)(ಬಿ) ಅಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಪತ್ತೆ, ಗಡಿಪಾರು: ವಿಧಾನಪರಿಷತ್ತಿನಲ್ಲಿ ಡಾ. ಜಿ.ಪರಮೇಶ್ವರ್

ಮಂಜುನಾಥ್​ ವಿರುದ್ಧು 17 ಕ್ರಿಮಿನಲ್ ಪ್ರಕರಣಗಳು ಮತ್ತು 7 ಮುಂಜಾಗ್ರತಾ ಪ್ರಕರಣಗಳು ದಾಖಲಾಗಿವೆ. ಅಮಾಯಕ ಯುವ ಜನರನ್ನು ಪುಚೋದಿಸಿ ಅವರಲ್ಲಿ ಮತೀಯ ದ್ವೇಷವನ್ನು ತುಂಬಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಮರ್ಥ್ಯ ಹೊಂದಿದ್ದಾನೆ.

ಭಾರತದ ಈಶಾನ್ಯ ರಾಜ್ಯಗಳಿಂದ ಬಹಳಷ್ಟು ಜನ ಕಾರ್ಮಿಕರು ಚಿಕ್ಕಮಗಳೂರು, ದಿನಗೂಲಿ ಕಾರ್ಮಿಕರಾಗಿ ಕೆಲಸಮಾಡುತ್ತಿದ್ದು ಅವರನ್ನು ಬಾಂಗ್ಲಾದೇಶದಿಂದ ಆಕ್ರಮವಾಗಿ ವಲಸೆ ಬಂದವರೆಂದು ಬಿಂಬಿಸಿ ಅಪಪ್ರಚಾರ ಮಾಡಿ ಅವರ ಮೇಲೆ ಆಗಾಗ ಹಲ್ಲೆ ನಡೆಸಿದ್ದಾರೆ ಎಂದು ಕಾರಣ ನೀಡಿ ಗಡಿಪಾರು ಮಾಡಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com