ಒಎನ್ ಜಿಸಿ ಪತ್ತೆ ಹಚ್ಚಿದ ಕಚ್ಚಾತೈಲದ ಮೊದಲ ಸರಕು ಎಂಆರ್ ಪಿಎಲ್ ಗೆ ಆಗಮನ

ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ಒಎನ್‌ಜಿಸಿ ಹೊಸದಾಗಿ ಪರಿಶೋಧಿಸಿದ ಕಚ್ಚಾ ತೈಲದ ಮೊದಲ ಸರಕನ್ನು ಶನಿವಾರ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (ಎಂಆರ್‌ಪಿಎಲ್) ಸ್ವೀಕರಿಸಲಾಯಿತು.
 ಸ್ವರ್ಣ ಸಿಂಧು ಹಡಗು
ಸ್ವರ್ಣ ಸಿಂಧು ಹಡಗು
Updated on

ಮಂಗಳೂರು: ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ಒಎನ್‌ಜಿಸಿ ಹೊಸದಾಗಿ ಪರಿಶೋಧಿಸಿದ ಕಚ್ಚಾ ತೈಲದ ಮೊದಲ ಸರಕನ್ನು ಶನಿವಾರ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (ಎಂಆರ್‌ಪಿಎಲ್) ಸ್ವೀಕರಿಸಲಾಯಿತು. KG 98/2 ಹೆಸರಿನ ಈ ಹೊಸ ಕಚ್ಚಾ ತೈಲವನ್ನು ಸ್ವರ್ಣ ಸಿಂಧು ಎಂಬ ಹಡಗಿನ ಮೂಲಕ ಮಂಗಳೂರಿಗೆ ತರಲಾಯಿತು. ಇದಕ್ಕೆ ಮಾರ್ಚ್ 2 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ಈ ದೇಶೀಯ ಕಚ್ಚಾ ತೈಲವನ್ನು ಕೇಂದ್ರದ ಆತ್ಮನಿರ್ಭರ ಭಾರತ್ ಮಿಷನ್ ಗೆ ಕೊಡುಗೆ ನೀಡುತ್ತಿರುವ ಎಂಆರ್‌ಪಿಎಲ್‌ನಲ್ಲಿ ವಿವಿಧ ಇಂಧನಗಳು ಮತ್ತು ಪೆಟ್ರೋಕೆಮಿಕಲ್‌ಗಳಾಗಿ ಪರಿವರ್ತಿಸಲು ಸಜ್ಜಾಗಿದೆ ಎಂದು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ಸುದ್ದಿಗಾರರಿಗೆ ತಿಳಿಸಿದರು.

ಮೂರು ಪ್ರತ್ಯೇಕ ಕಚ್ಚಾ ಶುದ್ಧೀಕರಣ ಘಟಕಗಳು ಮತ್ತು ಅಗತ್ಯ ಬೆಂಬಲ ಮೂಲಸೌಕರ್ಯವನ್ನು ಹೊಂದಿರುವ ಕರಾವಳಿ ಸಂಸ್ಕರಣಾಗಾರವು ಹೊಸ ಕಚ್ಚಾ ತೈಲಗಳನ್ನು ಸಂಸ್ಕರಿಸುತ್ತದೆ. ಇದು ಜಗತ್ತಿನಾದ್ಯಂತ 250 ಕ್ರೂಡ್‌ಗಳ ವೈವಿಧ್ಯಮಯ ಕಚ್ಚಾ ತೈಲವನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಅದರಲ್ಲಿ 100 ಕ್ಕೂ ಹೆಚ್ಚು ಮಂಗಳೂರಿನ ಸಂಸ್ಕರಣಾಗಾರ ಸಂಕೀರ್ಣದಲ್ಲಿ ಈಗಾಗಲೇ ಸಂಸ್ಕರಿಸಲಾಗಿದೆ.

 ಸ್ವರ್ಣ ಸಿಂಧು ಹಡಗು
ಒಎನ್ ಜಿಸಿ ಉದ್ಯೋಗಿಗಳ ಅಪಹರಣ ಪ್ರಕರಣ: ಪೊಲೀಸ್ ಪೇದೆ ಸೇರಿ ಮೂವರ ಬಂಧನ

ಒಎನ್ ಜಿಸಿ ರೂ. 30,000 ಕೋಟಿ ಹೂಡಿಕೆಯೊಂದಿಗೆ ನೈಸರ್ಗಿಕ ಮತ್ತು ತಾಂತ್ರಿಕ ಸವಾಲುಗಳಿಂದ ತುಂಬಿರುವ ಆಳವಾದ ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ಕಚ್ಚಾ ತೈಲವನ್ನು ಪರಿಶೋಧಿಸಲಾಗಿದೆ. ಕಚ್ಚಾತೈಲ ಉತ್ಪಾದನೆಯನ್ನು ಪ್ರತಿದಿನ ರೂ. 45,000 ಬಿಒಪಿಡಿಗೆ ಮತ್ತು ನೈಸರ್ಗಿಕ ಅನಿಲವನ್ನು 10 ಮಿಲಿಯನ್ ಎಸ್ ಸಿಎಂಗೆ ಹೆಚ್ಚಿಸುವ ನಿರೀಕ್ಷೆಯಿದೆ.

ಒಎನ್‌ಜಿಸಿ ಗ್ರೂಪ್‌ನ ಬದ್ಧತೆ ಮತ್ತು ತಾಂತ್ರಿಕ ಸಾಮರ್ಥ್ಯಗಳಿಂದಾಗಿ ಕಚ್ಚಾ ತೈಲ ಉತ್ಪಾದನೆಯಲ್ಲಿ ರಾಷ್ಟ್ರ ಸ್ವಯಂ ಶಕ್ತಿ ಮೇಲೆ ಅವಲಂಬನೆಯಲ್ಲಿ ಕೊಡುಗೆ ನೀಡಿದೆ. ಈ ಕಚ್ಚಾ ತೈಲವು ಅದರ ಉತ್ತುಂಗದಲ್ಲಿ ಭಾರತದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನಾ ಸಾಮರ್ಥ್ಯದಲ್ಲಿ ಶೇ. 7 ರಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಕಾಮತ್ ಮಾಹಿತಿ ನೀಡಿದರು.

MRPL ರಿಫೈನರಿ ನಿರ್ದೇಶಕ, ಸಂಜಯ್ ವರ್ಮಾ ಮಾತನಾಡಿ, ಭಾರತದ ಇಂಧನ ಕ್ಷೇತ್ರದಲ್ಲಿ ಅದರ ಪಾತ್ರದ ಬಗ್ಗೆ ವಿವರಿಸಿದರು.ಇದೇ ವೇಳೆ MRPL ಫಲ್ಗುಣಿ ನದಿಯನ್ನು ಕಲುಷಿತಗೊಳಿಸುತ್ತಿದೆ ಎಂಬ ಆರೋಪವನ್ನು MRPL ಎಂಡಿ ಕಾಮತ್ ನಿರಾಕರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com