ಗ್ಯಾಸ್ ಸಿಲಿಂಡರ್ ದರ ಇಳಿಕೆ ಮಾಡಿದವನಿಗೆ ನನ್ನ ಕಾಲಲ್ಲಿರುವುದನ್ನು ತೆಗೆದು ಹೊಡೆಯುತ್ತೇನೆ: ಕರ್ನಾಟಕ ಕಾಂಗ್ರೆಸ್ ನಾಯಕ

ಲೋಕಸಭೆ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳ ನಡುವಿನ ಮಾತಿನ ಸಮರ ತೀವ್ರಗೊಂಡಿದ್ದು ಕಾಂಗ್ರೆಸ್ ಮುಖಂಡ ಜಿಎಸ್ ಮಂಜುನಾಥ್ ಎಂಬಾತ ಪ್ರಧಾನಿ ಮೋದಿಯವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.
ಪ್ರಧಾನಿ ಮೋದಿ-ಜಿಎಸ್ ಮಂಜುನಾಥ್
ಪ್ರಧಾನಿ ಮೋದಿ-ಜಿಎಸ್ ಮಂಜುನಾಥ್

ಚಿತ್ರದುರ್ಗ: ಲೋಕಸಭೆ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳ ನಡುವಿನ ಮಾತಿನ ಸಮರ ತೀವ್ರಗೊಂಡಿದ್ದು ಕಾಂಗ್ರೆಸ್ ಮುಖಂಡ ಜಿಎಸ್ ಮಂಜುನಾಥ್ ಎಂಬಾತ ಪ್ರಧಾನಿ ಮೋದಿಯವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಎಲ್‌ಪಿಜಿ ಬೆಲೆಯನ್ನು 100 ರೂಪಾಯಿ ಇಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯ ವಿರುದ್ಧ ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ.ಎಸ್ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಹೆಸರನ್ನು ತೆಗೆದುಕೊಳ್ಳದಿದ್ದರೂ ಚುನಾವಣೆ ಬರುತ್ತಿದ್ದಂತೆ 100 ರೂಪಾಯಿ ಇಳಿಸಲಾಗಿದೆ. ಪ್ರಧಾನಿಗೆ ತಮ್ಮ ಕಾಲಿಗೆ ಏನು ಧರಿಸಿದ್ದಾರೋ ಅದರಿಂದಲೇ ಹೊಡೆಯುವುದಾಗಿ ಹೇಳಿದ್ದಾರೆ. ಈ ರೀತಿ ಹೇಳಿಕೆ ನೀಡಿರುವ ಜಿಎಸ್ ಮಂಜುನಾಥ್ ಪ್ರಧಾನಿ ಮೋದಿಯವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದರ ಜೊತೆಗೆ ಸಾಮಾನ್ಯ ಜನರಲ್ಲಿಯೂ ಸಹ ಹಾಗೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್ ಹೇಳಿದ್ದೇನು?

ವೇದಿಕೆಯಲ್ಲಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಮಂಜುನಾಥ್, ಚುನಾವಣೆ ಬರುತ್ತಿದ್ದು, ಗ್ಯಾಸ್ ಸಿಲಿಂಡರ್ ಬೆಲೆ 100 ರೂ. ಇಳಿಸಲಾಗಿದೆ. ಆತ ಸಿಕ್ಕರೆ ನನ್ನ ಕಾಲಲ್ಲಿ ಏನಿದೆಯೋ ಅದರಲ್ಲೇ ಹೊಡೆಯುತ್ತೇನೆ. ಈಗೇಕೆ ಇಷ್ಟೆಲ್ಲಾ ಮಾಡುತ್ತಿದ್ದೀರಿ? ನಾನು ಇದನ್ನು ಕಾಂಗ್ರೆಸ್ ನಾಯಕನಾಗಿ ಅಲ್ಲ, ಒಬ್ಬ ಸಾಮಾನ್ಯ ಮನುಷ್ಯನಾಗಿ ಕೇಳುತ್ತಿದ್ದೇನೆ. ನೀವೂ ಈ ಪ್ರಶ್ನೆಯನ್ನು ಕೇಳಬೇಕಾಗುತ್ತದೆ. ಇಲ್ಲದಿದ್ದರೆ ಯಾರೂ ನಿಮ್ಮ ಮಾತನ್ನು ಕೇಳುವುದಿಲ್ಲ. ನಾವು ಪ್ರಶ್ನೆಗಳನ್ನು ಕೇಳಲು ಕಲಿಯದಿದ್ದರೆ, ನಾವು ಸಂಪೂರ್ಣವಾಗಿ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. 15 ದಿನಗಳ ನಂತರ ಚುನಾವಣೆ ನಡೆಯುವಾಗ 100 ರೂಪಾಯಿ ಬೆಲೆ ಇಳಿಸಿದರೆ ನಿಮಗೇಕೆ ಖುಷಿ? ಎಂದು ಪ್ರಶ್ನಿಸಿದ್ದಾನೆ.

ಪ್ರಧಾನಿ ಮೋದಿ-ಜಿಎಸ್ ಮಂಜುನಾಥ್
Women's day: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ 100 ರೂ. ಇಳಿಕೆ: ಮಹಿಳೆಯರಿಗೆ ಪ್ರಧಾನಿ ಮೋದಿ ಗಿಫ್ಟ್‌

ಜಿಎಸ್ ಮಂಜುನಾಥ್ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿರುವ ಬಿಜೆಪಿ ಮುಖಂಡ ಎಸ್.ಪ್ರಕಾಶ್, ಮಂಜುನಾಥ್ ಅವರಂತಹವರು ಸಿದ್ದರಾಮಯ್ಯ ಅವರನ್ನು ಆದರ್ಶವಾಗಿ ಪರಿಗಣಿಸುತ್ತಾರೆ. ಅವರು ರಾಜಕೀಯದ ಮೌಲ್ಯವನ್ನು ಮರೆತು ನಿಂದನೀಯ ಭಾಷೆಯನ್ನು ಬಳಸುತ್ತಾರೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com