ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದ ಬಿಜೆಪಿ, ಆದರೆ ಶೇ.42ರಷ್ಟು ಪದವೀಧರರು ನಿರುದ್ಯೋಗಿ!

ನ್ಯಾಯ ಮತ್ತು ಸಾಮರಸ್ಯದ ವೇದಿಕೆ ಬಹುತ್ವ ಕರ್ನಾಟಕ ಬಿಡುಗಡೆ ಮಾಡಿದ ವರದಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಳೆದ ಬಾರಿ 2019ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ಮುಂದಿನ ವರ್ಷಗಳಲ್ಲಿ ದೇಶದಲ್ಲಿ ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು.

ಅದಾಗಿ 5 ವರ್ಷ ಕಳೆದು 2024ರ ಲೋಕಸಭೆ ಚುನಾವಣೆ ಬಂದಿದೆ. ವಾಸ್ತವ ಏನೆಂದರೆ 25 ವರ್ಷದೊಳಗಿನ ಶೇ.42ರಷ್ಟು ಪದವೀಧರರು ದೇಶದಲ್ಲಿ ನಿರುದ್ಯೋಗಿಗಳಾಗಿದ್ದು, ನ್ಯಾಯ ಮತ್ತು ಸೌಹಾರ್ದತೆಯ ವೇದಿಕೆಯಾಗಿರುವ ಬಹುತ್ವ ಕರ್ನಾಟಕವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್ ಡಿಎ ಮೈತ್ರಿಕೂಟ ಬಗ್ಗೆ ಮೌಲ್ಯಮಾಪನ ಮಾಡಿದೆ. ಉದ್ಯೋಗ ಸೃಷ್ಟಿಯಲ್ಲಿ ಬಿಜೆಪಿ ಸಾಧನೆ ಶೂನ್ಯ ಎಂದು ಆರೋಪಿಸಿದೆ.

ಬಹುತ್ವ ಕರ್ನಾಟಕದ ಪ್ರತಿನಿಧಿಗಳು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ, ಮತದಾರರು ಬುದ್ಧಿವಂತಿಕೆಯಿಂದ ಆಯ್ಕೆ ಮಾಡುವ ಉದ್ದೇಶದಿಂದ, ಅಧಿಕೃತ ಹಕ್ಕುಗಳನ್ನು ಮಂಡಿಸುವ ಮೂಲಕ ಹಾಲಿ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಮೌಲ್ಯಮಾಪನ ಮಾಡುವ 'ಗ್ಯಾರೆಂಟಿ ಚೆಕ್' ಎಂಬ ಶೀರ್ಷಿಕೆಯ ವರದಿಗಳ ಸರಣಿಯನ್ನು ಬಿಡುಗಡೆ ಮಾಡುತ್ತಿದೆ.

ವರದಿಯಲ್ಲಿ ಏನಿದೆ?: ಈ ಸರಣಿಯ ಮೊದಲ ವರದಿಯನ್ನು ನಿನ್ನೆ ಸೋಮವಾರ ಬಿಡುಗಡೆ ಮಾಡಲಾಯಿತು. ಪ್ರಸ್ತುತ ಸರ್ಕಾರದ ಉದ್ಯೋಗ, ವೇತನ ಮತ್ತು ಸರ್ವತೋಮುಖ ಅಭಿವೃದ್ಧಿಯ ಮೌಲ್ಯಮಾಪನವನ್ನು ಮಾಡಲಾಗಿದೆ. 2011-12 ಮತ್ತು 2022-23 ರ ನಡುವೆ 10 ವರ್ಷಗಳಲ್ಲಿ ಉದ್ಯೋಗಿಗಳಲ್ಲಿ ಸ್ವಯಂ ಉದ್ಯೋಗಿಗಳ ಪಾಲು ಏರಿಕೆಯಾಗಿದೆ ಎಂದು ವೇದಿಕೆ ಹೇಳಿದೆ.

ಸಾಂದರ್ಭಿಕ ಚಿತ್ರ
'ಗೃಹಲಕ್ಷ್ಮಿ' ಯೋಜನೆ ಉದ್ಯೋಗ ಸೃಷ್ಟಿ ಪರಿಕಲ್ಪನೆಗೆ ವಿರುದ್ಧವಾಗಿದೆ, ಕಾಂಗ್ರೆಸ್ ನಿಂದ ಬರೀ ಸುಳ್ಳು ಭರವಸೆ: ಬಿಜೆಪಿ ಟೀಕೆ

ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಪುರುಷರು ಮತ್ತು ಮೂರನೇ ಎರಡರಷ್ಟು ಮಹಿಳೆಯರು ಪ್ರಸ್ತುತ 'ಸ್ವಯಂ ಉದ್ಯೋಗಿಗಳಾಗಿದ್ದಾರೆ. ಬಡವರಲ್ಲಿ ಕುಂಠಿತವಾದ ಮನೆಯ ಗಳಿಕೆಯು ಹೆಚ್ಚಿನ ಮಹಿಳೆಯರು ವೇತನರಹಿತ ಸಹಾಯಕರಾಗಿ ಕೆಲಸ ಮಾಡಲು ಪ್ರೇರೇಪಿಸುತ್ತಿದೆ. ಉದಾಹರಣೆಗೆ ಕುಟುಂಬ ಫಾರ್ಮ್‌ಗಳು ಅಥವಾ ಸಣ್ಣ ಅಂಗಡಿಗಳಲ್ಲಿ ಸಂಪಾದನೆ ಇಲ್ಲದೆ ಕೆಲಸ ಮಾಡುವುದು ಅವರಿಗೆ ಬೇರೆ ಯಾವುದೇ ಲಾಭದಾಯಕ ಉದ್ಯೋಗವನ್ನು ಹುಡುಕಲು ಸಾಧ್ಯವಿಲ್ಲ ಎಂದು ವರದಿ ಹೇಳುತ್ತದೆ.

ರಾಷ್ಟ್ರೀಯ ಕನಿಷ್ಠ ವೇತನದಲ್ಲಿ ಶೇಕಡಾ 42ರಷ್ಟು ಬೆಳವಣಿಗೆಯಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ ಎಂದು ವರದಿ ಹೇಳಿದೆ. 2019 ರಲ್ಲಿ ಅನೂಪ್ ಸತ್ಪತಿ ನೇತೃತ್ವದ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ವೇತನದ ತಜ್ಞರ ಸಮಿತಿಯನ್ನು ಪ್ರಾರಂಭಿಸಿದೆ. ಭಾರತದಲ್ಲಿ ರಾಷ್ಟ್ರೀಯ ಕನಿಷ್ಠ ವೇತನವು ದಿನಕ್ಕೆ ಕನಿಷ್ಠ 375 ರೂಪಾಯಿ ಆಗಿರಬೇಕು, ಇದು 2022-23 ರಲ್ಲಿ ವಾರಕ್ಕೆ 3,050 ರೂಪಾಯಿ ಆಗಿದೆ. ಆದರೆ ವಾಸ್ತವವಾಗಿ ಸುಮಾರು 30 ಕೋಟಿ ಕಾರ್ಮಿಕರು ಈ ಮಿತಿಗಿಂತ ಕಡಿಮೆ ಆದಾಯವನ್ನು ಗಳಿಸುತ್ತಾರೆ.

ನಾಮ ಮಾತ್ರದಲ್ಲಿ, ಕಳೆದ 10 ವರ್ಷಗಳಲ್ಲಿ ತಲಾವಾರು GDP ಶೇಕಡಾ 60ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಜನಸಂಖ್ಯೆಯ ಅಗ್ರ ಶೇಕಡಾ 10ರ ಆದಾಯದ ಪಾಲು ಹೆಚ್ಚುತ್ತಿದೆ. ಈಗ ಅದು ಶೇಕಡಾ 60 ಆಗಿದೆ, ಆದರೆ ಇತರರ ಆದಾಯವು ಕಡಿಮೆಯಾಗುತ್ತಿದೆ ಎಂದು ವರದಿ ಹೇಳುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com