ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ಯತ್ನ: ಕೊಡಿಗೆಹಳ್ಳಿ ಪೋಲೀಸರಿಂದ ಗ್ವಾಲಿಯರ್‌ ನಲ್ಲಿ ನಾಲ್ವರ ಬಂಧನ

ಮಧ್ಯಪ್ರದೇಶ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಕೊಡಿಗೇಹಳ್ಳಿ ಪೊಲೀಸರು ಕಳೆದ ಗುರುವಾರ ದೇವಿನಗರದ ಲಕ್ಷ್ಮಿ ಬ್ಯಾಂಕರ್ ಮತ್ತು ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದ ದರೋಡೆ ಯತ್ನದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ವಶ ಪಡಿಸಿಕೊಂಡ ಆಯುಧಗಳು
ಬಂಧಿತ ಆರೋಪಿಗಳಿಂದ ವಶ ಪಡಿಸಿಕೊಂಡ ಆಯುಧಗಳು

ಬೆಂಗಳೂರು: ಮಧ್ಯಪ್ರದೇಶ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಕೊಡಿಗೇಹಳ್ಳಿ ಪೊಲೀಸರು ಕಳೆದ ಗುರುವಾರ ದೇವಿನಗರದ ಲಕ್ಷ್ಮಿ ಬ್ಯಾಂಕರ್ ಮತ್ತು ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದ ದರೋಡೆ ಯತ್ನದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿದ್ದಾರೆ.

ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇಬ್ಬರನ್ನು ಗಾಯಗೊಳಿಸಿದ್ದರು. ಬಂಧಿಸಲ್ಪಟ್ಟ ಮತ್ತೊಬ್ಬ ಆರೋಪಿಗೂ ಬುಲೆಟ್ ಗಾಯಗಳಾಗಿದ್ದು, ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.

ಆರೋಪಿಗಳನ್ನು ಖಾನಾ ಶರ್ಮಾ (23), ಪ್ರದೀಪ್ ಶರ್ಮಾ (37) ಮತ್ತು ಆಶು ಶರ್ಮಾ (27) ಎಂದು ಗುರುತಿಸಲಾಗಿದೆ. ಸೂರಜ್ (30) ಎಂಬಾತ ಗುಂಡಿಗೆ ಬಲಿಯಾದ ಆರೋಪಿಯಾಗಿದ್ದು, ಇನ್ನೋರ್ವ ಆರೋಪಿ ವಿಕಾಸ್ ಪಂಡಿತ್ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳ ವಿರುದ್ಧ ಹೆಚ್ಚಿನ ಪ್ರಕರಣಗಳಿವೆ, ಖಾನಾ ಶರ್ಮಾ ವಿರುದ್ಧ ಮಧ್ಯಪ್ರದೇಶದ ಮೊರೆನಾ ಪೊಲೀಸ್ ಠಾಣೆಯಲ್ಲಿ 12 ಪ್ರಕರಣಗಳಿವೆ.

ಬಂಧಿತ ಆರೋಪಿಗಳಿಂದ ವಶ ಪಡಿಸಿಕೊಂಡ ಆಯುಧಗಳು
ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಗುರುವಾರ ಲಕ್ಷ್ಮೀ ಬ್ಯಾಂಕ್ ಮತ್ತು ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ನಾಲ್ವರು ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ದೋಚಲು ಯತ್ನಿಸಿದ್ದರು. ಕಾರ್ಮಿಕರು ಪ್ರತಿರೋಧ ತೋರಿದ್ದರಿಂದ ಗುಂಡು ಹಾರಿಸಿದ್ದು, ಅಂಗಡಿ ಮಾಲೀಕ ಹಾಪುರಂ (38), ಅವರ ಸೋದರಳಿಯ ಆನಂದ ರಾಮ್ (25) ಗಾಯಗೊಂಡಿದ್ದರು.

ತನಿಖೆಯ ಸಮಯದಲ್ಲಿ, ಅಪರಾಧದ ಸ್ಥಳದಲ್ಲಿ ಕಂಡುಬಂದ ಬೆರಳಚ್ಚು ಆರೋಪಿಯ ಬಗ್ಗೆ ಸುಳಿವು ನೀಡಿತು. ದುಷ್ಕರ್ಮಿಗಳು ಗ್ವಾಲಿಯರ್‌ನ ಮೊರೆನಾ ಜಿಲ್ಲೆಯವರು ಎಂದು ತಿಳಿದುಬಂದಿದೆ. ಅನಂತರ ವಿಶೇಷ ತಂಡಗಳನ್ನು ರಚಿಸಲಾಯಿತು ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ನಾವು ನಾಲ್ವರು ಆರೋಪಿಗಳನ್ನು ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ಬಂಧಿಸಿದ್ದೇವೆ.

ಜುವೆಲರಿ ಅಂಗಡಿಯಲ್ಲಿ ನಡೆದ ಗಲಾಟೆಯಲ್ಲಿ ನಾಲ್ವರ ಪೈಕಿ ಸೂರಜ್ ಕುತ್ತಿಗೆಗೆ ಗುಂಡು ತಗುಲಿತ್ತು,. ಅವರನ್ನು ಗ್ವಾಲಿಯರ್‌ನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ ವಶ ಪಡಿಸಿಕೊಂಡ ಆಯುಧಗಳು
ಬೆಂಗಳೂರು: ಖಾಸಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳ; ಬೆಂಕಿ ಹಚ್ಚಿಕೊಂಡು ತಾಯಿ ಮಕ್ಕಳು ಆತ್ಮಹತ್ಯೆ!

ಆರೋಪಿಗಳು ದರೋಡೆಗೆ ಒಂದು ದಿನ ಮೊದಲು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮೋಟಾರ್‌ಸೈಕಲ್ ಕಳವು ಮಾಡಿದ್ದರು, ಘಟನೆ ನಡೆಯುವ ಎರಡು ಗಂಟೆಗಳ ಮೊದಲು ವಿದ್ಯಾರಣ್ಯಪುರದಿಂದ ಮತ್ತೊಂದು ವಾಹನವನ್ನು ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯಿಂದ ನಾಲ್ಕು ಪಿಸ್ತೂಲ್‌ಗಳು, 12 ಬುಲೆಟ್‌ಗಳು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com