ಉತ್ತರ ಕರ್ನಾಟಕದಿಂದ 2.5 ಲಕ್ಷ ಕಾರ್ಮಿಕರು ವಲಸೆ: ಅರ್ಹ ಮತದಾರರ ತಲುಪಲು ಚುನಾವಣಾ ಆಯೋಗ ಕ್ರಮ

ರಾಜ್ಯ ಚುನಾವಣಾ ಆಯೋಗದ ಅಂದಾಜಿನ ಪ್ರಕಾರ, ಉತ್ತರ ಕರ್ನಾಟಕ ಪ್ರದೇಶದ ಸುಮಾರು 2,52,630 ಅರ್ಹ ಮತದಾರರು ಉದ್ಯೋಗ ಹುಡುಕಿಕೊಂಡು ಬೇರೆ ಸ್ಥಳಗಳಿಗೆ ವಲಸೆ ಹೋಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಕಳೆದ ಎರಡು ತಿಂಗಳಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಿಂದ (North Karnataka) ವಲಸೆ ಹೋದ ಮತದಾರರ ಸಂಖ್ಯೆಯನ್ನು ರಾಜ್ಯ ಚುನಾವಣಾ ಆಯೋಗ ಲೆಕ್ಕಹಾಕುತ್ತಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಜನರು ಬೇಸಿಗೆ ಬಂದಾಗ ಏಪ್ರಿಲ್ ತಿಂಗಳಲ್ಲಿ ವಲಸೆ ಹೋಗುತ್ತಾರೆ. ಆದರೆ ಈ ವರ್ಷ ರಾಜ್ಯದ ಕೆಲವು ಭಾಗಗಳಲ್ಲಿ ಬರಗಾಲದ ಕಾರಣ ಫೆಬ್ರವರಿಯಲ್ಲಿ ಗುಳೆ ಹೋಗಿದ್ದಾರೆ.

ರಾಜ್ಯ ಚುನಾವಣಾ ಆಯೋಗದ ಅಂದಾಜಿನ ಪ್ರಕಾರ, ಉತ್ತರ ಕರ್ನಾಟಕ ಪ್ರದೇಶದ ಸುಮಾರು 2,52,630 ಅರ್ಹ ಮತದಾರರು ಉದ್ಯೋಗ ಹುಡುಕಿಕೊಂಡು ಬೇರೆ ಸ್ಥಳಗಳಿಗೆ ವಲಸೆ ಹೋಗಿದ್ದಾರೆ. ಮುಂದಿನ ತಿಂಗಳು ಮತದಾನದ ವೇಳೆಗೆ ಅವರನ್ನು ಸಂಪರ್ಕಿಸಿ ಮತ ಚಲಾಯಿಸಲು ಅವರನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದೆ.

ಜಿಲ್ಲೆಯಲ್ಲಿ SVEEP ಸಮಿತಿಗಳ (Systematic Voters’ Education and Electoral Participation Programme) ಅಧ್ಯಕ್ಷರಾದ ಮುಖ್ಯ ಚುನಾವಣಾ ಆಯುಕ್ತರು, ಈ ರೀತಿ ಗುಳೆ ಹೋದ ಅರ್ಹ ಮತದಾರರ ಸಂಖ್ಯೆಯನ್ನು ಕೇಳಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು (BLOs) ಪಟ್ಟಿಯನ್ನು ಸಂಗ್ರಹಿಸಿದ್ದು, ವಲಸೆ ಹೋದವರ ನಿಖರ ಸಂಖ್ಯೆಗಳು ನಮ್ಮ ಬಳಿ ಬಂದ ನಂತರ ನಾವು ಅವರನ್ನು ಸಂಪರ್ಕಿಸಿ ಮೇ 7 ರಂದು ಮತದಾನ ಮಾಡಲು ಮನವೊಲಿಸಲು ಪ್ರಯತ್ನಿಸುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಎಲ್ ಒಗಳು, ವಲಸೆ ಬಂದ ಮತದಾರರ ಸಂಖ್ಯೆಯನ್ನು ಪಟ್ಟಿ ಮಾಡುವುದರ ಜೊತೆಗೆ, ಮತದಾರರ ಪಟ್ಟಿಯಿಂದ ಮೃತ ವ್ಯಕ್ತಿಗಳ ಹೆಸರನ್ನು ಅಳಿಸುತ್ತಾರೆ. ಮುಂದಿನ ಕೆಲವು ವಾರಗಳಲ್ಲಿ ತಿದ್ದುಪಡಿಗಳು ಮತ್ತು ಹೆಚ್ಚುವರಿ ಕೆಲಸವನ್ನು ಮಾಡಲಾಗುತ್ತದೆ. ವಲಸೆ ಬಂದ ಮತದಾರರ ಹತ್ತಿರದ ಸಂಬಂಧಿಗಳನ್ನು ಬಿಎಲ್ಒಗಳು ಸಂಪರ್ಕಿಸುತ್ತಿದ್ದಾರೆ, ಅವರು ಎಲ್ಲಿದ್ದಾರೆ ಮತ್ತು ಅವರನ್ನು ತಲುಪುವುದು ಹೇಗೆ ಎಂದು ತಿಳಿದುಕೊಳ್ಳುತ್ತಾರೆ ಎಂದರು.

ಸಾಂದರ್ಭಿಕ ಚಿತ್ರ
ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ; ಪ್ರಭಾವಿ ವ್ಯಕ್ತಿಗಳ ಪೋಸ್ಟ್ ಗಳ ಮೇಲೆ ಚುನಾವಣಾ ಆಯೋಗ ಕಣ್ಣು!

ಅನೇಕ ಬಾರಿ, ರಾಜಕೀಯ ಪಕ್ಷಗಳು ಮತದಾರರಿಗೆ ತಮ್ಮ ಪರವಾಗಿ ಮತ ಚಲಾಯಿಸುವಂತೆ ಸೆಳೆಯಲು ಬಸ್‌ಗಳ ವ್ಯವಸ್ಥೆ ಉಡುಗೊರೆಗಳನ್ನು ನೀಡುವುದು ಮಾಡುತ್ತವೆ. ಉದಾಹರಣೆಗೆ, ಒಂದು ರಾಜಕೀಯ ಪಕ್ಷವು ಚುನಾವಣೆಗೆ ಮುಂಚೆಯೇ ಗೋವಾದಲ್ಲಿ ಉತ್ತರ ಕರ್ನಾಟಕದಿಂದ ವಲಸೆ ಬಂದವರಿಗೆ ಅದ್ದೂರಿ ಪಾರ್ಟಿಯನ್ನು ಆಯೋಜಿಸಿತ್ತು. ಈ ಬಾರಿ ಮತದಾರರನ್ನು ಕರೆತರಲು ಚುನಾವಣಾ ಆಯೋಗ ಮತ್ತು ಸ್ಥಳೀಯ ಆಡಳಿತ ಬಸ್‌ಗಳ ವ್ಯವಸ್ಥೆ ಮಾಡಲಿದೆ.

ಇಷ್ಟೆಲ್ಲಾ ಆದರೂ ಗುಳೆ ಹೋದ ಎಲ್ಲಾ ಕಾರ್ಮಿಕರನ್ನು ಸಂಪರ್ಕಿಸುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ ಚುನಾವಣಾ ಆಯೋಗವು ವಿವಿಧ ಮಾಧ್ಯಮಗಳ ಮೂಲಕ ಮತದಾನ ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ. “ಉದಾಹರಣೆಗೆ, ಬಳ್ಳಾರಿ ಜಿಲ್ಲೆ ಸುಮಾರು 15,000 ವಲಸೆ ಮತದಾರರನ್ನು ಪಟ್ಟಿ ಮಾಡಿದೆ, ಕೊಪ್ಪಳ ಜಿಲ್ಲೆಯಲ್ಲಿ 45,000 ಮತದಾರರಿದ್ದಾರೆ. ಗದಗ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆಗಳನ್ನು ಸಂಗ್ರಹಿಸಲಾಗುತ್ತಿದೆ. ಬೇಸಿಗೆಯಲ್ಲಿ ಅತಿ ಹೆಚ್ಚು ವಲಸೆಯನ್ನು ಕಾಣುವ ತಾಂಡಾ ಸಮುದಾಯದವರನ್ನು ಬಿಎಲ್ ಒಗಳು ಭೇಟಿ ಮಾಡುತ್ತಾರೆ. ಹಳ್ಳಿಗಳು ಮತ್ತು ಇತರ ಪ್ರದೇಶಗಳಲ್ಲಿ ಬೀದಿನಾಟಕಗಳು, ಪ್ರಹಸನಗಳ ಮೂಲಕ ಮತದಾನದ ಜಾಗೃತಿ ಮೂಡಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com