ತುಮಕೂರು: ಭಸ್ಮವಾಗಿರುವ ಕಾರಿನಲ್ಲಿ ಸುಟ್ಟು ಕರಕಲಾಗಿರುವ ಮೂರು ಮೃತದೇಹ ಪತ್ತೆ!

ತಾಲ್ಲೂಕಿನ ಕುಚ್ಚಂಗಿ ಕೆರೆಯ ಮೇಲಿರುವ ಮೆಸ್ಕ್ವೈಟ್ ತೋಪಿನಲ್ಲಿ ಭಸ್ಮವಾಗಿರುವ ಸ್ಥಿತಿಯಲ್ಲಿ ಮಾರುತಿ ಸ್ವಿಫ್ಟ್‌ ಕಾರು ಪತ್ತೆಯಾಗಿದ್ದು, ಮೂರು ಮೃತ ದೇಹಗಳು ಸಿಕ್ಕಿವೆ.
ಸುಟ್ಟು ಕರಕಲಾಗಿರುವ ಕಾರು
ಸುಟ್ಟು ಕರಕಲಾಗಿರುವ ಕಾರು
Updated on

ತುಮಕೂರು: ತಾಲ್ಲೂಕಿನ ಕುಚ್ಚಂಗಿ ಕೆರೆಯ ಮೇಲಿರುವ ಮೆಸ್ಕ್ವೈಟ್ ತೋಪಿನಲ್ಲಿ ಭಸ್ಮವಾಗಿರುವ ಸ್ಥಿತಿಯಲ್ಲಿ ಮಾರುತಿ ಸ್ವಿಫ್ಟ್‌ ಕಾರು ಪತ್ತೆಯಾಗಿದ್ದು, ಮೂರು ಮೃತ ದೇಹಗಳು ಸಿಕ್ಕಿವೆ.

ಈ ಸ್ಥಳವು ತುಮಕೂರು ಗ್ರಾಮಾಂತರದ ಅರೆಕೆರೆ-ತೋವಿನಕೆರೆ ರಸ್ತೆಯಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಿಂದ 6-7 ಕಿಮೀ ದೂರದಲ್ಲಿದೆ. ಮೃತರನ್ನು ನಡ ಗ್ರಾಮದ ಟಿಬಿ ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ (45), ಕುವೆಟ್ಟು ಗ್ರಾಮದ ಮಡಡ್ಕ ನಿವಾಸಿ ಇಸಾಕ್ (56), ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿರ್ಲಾಲ ಗ್ರಾಮದ ಇಮ್ತಿಯಾಝ್ (34) ಮೃತರು ಎಂದು ಪತ್ತೆಯಾಗಿದೆ.

ಕಾರಿನ ಡಿಕ್ಕಿಯಲ್ಲಿ ಎರಡು ಶವಗಳು ಮತ್ತು ಹಿಂಬದಿ ಸೀಟಿನಲ್ಲಿ ಒಂದು ಶವ ಪತ್ತೆಯಾಗಿದ್ದರಿಂದ ಇದು ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ. ಬೆಳ್ತಂಗಡಿಯಿಂದ ಐವರು ಕಾರನ್ನು ಬಾಡಿಗೆಗೆ ಪಡೆದಿದ್ದರು, ಅದರಲ್ಲಿ ಮೂವರನ್ನು ಕೊಲೆ ಮಾಡಲಾಗಿದೆ.

ಸುಟ್ಟು ಕರಕಲಾಗಿರುವ ಕಾರು
ಬೆಂಗಳೂರು: ಡ್ರಮ್ ನಲ್ಲಿ ತುಂಡು, ತುಂಡಾಗಿ ವೃದ್ಧೆಯ ಮೃತದೇಹ ಪತ್ತೆ! ಇಬ್ಬರು ವಶಕ್ಕೆ

ನಾಪತ್ತೆಯಾಗಿರುವ ಇಬ್ಬರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ರಫೀಕ್ ಎಂಬಾತನ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ. ಘಟನಾ ಸ್ಥಳಕ್ಕೆ ಐಜಿಪಿ (ಕೇಂದ್ರ ವ್ಯಾಪ್ತಿ) ರವಿಕಾಂತೇಗೌಡ, ತುಮಕೂರು ಎಸ್‌ಪಿ ಅಶೋಕ್ ಕೆವಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಶ್ವಾನದಳ ಹಾಗೂ ಎಫ್‌ಎಸ್‌ಎಲ್‌ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಕೋರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com