ಇನ್ನು ಮುಂದೆ ಗ್ರಾಹಕರು ಬಹು ವಿದ್ಯುತ್ ಸಂಪರ್ಕಗಳನ್ನು ಪಡೆಯಬಹುದು: KERC

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ಆದೇಶವೊಂದನ್ನು ಹೊರಡಿಸಿದ್ದು, ಲೋ ಟೆನ್ಷನ್ (LT) ವಸತಿ ಗ್ರಾಹಕರು ತಮ್ಮ ಆವರಣದಲ್ಲಿ ಬಹು ಸಂಪರ್ಕಗಳನ್ನು ಪಡೆಯಲು ಅನುವು ಮಾಡಿಕೊಡುವಂತೆ ಎಲ್ಲಾ ಇಂಧನ ಪೂರೈಕೆ ನಿಗಮಗಳಿಗೆ (Escoms) ನಿರ್ದೇಶಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ಆದೇಶವೊಂದನ್ನು ಹೊರಡಿಸಿದ್ದು, ಲೋ ಟೆನ್ಷನ್ (LT) ವಸತಿ ಗ್ರಾಹಕರು ತಮ್ಮ ಆವರಣದಲ್ಲಿ ಬಹು ಸಂಪರ್ಕಗಳನ್ನು ಪಡೆಯಲು ಅನುವು ಮಾಡಿಕೊಡುವಂತೆ ಎಲ್ಲಾ ಇಂಧನ ಪೂರೈಕೆ ನಿಗಮಗಳಿಗೆ (Escoms) ನಿರ್ದೇಶಿಸಿದೆ. ಇಂತಹ ಆದೇಶ ಹೊರಡಿಸಿರುವುದು ಇದೇ ಮೊದಲು ಎಂದು ಕೆಇಆರ್‌ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗ್ರಾಹಕರಿಂದ ಹೆಚ್ಚುತ್ತಿರುವ ದೂರುಗಳು ಮತ್ತು ಮನವಿಗಳ ಆಧಾರದ ಮೇಲೆ ಕೆಇಆರ್‌ಸಿ ಈ ಆದೇಶಗಳನ್ನು ಹೊರಡಿಸಿದೆ.

''ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ ಎಂಬ ದೂರುಗಳು ಹಲವು ಬಂದಿವೆ. ತಮ್ಮ ಆವರಣದಲ್ಲಿರುವ ಬಹುಸಂಪರ್ಕಗಳಿಗೆ ಅನುಮತಿ ಪಡೆಯಲು ಆಗಾಗ ಎಸ್ಕಾಂ ಕಚೇರಿಗೆ ಹೋಗಬೇಕಾಗಿದೆ ಎಂದು ಗ್ರಾಹಕರು ಹೇಳುತ್ತಾರೆ. ಹೀಗಾಗಿ ಆದೇಶ ಹೊರಡಿಸಲಾಗಿದೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಫೆಬ್ರವರಿ 28, 2024 ರಂದು ಕೆಇಆರ್‌ಸಿ ವಿದ್ಯುತ್ ಸುಂಕದ ಆದೇಶಗಳು ಬಹು ವಿದ್ಯುತ್ ಸುಂಕದ ಸ್ಲ್ಯಾಬ್‌ಗಳನ್ನು ತೆಗೆದುಹಾಕಲಾಗಿದೆ. ಎಲ್ಲಾ ಗ್ರಾಹಕರಿಗೆ ಏಕರೂಪದ ಸ್ಲ್ಯಾಬ್‌ಗೆ ನಿರ್ದೇಶಿಸಲಾಗಿದೆ. ಇದು ಲೋ ಟೆನ್ಷನ್ ವಸತಿ ಗ್ರಾಹಕರು ತಮ್ಮ ಆವರಣದ ಅವಶ್ಯಕತೆಗಳಿಗೆ ಅನುಗುಣವಾಗಿ ಬಹು ಸಂಪರ್ಕಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು. ಕೆಇಆರ್‌ಸಿಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿ, “ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಜನರು ಅಕ್ರಮವಾಗಿ ಅನೇಕ ಸಂಪರ್ಕಗಳನ್ನು ಪಡೆಯುತ್ತಿದ್ದಾರೆ. ಈಗ ಈ ಆದೇಶದಿಂದ ಜನರು ಅದನ್ನು ಕಾನೂನುಬದ್ಧವಾಗಿ ಪಡೆಯಬಹುದು ಎಂದರು.

ಆದಾಗ್ಯೂ, ಈ ಆದೇಶವು ರಾಜ್ಯ ಎಸ್ಕಾಂ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ, ಏಕೆಂದರೆ ಗ್ರಾಹಕರು ತಮ್ಮ ವಿದ್ಯುತ್ ಬಿಲ್ ನ್ನು ವಿಭಜಿಸಲು ಮತ್ತು ಗೃಹ ಜ್ಯೋತಿ ಯೋಜನೆಯ ಲಾಭವನ್ನು ಪಡೆಯಲು ಅದನ್ನು ದುರ್ಬಳಕೆ ಮಾಡುತ್ತಾರೆ,

ಇದು ರಾಜ್ಯ ಸರಕಾರಕ್ಕೆ ಹೊರೆಯಾಗಲಿದೆ. ಇದಕ್ಕೆ ಕೆಇಆರ್‌ಸಿ ಅಧಿಕಾರಿ “ಪ್ರತಿ ಗ್ರಾಹಕರ ಮೂಲ ಲೋಡ್ ನ್ನು ಪರಿಶೀಲಿಸುವುದು ಎಸ್ಕಾಮ್‌ಗಳಿಗೆ ಬಿಟ್ಟದ್ದು, ಸರ್ಕಾರದ ಆದೇಶದ ಪ್ರಕಾರ, ಹೊಸ ಸಂಪರ್ಕಗಳಿಗೆ, ಮೂಲ ಬಳಕೆ 53 ಘಟಕಗಳಾಗಿದ್ದು, ಶೇಕಡಾ 10ರಷ್ಟು ಸೇರ್ಪಡೆಯೊಂದಿಗೆ 58 ಘಟಕಗಳನ್ನು ಮಾಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com