ರಾಮನಗರದಲ್ಲಿ PTI ವರದಿಗಾರ್ತಿ ಮೇಲೆ ANI ವರದಿಗಾರ ಕಪಾಳಮೋಕ್ಷ, ನಿಂದನೆ: ದೂರು-ಪ್ರತಿದೂರು ದಾಖಲು

ಬೆಂಗಳೂರು ಗ್ರಾಮಾಂತರ ರಾಮನಗರದಲ್ಲಿ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ANI (ಏಷ್ಯನ್ ನ್ಯೂಸ್ ಇಂಟರ್‌ನ್ಯಾಶನಲ್) ವರದಿಗಾರ PTI ಪತ್ರಕರ್ತೆ ಮೇಲೆ ಹಲ್ಲೆ ನಡೆಸಿರುವ ಘಟನೆ ನಿನ್ನೆ ಗುರುವಾರ ನಡೆದಿದೆ.
ದೈಹಿಕ ಹಲ್ಲೆ, ನಿಂದನೆಯ ದೃಶ್ಯ
ದೈಹಿಕ ಹಲ್ಲೆ, ನಿಂದನೆಯ ದೃಶ್ಯ

ರಾಮನಗರ: ಬೆಂಗಳೂರು ಗ್ರಾಮಾಂತರ ರಾಮನಗರದಲ್ಲಿ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ANI (ಏಷ್ಯನ್ ನ್ಯೂಸ್ ಇಂಟರ್‌ನ್ಯಾಶನಲ್) ವರದಿಗಾರ PTI ಪತ್ರಕರ್ತೆ ಮೇಲೆ ಹಲ್ಲೆ ನಡೆಸಿರುವ ಘಟನೆ ನಿನ್ನೆ ಗುರುವಾರ ನಡೆದಿದೆ.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಅವರ ಸಂಸದ-ಸಹೋದರ ಡಿ ಕೆ ಸುರೇಶ್ ಅವರ ಪತ್ರಿಕಾಗೋಷ್ಠಿಯಲ್ಲಿ ವೇಳೆ ಈ ದುರ್ಘಟನೆ ನಡೆದಿದೆ. ಎಎನ್ ಐ ವರದಿಗಾರರ ಮೇಲೆ ಪಿಟಿಐ ಪತ್ರಕರ್ತೆ ದೂರು ದಾಖಲಿಸಿದ್ದು ಅದಕ್ಕೆ ಎಎನ್ ಐ ವರದಿಗಾರ ಪ್ರತಿದೂರು ದಾಖಲಿಸಿದ್ದಾರೆ.

ಎಎನ್‌ಐ ವರದಿಗಾರ ವರದಿಗಾರ್ತಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪಿಟಿಐ ವರದಿಗಾರ್ತಿ ಆರೋಪಿಸಿದ್ದಾರೆ. ಈ ಘಟನೆ ವಿಡಿಯೊದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ಎಎನ್‌ಐ ವರದಿಗಾರ ಯುವತಿ ವರದಿಗಾರನ ಮುಖಕ್ಕೆ ಎರಡು ಬಾರಿ ಹೊಡೆಯುತ್ತಿರುವುದನ್ನು ಕಾಣಬಹುದು. ಆಗ ಸ್ಥಳದಲ್ಲಿದ್ದ ಇತರ ಪತ್ರಕರ್ತರು ಮತ್ತು ಜನರು ಅವರನ್ನು ಎಳೆದುಕೊಂಡು ಹೋದರು.

ಘಟನೆ ಕುರಿತು ಪ್ರತಿಕ್ರಿಯಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಭು ಸುಂದರ್, ಎಎನ್ಐ ವರದಿಗಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪಿಟಿಐ ಟ್ವೀಟ್ ಮಾಡಿದ ಕೆಲವೇ ಗಂಟೆಗಳ ನಂತರ, ಎಎನ್‌ಐನ ನವೀನ್ ಕಪೂರ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, "ಎಎನ್‌ಐ ಯಾವುದೇ ರೀತಿಯಲ್ಲಿ ಕ್ಷೇತ್ರದಲ್ಲಿ ಪತ್ರಕರ್ತರಿಂದ ಹಿಂಸೆಯನ್ನು ಕ್ಷಮಿಸುವುದಿಲ್ಲ ಅಥವಾ ಅನುಮೋದಿಸುವುದಿಲ್ಲ" ಎಂದು ತಿಳಿಸಿದ್ದಾರೆ.

“ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಟಿಐ ಯುವ ವರದಿಗಾರ್ತಿಯೊಬ್ಬರ ಮೇಲೆ ದೈಹಿಕ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲೈಂಗಿಕ ಕಿರುಕುಳ ನೀಡಲಾಗಿದೆ. ಇದು ಎಎನ್ಐ ವರದಿಗಾರನ ಅಸಹ್ಯಕರ ವರ್ತನೆ. ಎಎನ್ಐ ತನ್ನ ಸಿಬ್ಬಂದಿಯ ಇಂತಹ ನಡವಳಿಕೆಯನ್ನು ಖಂಡಿಸುತ್ತದೆಯೇ? ಎಂದು ಪಿಟಿಐ ವಿಡಿಯೊ ಸಮೇತ ಟ್ವೀಟ್ ಮಾಡಿದೆ.

ಪಿಟಿಐ ಈ ಘಟನೆಯನ್ನು ಖಂಡಿಸಿದೆ ಮತ್ತು ವೀಡಿಯೊದಲ್ಲಿ ಕಾಣಿಸಿಕೊಂಡ ತಮ್ಮ ಉದ್ಯೋಗಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಎನ್ಐ ಆಡಳಿತ ಮಂಡಳಿಗೆ ಮನವಿ ಮಾಡಿದೆ. ಎಫ್ಐಆರ್ ಕೂಡ ದಾಖಲಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಸುದ್ದಿ ಸಂಸ್ಥೆ ತಿಳಿಸಿದೆ.

ತನಿಖೆ ಪ್ರಕ್ರಿಯೆ ಪೂರ್ಣಗೊಳ್ಳುವರೆಗೂ ಎಎನ್‌ಐ ವರದಿಗಾರರನ್ನು ಅಮಾನತುಗೊಳಿಸಲಾಗಿದೆ ಎಂದು ಎಎನ್ ಐ ಸುದ್ದಿಸಂಸ್ಥೆ ತಿಳಿಸಿದೆ.

ಎಎನ್ಐ ವರದಿಗಾರ ತನ್ನ ಮೇಲೆ ಮೊದಲು ಮಹಿಳಾ ಪತ್ರಕರ್ತೆ ಹಲ್ಲೆ ನಡೆಸಿದ್ದರು ಎಂದು ಪ್ರತಿ ಎಫ್ಐಆರ್ ದಾಖಲಿಸಲಿದ್ದಾರೆ. ಅದಕ್ಕೆ ಪೂರಕವಾಗಿ ಪರಚಿದ ಮುಖದ ಚಿತ್ರ ಹಾಕಿದ್ದಾರೆ. ಆದಾಗ್ಯೂ, ಎಎನ್ಐ ಪತ್ರಕರ್ತ ನವೀನ್ ಕಪೂರ್ ನೀಡಿದ ಸ್ಪಷ್ಟೀಕರಣದ ಪ್ರಕಾರ, ಸಂಸ್ಥೆ ಅವರನ್ನು ತಾತ್ಕಾಲಿಕವಾಗಿ ಕರ್ತವ್ಯದಿಂದ ಅಮಾನತುಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com