ಏಪ್ರಿಲ್ 26, ಮೇ 7 ಸಾರ್ವತ್ರಿಕ ರಜೆ ಘೋಷಣೆ: ಮಹಾಜನಗಳೇ... ಕಡ್ಡಾಯವಾಗಿ ಮತ ಚಲಾಯಿಸಿ!

ಈ ಬಾರಿಯ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಮತದಾನ ದಿನವಾದ ಏಪ್ರಿಲ್ 26 ಮತ್ತು ಮೇ 7 ರಂದು ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಸಂಬಂಧಿತ ಸಂಸ್ಥೆಗಳ ನೌಕರರಿಗೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಮತದಾನ ದಿನವಾದ ಏಪ್ರಿಲ್ 26 ಮತ್ತು ಮೇ 7 ರಂದು ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಸಂಬಂಧಿತ ಸಂಸ್ಥೆಗಳ ನೌಕರರಿಗೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನಿಯಮಗಳು ಮತ್ತು ಕಾನೂನಿನ ಪ್ರಕಾರ ರಜೆಯನ್ನು ಘೋಷಿಸಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ(The New Indian Express) ತಿಳಿಸಿದ್ದಾರೆ. 1881ರ ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜೆ ಘೋಷಿಸಲಾಗಿದೆ. ತಮ್ಮ ರಾಜ್ಯಗಳಲ್ಲಿ ಮತದಾನದ ದಿನದಂದು ನೌಕರರಿಗೆ ರಜೆ ನೀಡುವಂತೆ ತಮಿಳುನಾಡಿನಂತಹ ಇತರ ರಾಜ್ಯಗಳಿಂದ ವಿನಂತಿಗಳು ಬಂದಿದ್ದವು.

ಇದು ಪ್ರಜಾಪ್ರಭುತ್ವ, ರಜಾದಿನವನ್ನು ಘೋಷಿಸುವುದು ನಮಗೆ ನಿಯಮವಾಗಿದೆ. ನಾವು ಅದನ್ನು ಮಾಡಿದ್ದೇವೆ. ಅದರ ಸದುಪಯೋಗಪಡಿಸಿಕೊಳ್ಳುವುದು ಪ್ರಜೆಗಳಿಗೆ ಬಿಟ್ಟಿದ್ದು.ಮತದಾರರು ಮತದಾನದ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಸಾಂದರ್ಭಿಕ ಚಿತ್ರ
Loksabha Election 2024: ಕರ್ನಾಟಕದಲ್ಲಿ 2 ಹಂತದ ಮತದಾನ, ಇಲ್ಲಿದೆ ಸಂಪೂರ್ಣ ವಿವರ!

ಕಳೆದ ವರ್ಷದ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ, ಮತದಾನದ ದಿನವು ಮೇ 10, 2023, ಬುಧವಾರವಾಗಿತ್ತು. ಮತದಾನದ ಪ್ರಮಾಣ ಕಳಪೆಯಾಗಿತ್ತು. ಕಳೆದ ಬಾರಿಯೂ ರಜೆ ಘೋಷಿಸಲಾಗಿತ್ತು. ಪ್ರಯಾಣಿಸಬೇಡಿ ಅಥವಾ ಹೊರಗೆ ಹೋಗಬೇಡಿ ಎಂದು ನಾವು ಜನರಿಗೆ ಹೇಳಲು ಸಾಧ್ಯವಿಲ್ಲ, ಮತದಾನ ಹಕ್ಕಾಗಿದ್ದು ಅದನ್ನು ಕಳೆದುಕೊಳ್ಳಬಾರದು ಎಂದು ಜನರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಹೇಳಿದರು. ಈ ಬಾರಿ, ಏಪ್ರಿಲ್ 26 ಶುಕ್ರವಾರ, ಮತ್ತು ಮೇ 7 ಮಂಗಳವಾರ ಬರುತ್ತದೆ.

2023 ರ ಅಸೆಂಬ್ಲಿ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶೇಕಡಾ 72.39 ರಷ್ಟು ಮತದಾನವಾಗಿತ್ತು. ಆದಾಗ್ಯೂ, ಈ ವರ್ಷ, ಲೋಕಸಭೆ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಹೆಚ್ಚಳಕ್ಕೆ ಸಹಾಯ ಮಾಡಲು, ಜನರು ರಜೆ ಎಂದು ಪ್ರವಾಸ ಹೋಗುವುದನ್ನು ತಪ್ಪಿಸಲು ಅನೇಕ ಖಾಸಗಿ ಪ್ರವಾಸ ನಿರ್ವಾಹಕರು ಮತ್ತು ಹೋಟೆಲ್‌ಗಳು ಏಪ್ರಿಲ್ 26 ಮತ್ತು ಮೇ 7 ರಂದು ಬುಕ್ಕಿಂಗ್ ನ್ನು ತೆಗೆದುಕೊಳ್ಳದಿರಲು ನಿರ್ಧರಿಸಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳ ಅಧಿಕಾರಿಗಳು ಸಹ ತಮ್ಮ ಸಿಬ್ಬಂದಿಗಳು ಮತ ಹಾಕಬೇಕೆಂದು ಬಯಸುತ್ತಿರುವುದರಿಂದ ಅಂದು ರಜೆ ನೀಡಲು ಒಲವು ತೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com