SIT ತನಿಖೆಗೆ ಹಾಜರಾಗಲು ಸಮಯ ಕೇಳಿದ prajwa revanna, PM Modiಗೆ ಸಿದ್ದರಾಮಯ್ಯ ಪತ್ರ, ಬೆಂಗಳೂರಿನಲ್ಲಿ 41.3 ತಾಪಮಾನ- ಈ ದಿನದ ಪ್ರಮುಖ ಸುದ್ದಿಗಳು-01-05-2024

(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)online desk

1. ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್ ರೇವಣ್ಣ ಮನವಿ

ತಮ್ಮ ವಿರುದ್ಧದ ಲೈಂಗಿಕ ಕಿರುಕುಳ, ಅಶ್ಲೀಲ ವೀಡಿಯೋಗಳ ಹಗರಣದ ಸಂಬಂಧ ವಿಚಾರಣೆಗೆ ಹಾಜರಾಗಲು ಸಂಸದ ಪ್ರಜ್ವಲ್ ರೇವಣ್ಣ ಕಾಲಾವಕಾಶ ಕೋರಿದ್ದಾರೆ. ಪ್ರಕರಣದ ಆರೋಪಿಗಳಾದ ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣಗೆ SIT ಈಗಾಗಲೇ ನೋಟಿಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಆದರೆ ವಿದೇಶದಲ್ಲಿರುವ ಆರೋಪಿ ಪ್ರಜ್ವಲ್ ರೇವಣ್ಣ, ವಕೀಲರ ಮೂಲಕ C.I.Dಗೆ ಮನವಿ ಮಾಡಿದ್ದು ಕಾಲಾವಕಾಶ ಕೋರಿದ್ದಾರೆ ಹಾಗೂ ಸತ್ಯ ಆದಷ್ಟು ಬೇಗ ಹೊರಬರಲಿದೆ" ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಪ್ರಕರಣದ ಎ1 ಆರೋಪಿ ಎಚ್ ಡಿ ರೇವಣ್ಣ ನಾಳೆ ಅಂದರೆ ಮೇ 2ರಂದು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಕೂಡಲೇ ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದು ಮಾಡಿ, ದೇಶಕ್ಕೆ ಕರೆಸಿ ಎಂದು ಮನವಿ ಮಾಡಿದ್ದಾರೆ. ವಿದೇಶದಿಂದ ಪ್ರಜ್ವಲ್‌ರನ್ನು ಕರೆಸುವುದೇ ನಮ್ಮ ಆದ್ಯತೆಯ ಕೆಲಸ. ಕಾನೂನಾತ್ಮಕವಾಗಿ ಎಲ್ಲಾ ರೀತಿಯಲ್ಲೂ ಸಹಕರಿಸಲು SIT ಸಿದ್ಧವಿದೆ. ಹೀಗಾಗಿ ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಕ್ಕೆ ಮೋದಿಗೆ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

2. ಬೆಂಗಳೂರಿನಲ್ಲಿ ತಾಪಮಾನ 41.8 ಡಿಗ್ರಿ ದಾಖಲು! 

ಪ್ರಸಕ್ತ ವರ್ಷ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲಿಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು ರಾಜ್ಯದಲ್ಲಿ ಬಿಸಿ ಗಾಳಿ ಇನ್ನೂ 5 ದಿನಗಳ ಕಾಲ ಮುಂದುವರೆಯಲಿದೆ. ಇಂದು ಬೆಂಗಳೂರಿನಲ್ಲಿ ತಾಪಮಾನ 41.8 ಡಿಗ್ರಿ ದಾಖಲಾಗಿದ್ದು ಇದು ಬೆಂಗಳೂರು ಇತಿಹಾಸದಲ್ಲಿ ದಾಖಲಾಗಿರುವ 3ನೇ ಗರಿಷ್ಠ ತಾಪಮಾನವಾಗಿದೆ. ಕೆಂಗೇರಿಯಲ್ಲಿ ಮಂಗಳವಾರ ಗರಿಷ್ಠ ತಾಪಮಾನ 41.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ದಿನ ಬೆಂಗಳೂರಿನ ಬಿದರಹಳ್ಳಿಯಲ್ಲಿ 41.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.

3. ಕಾವೇರಿಗೆ ನೀರಿಗೆ ಮತ್ತೆ ಕ್ಯಾತೆ ತೆಗೆದ ತಮಿಳುನಾಡು! 

ರಾಜ್ಯದಲ್ಲಿ ಬೇಸಿಗೆ ತೀವ್ರಗೊಂಡು ಬರ ಎದುರಾಗಿರುವಾಗ ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ 2.5 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಆಗ್ರಹಿಸಿದೆ. "ನಮಗೆ ಈ ತಿಂಗಳು ಬರಬೇಕಿರುವ 2.5 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಒತ್ತಾಯಿಸಿದೆ. ಅಷ್ಟೇ ಅಲ್ಲದೇ ಕರ್ನಾಟಕಕ್ಕೆ ಕುಡಿಯುವುದಕ್ಕೆ 0.5 ಟಿಎಂಸಿ ನೀರು ಸಾಕು, ಕುಡಿಯುವ ನೀರಿನ ನೆಪ ಹೇಳಿ ನೀರು ಬಿಡುಗಡೆಗೆ ನಿರಾಕರಿಸಬಾರದೆಂದು ಸಭೆಯಲ್ಲಿ ವಾದಿಸಿದೆ. ತಮಿಳುನಾಡಿನ ವಾದಕ್ಕೆ ಕರ್ನಾಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ‘ರಾಜ್ಯದಲ್ಲಿ ಭೀಕರ ಬರದಿಂದ ಕುಡಿಯುವ ನೀರಿನ ಸಮಸ್ಯೆಯಾಗಿದೆ. ನೀರು ಹರಿಸಲು ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲವೆಂದು ಹೇಳಿದೆ. ರಾಜ್ಯಗಳ ವಾದ ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ, ಮೇ 16ಕ್ಕೆ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಿದೆ.

4. ಆನ್ ಲೈನ್ ಗೇಮ್  ಚಟ: ವಿದ್ಯಾರ್ಥಿಗೆ ಸಹಪಾಠಿಯಿಂದಲೇ ಸುಲಿಗೆ

ಆನ್'ಲೈನ್ ಗೇಮ್ ಚಟದ ಕುರಿತು ಪೋಷಕರಿಗೆ ಹೇಳುವುದಾಗಿ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಬೆದರಿಸಿ ಆತನ ಸಹಪಾಠಿಗಳು ರೂ.40 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಸಂತ್ರಸ್ತ ವಿದ್ಯಾರ್ಥಿಯ ಇಬ್ಬರು ಸಹಪಾಠಿಗಳು ಸೇರಿದಂತೆ 6 ಮಂದಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 302 ಗ್ರಾಂ ಚಿನ್ನಾಭರಣ ಮತ್ತು 23.50 ಲಕ್ಷ ರೂ. ಜಪ್ತಿ ಮಾಡಲಾಗಿದೆ.ಇಬ್ಬರು ಅಪ್ರಾಪ್ತರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಪುತ್ರ ಪಬ್‌ಜೀ, ಡ್ರೀಮ್-11 ಮತ್ತು ಬಿಜಿಎಂಐ ಗೇಮ್ ವ್ಯಸನಿಯಾಗಿ ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದ. ಈ ವಿಚಾರವನ್ನು ಆತನ ತಂದೆ-ತಾಯಿಗೆ ಹೇಳುವುದಾಗಿ ಸಹಪಾಠಿಗಳು ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಒಡ್ಡಿದ್ದರು. ಪಾಲಕರಿಗೆ ಹೆದರಿ ಸಂತ್ರಸ್ತ ಬಾಲಕ, ತನ್ನ ಮನೆಯಿಂದ ಹಣ ಕದ್ದು ತಂದು ಕೊಡುತ್ತಿದ್ದ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com