ನಿಯಮಿತ ವೇತನ ಬೇಡಿಕೆ: ಇಂದಿನಿಂದ '108' ಆಂಬ್ಯುಲೆನ್ಸ್ ಸಿಬ್ಬಂದಿ ಮುಷ್ಕರ

ಕಳೆದ ಐದು ತಿಂಗಳಿಂದ ಜಿವಿಕೆ ಇಎಂಆರ್‌ಐನಿಂದ ತಮ್ಮ ನಿಯಮಿತ ವೇತನ ಪಡೆಯದೆ ನಿರಾಶೆಗೊಂಡಿರುವ ನೌಕರರು ರಾಜ್ಯಾದ್ಯಂತ ‘108’ ಆಂಬ್ಯುಲೆನ್ಸ್‌ ಸೇವೆಯನ್ನು ಇಂದು ಮೇ 6ರಿಂದ ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಳೆದ ಐದು ತಿಂಗಳಿಂದ ಜಿವಿಕೆ ಇಎಂಆರ್‌ಐನಿಂದ ತಮ್ಮ ನಿಯಮಿತ ವೇತನ ಪಡೆಯದೆ ನಿರಾಶೆಗೊಂಡಿರುವ ನೌಕರರು ರಾಜ್ಯಾದ್ಯಂತ ‘108’ ಆಂಬ್ಯುಲೆನ್ಸ್‌ ಸೇವೆಯನ್ನು ಇಂದು ಮೇ 6ರಿಂದ ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ.

ಕರ್ನಾಟಕದಾದ್ಯಂತ ಸುಮಾರು 715 ಆಂಬ್ಯುಲೆನ್ಸ್‌ಗಳು ಮತ್ತು ಸರಿಸುಮಾರು 3,500 ಉದ್ಯೋಗಿಗಳು 108 ಆಂಬ್ಯುಲೆನ್ಸ್ ಅಸೋಸಿಯೇಷನ್‌ಗಳ ಸೇವೆಯೊಂದಿಗೆ ಸಂಬಂಧ ಹೊಂದಿದ್ದಾರೆ.

ಕಳೆದ ಐದು ತಿಂಗಳಿನಿಂದ ಎರಡು ತಿಂಗಳ ವೇತನಕ್ಕೆ ಸಮನಾದ ವೇತನವನ್ನು ಮಾತ್ರ ಪಡೆದಿದ್ದೇವೆ ಎಂದು ಸಂಘದ ನೌಕರರು ನೊಂದು ಹೇಳುತ್ತಿದ್ದಾರೆ. ಸಂಘವು ಬೆಂಗಳೂರಿನಲ್ಲಿ ಸುಮಾರು 90 ಆಂಬ್ಯುಲೆನ್ಸ್‌ಗಳನ್ನು ನಿರ್ವಹಿಸುತ್ತಿದ್ದು, 400 ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ.

ಸುವರ್ಣ ಕರ್ನಾಟಕ ಸಂಘದ ಉಪಾಧ್ಯಕ್ಷ ಪರಮಶಿವ ಅವರು ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ಮಾಹಿತಿ ನೀಡಿ, ಸಂಘದ ಸದಸ್ಯರಿಗೆ ತಿಂಗಳಿಗೆ 29 ಸಾವಿರದಿಂದ 31 ಸಾವಿರದವರೆಗೆ ನಿಯಮಿತ ವೇತನವನ್ನು ಪಡೆಯುವವರೆಗೆ ಇಂದು ರಾತ್ರಿ 8 ಗಂಟೆಯಿಂದ ತನ್ನ ಸೇವೆಗಳನ್ನು ಸ್ಥಗಿತಗೊಳಿಸಲಿದೆ.

“ನಾವು ಮಾಸಿಕ ಕೇವಲ 10,000 ರೂಪಾಯಿ ಪಡೆಯುತ್ತಿದ್ದೇವೆ. ಪ್ರತಿಯೊಬ್ಬ ಉದ್ಯೋಗಿಯು 12 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುವುದರಿಂದ, ನಮ್ಮ ಜೀವನೋಪಾಯವನ್ನು ಉಳಿಸಿಕೊಳ್ಳುವುದು ಹೆಚ್ಚು ಕಷ್ಟಕರವಾಗುತ್ತಿದೆ. ಕುಟುಂಬಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದರೂ, GVK EMRI ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸುತ್ತಿಲ್ಲ ಎಂದು ಪರಮಶಿವ ಹೇಳಿದರು ಮತ್ತು ಯಾವುದೇ ಪೂರ್ವ ಸೂಚನೆ ಅಥವಾ ಮಾಹಿತಿಯನ್ನು ಒದಗಿಸದೆ ಸಂಬಳವನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದರು.

ಸಾಂದರ್ಭಿಕ ಚಿತ್ರ
ಕರ್ನಾಟಕ ಬಜೆಟ್ 2024: ಮೀನುಗಾರರ ರಕ್ಷಣೆಗೆ 'ಸಮುದ್ರ ಆಂಬ್ಯುಲೆನ್ಸ್' ಘೋಷಿಸಿದ ಸಿಎಂ ಸಿದ್ದರಾಮಯ್ಯ

TNIE ಯೊಂದಿಗೆ ಮಾತನಾಡಿದ ಆರೋಗ್ಯ ಆಯುಕ್ತ ರಂದೀಪ್ ಡಿ, ನಾವು ಈಗಾಗಲೇ 108 ಸೇವಾ ಪೂರೈಕೆದಾರರಿಗೆ ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ (ಎಸ್ಮಾ) ಸೂಚನೆಯನ್ನು ನೀಡಿದ್ದೇವೆ ಆದ್ದರಿಂದ ಯಾವುದೇ ಸಮಯದಲ್ಲಿ 108 ತುರ್ತು ಆಂಬ್ಯುಲೆನ್ಸ್ ಸೇವೆಗಳಿಗೆ ಅಡ್ಡಿಯಾಗುವುದಿಲ್ಲ ಎಂದರು.

ಸಂಬಳದ ಬಗ್ಗೆ ಸ್ಪಷ್ಟಪಡಿಸಲು, 2024 ರ ಜನವರಿ ತಿಂಗಳವರೆಗೆ ಸೇವಾ ಪೂರೈಕೆದಾರರಿಂದ 108 ಉದ್ಯೋಗಿಗಳಿಗೆ ಸರಿಪಡಿಸಿದ ವೇತನವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಸರಿಪಡಿಸಿದ ವೇತನವನ್ನು ಸೇವಾ ಪೂರೈಕೆದಾರರು ಪಾವತಿಸಿದ್ದು, ಅನ್ವಯವಾಗುವ ಕನಿಷ್ಠ ವೇತನಕ್ಕೆ ಮಾತ್ರ ಪಾವತಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com