ಹೊಸ ಹಗರಣ: ಅಂಬೇಡ್ಕರ್ ಕಾರ್ಪೊರೇಷನ್ ಎಂಡಿ ಇ-ಆಫೀಸ್ ಲೆಟರ್ ಹೆಡ್, ಡಿಜಿಟಲ್ ಸಹಿ ಫೋರ್ಜರಿ!

ಇ-ಆಫೀಸ್ ಲೆಟರ್ ಹೆಡ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಡಿಜಿಟಲ್ ಸಹಿಯನ್ನು ಫೋರ್ಜರಿ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇ-ಆಫೀಸ್ ಲೆಟರ್ ಹೆಡ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಡಿಜಿಟಲ್ ಸಹಿಯನ್ನು ಫೋರ್ಜರಿ ಮಾಡಲಾಗಿದೆ.

ಯಾದಗಿರಿ ಜಿಲ್ಲೆಯ ಪರಿಶಿಷ್ಟ ಜಾತಿಯ 17 ಫಲಾನುಭವಿಗಳಿಗೆ ‘ಐರಾವತ’ ಯೋಜನೆಯಡಿ ತಲಾ 5 ಲಕ್ಷ ರೂ.ಗಳ ಸಹಾಯಧನವನ್ನು ಎಂಡಿ ಮಂಜೂರು ಮಾಡಿದ್ದಾರೆ ಎಂದು ತೋರಿಸಲು ಇ-ಆಫೀಸ್ ಲೆಟರ್ ಹೆಡ್ ಮತ್ತು ಎಂಡಿ ಸಹಿಯನ್ನು ನಕಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿದ್ಯಾವಂತ ಮತ್ತು ನಿರುದ್ಯೋಗಿ ಪರಿಶಿಷ್ಟ ಜಾತಿಯ ಯುವಕರು ಓಲಾ/ಉಬರ್/ಮೇರು ಸಹಯೋಗದೊಂದಿಗೆ ಪ್ರವಾಸಿ ಟ್ಯಾಕ್ಸಿಗಳ ಮಾಲೀಕರಾಗಿ ಆದಾಯ ಗಳಿಸಲು ಸಹಾಯ ಮಾಡಲು ಐರಾವತ ಯೋಜನೆಯನ್ನು ಪರಿಚಯಿಸಲಾಗಿದೆ. ನಿಗಮವು ಪ್ರತಿ ಫಲಾನುಭವಿಗೆ 5 ಲಕ್ಷ ರೂ.ವರೆಗೆ ಸಹಾಯಧನ ನೀಡುತ್ತಿತ್ತು ಮತ್ತು 2018ರಿಂದ 2020ರವರೆಗೆ ಈ ಯೋಜನೆ ಜಾರಿಯಲ್ಲಿತ್ತು.

ಸಾಂದರ್ಭಿಕ ಚಿತ್ರ
ಶಿರಾ ಉಪಚುನಾವಣೆ ಹಿನ್ನೆಲೆ: ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಸ್ಥಿತ್ವಕ್ಕೆ

ಅಂಬೇಡ್ಕರ್ ಅಭಿವೃದ್ಧಿಆದರೆ ಯಾದಗಿರಿಯಲ್ಲಿರುವ ನಿಗಮದ ಕಚೇರಿಯ ವ್ಯವಸ್ಥಾಪಕರಿಗೆ ನಕಲಿ ಇ-ಆಫೀಸ್ ಲೆಟರ್ ಹೆಡ್ ಮತ್ತು ಎಂಡಿಯ ಡಿಜಿಟಲ್ ಸಹಿ ಬಳಸಿ 2024ರ ಏಪ್ರಿಲ್ 3ರಂದು ನಕಲಿ ಮಂಜೂರಾತಿ ಆದೇಶ ಹೊರಡಿಸಲಾಗಿದೆ.

ಈ ಯೋಜನೆ ಸ್ಥಗಿತಗೊಂಡಿದ್ದರಿಂದ ಅನುಮಾನಗೊಂಡ ಯಾದಗಿರಿ ಕಚೇರಿಯ ವ್ಯವಸ್ಥಾಪಕ ಸಿದ್ದಲಿಂಗರೆಡ್ಡಿ ಅವರು ಮಂಜೂರಾತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಬೆಂಗಳೂರಿನ ವಿವಿ ಟವರ್‌ನಲ್ಲಿರುವ ನಿಗಮದ ಕೇಂದ್ರ ಕಚೇರಿಯಲ್ಲಿ ಯೋಜನೆಯನ್ನು ನಿರ್ವಹಿಸುವ ಸಿಬ್ಬಂದಿಗೆ ಆದೇಶವನ್ನು ರವಾನಿಸಿದ್ದಾರೆ. ಅವರು ಫೋರ್ಜರಿ ಮಾಡಿರುವ ಶಂಕೆಯಿಂದ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಫೋರ್ಜರಿ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಕಲಿ ಲೆಟರ್‌ಹೆಡ್‌ನಲ್ಲಿ ಹೆಸರು ನಮೂದಿಸಿರುವ ಅಮಾಯಕ ‘ಫಲಾನುಭವಿ’ಗಳಿಂದ ಹಣ ವಸೂಲಿ ಮಾಡಿ, ಸಬ್ಸಿಡಿಗೆ ಮಂಜೂರಾತಿ ಪಡೆದಿದ್ದೇವೆ ಎಂದು ನಂಬಿಸಲು ಈ ಮಂಜೂರಾತಿ ಆದೇಶ ಸೃಷ್ಟಿಸಲಾಗಿದೆ.

ಈ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಪಿ ಬಾಗೇವಾಡಿ ಅವರು ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com