ಕೇವಲ ದಂಡ ವಿಧಿಸಿದರೆ ಅದು ರ್‍ಯಾಶ್ ಡ್ರೈವಿಂಗ್ ಉತ್ತೇಜಿಸಿದಂತಾಗುತ್ತದೆ: ಕರ್ನಾಟಕ ಹೈಕೋರ್ಟ್

ಅತೀ ವೇಗದ ಚಾಲನೆಯಿಂದಾಗಿ ಚಿಕ್ಕಮಗಳೂರಿನಲ್ಲಿ ನಡೆದಿದ್ದ ಅಪಘಾತದಲ್ಲಿ ಕಾರು ಚಾಲಕ ಸಾವು ಮತ್ತು ಮೂವರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಬ್ಯುಲೆನ್ಸ್ ಚಾಲಕನ ಆರು ತಿಂಗಳ ಶಿಕ್ಷೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್TNIE

ಬೆಂಗಳೂರು: ಅತೀ ವೇಗದ ಚಾಲನೆಯಿಂದಾಗಿ ಚಿಕ್ಕಮಗಳೂರಿನಲ್ಲಿ ನಡೆದಿದ್ದ ಅಪಘಾತದಲ್ಲಿ ಕಾರು ಚಾಲಕ ಸಾವು ಮತ್ತು ಮೂವರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಬ್ಯುಲೆನ್ಸ್ ಚಾಲಕನ ಆರು ತಿಂಗಳ ಶಿಕ್ಷೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಮೂಡಿಗೆರೆ ತಾಲೂಕಿನ ನಿಡಿವಾಲೆ ಗ್ರಾಮದ ಎಸ್.ಸಂತೋಷ್ ಎಂಬಾತನಿಗೆ ಸೆಷನ್ಸ್ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ದೃಢಪಡಿಸಿದ ಹೈಕೋರ್ಟ್, ಅಪಘಾತವು ಆಂಬ್ಯುಲೆನ್ಸ್ ಚಾಲನೆಯ ಅತೀ ವೇಗವನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಇಂತಹ ಪ್ರಕರಣಗಳಲ್ಲಿ ನಾಮಮಾತ್ರದ ಶಿಕ್ಷೆ ಅಥವಾ ಕೆಲವು ನೂರು ರೂಪಾಯಿಗಳ ದಂಡ ವಿಧಿಸಿದರೆ. ಅದು ಸಮಾಜಕ್ಕೆ ಮತ್ತು ಅಪಘಾತದ ಸಂತ್ರಸ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಲ್ಲದೆ ಇದು ಸಂಚಾರ ನಿಯಮಗಳು ಅಥವಾ ಮಾನವ ಪ್ರಾಣದ ಬಗ್ಗೆ ಕಾಳಜಿ ವಹಿಸದೆ ತಮ್ಮ ವಾಹನಗಳನ್ನು ದುಡುಕಿನ ರೀತಿಯಲ್ಲಿ ಚಾಲಕರು ಓಡಿಸಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೈಕೋರ್ಟ್ ನ ನ್ಯಾಯಮೂರ್ತಿ ಉಮೇಶ್ ಎಂ ಅಡಿಗ ಹೇಳಿದ್ದಾರೆ.

ಕರ್ನಾಟಕ ಹೈಕೋರ್ಟ್
ಬೆಂಗಳೂರು: ಆ್ಯಂಬುಲೆನ್ಸ್ ಚಾಲಕನ ಯಡವಟ್ಟು, 3 ಕಾರು ಮತ್ತು ಒಂದು ಬೈಕ್ ನಡುವೆ ಸರಣಿ ಅಪಘಾತ

2011ರ ಏಪ್ರಿಲ್ 19ರಂದು ಬಿದರಹಳ್ಳಿ ಗ್ರಾಮದಲ್ಲಿ ಆ್ಯಂಬುಲೆನ್ಸ್ ಚಲಾಯಿಸುತ್ತಿದ್ದ ಆರೋಪಿ ಮಾರುತಿ ಆಲ್ಟೊಗೆ ಡಿಕ್ಕಿ ಹೊಡೆದಿದ್ದನು. ಕಾರಿನ ಚಾಲಕ ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿತ್ತು. ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯವು 2014ರಲ್ಲಿ ಆರೋಪಿಗೆ ಆರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ರೂ 4,000 ದಂಡ ವಿಧಿಸಿತು. 2016ರಲ್ಲಿ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಜಿಲ್ಲಾ ನ್ಯಾಯಾಲಯ ನಿರಾಕರಿಸಿತ್ತು. ಹೀಗಾಗಿ ಆರೋಪಿ ಪರ ವಕೀಲರು ಅದನ್ನು ವಜಾಗೊಳಿಸಿದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಹೈಕೋರ್ಟ್ ಅಪರಾಧದ ಗಂಭೀರತೆ ಮತ್ತು ಪ್ರಕರಣದ ಸತ್ಯಗಳನ್ನು ನೋಡುವ ವಿಚಾರಣಾ ನ್ಯಾಯಾಲಯವು ಸರಿಯಾದ ಶಿಕ್ಷೆಯನ್ನು ವಿಧಿಸಿದೆ. ಇದು ತುಂಬಾ ಕಠೋರವೂ ಅಲ್ಲ ನಾಮಮಾತ್ರವೂ ಅಲ್ಲ. ಆದ್ದರಿಂದ ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com