ಪ್ರಜ್ವಲ್ ಪ್ರಕರಣದಲ್ಲಿ ಸುಳ್ಳು ದೂರು ದಾಖಲಿಸಲು ಮಹಿಳೆಗೆ ಒತ್ತಡ: ವ್ಯಕ್ತಿಯ ಪತ್ತೆಗೆ ಎಸ್ಐಟಿ ಶೋಧ

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಈಗ ಸಂಸದರ ವಿರುದ್ಧ ಸುಳ್ಳು ದೂರು ನೀಡುವಂತೆ ಮಹಿಳೆಗೆ ಒತ್ತಾಯ ಮಾಡಿದ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರonline desk

ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಈಗ ಸಂಸದರ ವಿರುದ್ಧ ಸುಳ್ಳು ದೂರು ನೀಡುವಂತೆ ಮಹಿಳೆಗೆ ಒತ್ತಾಯ ಮಾಡಿದ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಮಹಿಳೆಗೆ ಸುಳ್ಳು ಪ್ರಕರಣ ದಾಖಲಿಸುವಂತೆ ಒತ್ತಡ ಹೇಳಿದ ವ್ಯಕ್ತಿಯ ಶೋಧ ಕಾರ್ಯಕ್ಕಾಗಿ ಎಸ್ ಐಟಿ ಮುಂದಾಗಿದೆ.

ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡುವಂತೆ ತಮಗೆ ಒತ್ತಡ ಹೇರಲಾಗಿತ್ತು ಎಂದು ಮಹಿಳೆಯೊಬ್ಬರು NCW ಗೆ ಹೇಳಿಕೆ ನೀಡಿದ್ದನ್ನು ಸ್ವತಃ ರಾಷ್ಟ್ರೀಯ ಮಹಿಳಾ ಆಯೋಗ (NCW) ಬಹಿರಂಗಪಡಿಸಿತ್ತು. ಎನ್ ಸಿ ಡಬ್ಲ್ಯು ನೀಡಿದ ಮಾಹಿತಿಯ ಆಧಾರದ ಮೇಲೆ ಮಹಿಳೆಗೆ ಒತ್ತಡ ಹಾಕಿದವರನ್ನು ಪತ್ತೆ ಮಾಡಲು ಬಿಕೆ ಸಿಂಗ್ ನೇತೃತ್ವದ ಎಸ್ ಐಟಿ ತಂಡ ಕಾರ್ಯಾಚರಣೆ ಆರಂಭಿಸಿದೆ.

ಸಂಗ್ರಹ ಚಿತ್ರ
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸರೆಂದು ಹೇಳಿಕೊಂಡ ಮೂವರಿಂದ ಸುಳ್ಳು ದೂರು ದಾಖಲಿಸಲು ಸಂತ್ರಸ್ತೆಗೆ ಒತ್ತಾಯ- NCW

ತನಿಖಾ ತಂಡದ ಭಾಗವಾಗಿರುವ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಎನ್ ಸಿಡಬ್ಲ್ಯು ಉಲ್ಲೇಖಿಸಿರುವ ಮಹಿಳೆಯನ್ನು ಈ ಹಿಂದೆ ಎಸ್‌ಐಟಿಯಿಂದ ಯಾರೂ ಆಕೆಯನ್ನು ಸಂಪರ್ಕಿಸಿಲ್ಲ ಮತ್ತು ಈ ಸಂಬಂಧ ತಮಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಿದ್ದು ಮಹಿಳೆಗೆ ಯಾರೇ ಒತ್ತಡ ಹೇರಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com