ನಕಲಿ ಕರೆನ್ಸಿ ಹಂಚಲು ಮೃತ ವ್ಯಕ್ತಿಯ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿದ ವಂಚಕ!

'ಪ್ರಿಯಾ ಮೆಹ್ತಾ' ಎಂಬ ಬಳಕೆದಾರರ ಐಡಿ ಹೆಸರಿನಲ್ಲಿ fake_currency_sellter2023 ಎಂಬ ಐಡಿ ಬಳಸಿ ಆದಿತ್ಯ ಸಿಂಗ್ ನಕಲಿ ಟೆಲಿಗ್ರಾಮ್ ಖಾತೆ ತೆರೆದಿದ್ದನು ಎಂದು NIA ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಭಾರತೀಯ ನಕಲಿ ನೋಟುಗಳ (FICNs) ಮುದ್ರಣ ಮತ್ತು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಲ್ಲಿಸಿದ ಆರೋಪಪಟ್ಟಿಯಲ್ಲಿ ಆದಿತ್ಯ ಸಿಂಗ್ ಅಲಿಯಾಸ್ ವಿವೇಕ್ ಠಾಕೂರ್ (22ವ) ಉತ್ತರ ಪ್ರದೇಶ, ಆರೋಪಿ ನಂ.1, 2021 ರಲ್ಲಿ ಮೃತಪಟ್ಟ ಆಶಾ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ.

'ಪ್ರಿಯಾ ಮೆಹ್ತಾ' ಎಂಬ ಬಳಕೆದಾರರ ಐಡಿ ಹೆಸರಿನಲ್ಲಿ fake_currency_sellter2023 ಎಂಬ ಐಡಿ ಬಳಸಿ ಆದಿತ್ಯ ಸಿಂಗ್ ನಕಲಿ ಟೆಲಿಗ್ರಾಮ್ ಖಾತೆ ತೆರೆದಿದ್ದನು ಎಂದು NIA ಹೇಳಿದೆ. ಟೆಲಿಗ್ರಾಮ್ ಖಾತೆಯ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಹೆಚ್ಚಿನ ಆದಾಯವನ್ನು ನೀಡುವ ಸುಳ್ಳು ಭರವಸೆಯೊಂದಿಗೆ ವಾಟ್ಸಾಪ್ ಮೂಲಕ ಹಲವಾರು ವ್ಯಕ್ತಿಗಳನ್ನು ಸಂಪರ್ಕಿಸಿ ನಕಲಿ ನೋಟುಗಳನ್ನು ಹಂಚಲು ಪ್ರಯತ್ನಿಸುತ್ತಿದ್ದನು.

ಈ ಪ್ರಕರದಲ್ಲಿ ತನಿಖಾಧಿಕಾರಿಗಳು ಆರೋಪಿಯ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ ಸಾಕ್ಷಿಗಳ ಹೇಳಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಖಾತೆಯಲ್ಲಿ ಮೊತ್ತವನ್ನು ಠೇವಣಿ ಮಾಡಿದ ನಂತರ, ಠೇವಣಿದಾರರಿಗೆ ಹಣ ಹಿಂದಿರುಗಿಸಲು ನಿರಾಕರಿಸಿದ್ದಾನೆ.

ಆರೋಪಿಗಳ ನಡುವಿನ ದೂರವಾಣಿ ಕರೆಗಳನ್ನು ತನಿಖಾ ಸಂಸ್ಥೆ ಕದ್ದಾಲಿಸಿತ್ತು. ಸಂಭಾಷಣೆಯ ಸಮಯದಲ್ಲಿ, ಕೊರಿಯರ್ ಮೂಲಕ ಎಫ್‌ಐಸಿಎನ್‌ಗಳನ್ನು ಕಳುಹಿಸುವ ಕುರಿತು ಆರೋಪಿ ನಂ.2 ಸುಳುವಾಯಿ ಮಹೇಂದ್ರ ಅಲಿಯಾಸ್ ಮಹೇಂದ್ರನೊಂದಿಗೆ ಆದಿತ್ಯ ಸಿಂಗ್ ಚರ್ಚಿಸಿದ್ದಾನೆ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ವಿವರಿಸಿದೆ.

ಸಾಂದರ್ಭಿಕ ಚಿತ್ರ
32 ಕೋಟಿ ರೂ. ಮೌಲ್ಯದ 62 ಬಿಟ್ ಕಾಯಿನ್ ಕಳ್ಳತನ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಿ ಬಂಧನ: ಗೃಹ ಸಚಿವ ಪರಮೇಶ್ವರ

ಆರೋಪಿಗಳು ದೊಡ್ಡ ಸಂಚಿನ ಭಾಗವಾಗಿ ಗಡಿ ದೇಶಗಳಿಂದ ಹೆಚ್ಚಿನ ಪ್ರಮಾಣದ ನಕಲಿ ನೋಟುಗಳನ್ನು ಆಮದು ಮಾಡಿಕೊಳ್ಳುವಲ್ಲಿ ತೊಡಗಿಸಿಕೊಂಡಿದ್ದಾರೆ. ಆಮದು ಮಾಡಿಕೊಂಡ ಕಾಗದ ಮತ್ತು ಉತ್ತಮ ಗುಣಮಟ್ಟದ ಪ್ರಿಂಟರ್‌ಗಳನ್ನು ಬಳಸಿ ನೋಟುಗಳನ್ನು ಮುದ್ರಿಸಿ ಆ ನೋಟುಗಳನ್ನು ಭಾರತದಾದ್ಯಂತ ಚಲಾವಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರಕ್ಕೆ ಮಾಹಿತಿ ಲಭಿಸಿದೆ. ಅಪರಾಧಗಳ ಗಂಭೀರತೆ ಅರಿತು ಕಳೆದ ವರ್ಷ ಕೇಂದ್ರ ಸರ್ಕಾರ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ನಿರ್ದೇಶನ ನೀಡಿತು. ಅದರಂತೆ ಎನ್ ಐಎ ತನಿಖೆ ನಡೆಸಿತ್ತು.

ಆದಿತ್ಯ ಸಿಂಗ್ ಮನೆಯಲ್ಲಿ ಶೋಧ ನಡೆಸಿದಾಗ, ಎನ್‌ಐಎ ಲ್ಯಾಪ್‌ಟಾಪ್, ಪ್ರಿಂಟರ್, ಸೆಕ್ಯುರಿಟಿ ಥ್ರೆಡ್ ಹೊಂದಿರುವ ಬಿಳಿ ಬಣ್ಣದ ಕರೆನ್ಸಿ ಪ್ರಿಂಟಿಂಗ್ ಪೇಪರ್‌ಗಳು ಮತ್ತು 500, 200, 100 ರೂ ಮುಖಬೆಲೆಯ ನೋಟುಗಳು ಮತ್ತು 70,920 ರೂಪಾಯಿ ಶಂಕಿತ ನೋಟುಗಳನ್ನು ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ (ಪಿ) ಲಿಮಿಟೆಡ್‌ಗೆ ಕಳುಹಿಸಲಾಗಿದ್ದು, ಅವು ಅಸಲಿ ಅಲ್ಲ ನಕಲಿ ಎಂದು ದೃಢಪಟ್ಟಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com