

ಬೆಂಗಳೂರು: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ರಾಜಕಾರಣಿಗಳ ದ್ವೇಷದ ಭಾಷಣದ ಬಗ್ಗೆ ಭಾರತೀಯ ಚುನಾವಣಾ ಆಯೋಗದ (ECI) ಕ್ರಮ ಕೈಗೊಳ್ಳದಿರುವುದರ ವಿರುದ್ಧ ಧ್ವನಿ ಎತ್ತಿರುವ ನಾಗರಿಕ ಸಮಾಜದ ಸದಸ್ಯರು ಪೋಸ್ಟ್‌ಕಾರ್ಡ್ ನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲು ಅಂಚೆ ಕಚೇರಿಗಳು ಮತ್ತು ಅಂಚೆ ಪೆಟ್ಟಿಗೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಬೆಂಗಳೂರು, ಮೈಸೂರು ಸೇರಿದಂತೆ ದೇಶದ 11 ನಗರಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
#GrowASpineOrResign ಅಭಿಯಾನವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಉತ್ತೇಜಿಸಲು ಚುನಾವಣಾ ಆಯೋಗವನ್ನು ನಾಗರಿಕರು ಒತ್ತಾಯಿಸಿದರು. ಹಲವು ಬಿಜೆಪಿ ನಾಯಕರು ದ್ವೇಷದ ಭಾಷಣ ಮಾಡುತ್ತಿದ್ದು ಅವರ ವಿರುದ್ಧ ದಂಡನಾತ್ಮಕ ಕ್ರಮಕ್ಕಾಗಿ ಒತ್ತಾಯಿಸಿದರು. ಚುನಾವಣಾ ಮಾದರಿ ನೀತಿ ಸಂಹಿತೆಯನ್ನು (MCC) ಬಹಿರಂಗವಾಗಿ ಉಲ್ಲಂಘಿಸಿದ್ದಾರೆ ಎಂದು ಆಪಾದಿಸಿದರು.
ವಿನಯ್ ಕುಮಾರ್ ಎಂಬ ಕಾರ್ಯಕರ್ತ ದ್ವೇಷ ಭಾಷಣದ ವಿರುದ್ಧ ಇಸಿಐ ಯಾವುದೇ ಕ್ರಮ ಕೈಗೊಂಡರೂ ನಿಷ್ಪ್ರಯೋಜಕವಾಗಿದೆ. ಅಂತಹ ಹೇಳಿಕೆಗಳನ್ನು ನೀಡುವುದರಿಂದ ಪ್ರಧಾನಿಯನ್ನು ಸಹ ತಡೆದಿಲ್ಲ. ಮೇಲಾಗಿ, ಚುನಾವಣೆಯ ನಂತರವೂ ಇದು ಸಮಾಜದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂಬುದು ಕಳವಳಕಾರಿಯಾಗಿದೆ ಎಂದು ಹೇಳುತ್ತಾರೆ.
ಬೆಂಗಳೂರಿನ 200 ಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು ದೇಶಾದ್ಯಂತ ಸಾವಿರಾರು ಜನರು ವಿನಯ್ ಕುಮಾರ್ ವಿನ್ಯಾಸಗೊಳಿಸಿದ ಪೋಸ್ಟ್‌ಕಾರ್ಡ್‌ಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಕಳುಹಿಸಿದ್ದಾರೆ. ವಕೀಲರು, ಕಾರ್ಯಕರ್ತರು, ಚಲನಚಿತ್ರ ನಿರ್ಮಾಪಕರು ಮತ್ತು ನಾಗರಿಕರು ಸೇರಿದಂತೆ 20 ಸಂಸ್ಥೆಗಳ ಸಹಿಯೊಂದಿಗೆ ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈನಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳಿಗೆ ತಂಡ ಜಂಟಿ ದೂರನ್ನು ಸಲ್ಲಿಸಿದೆ.
Advertisement