
ಹೊಳೆನರಸೀಪುರ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ಹೊಳೆನರಸೀಪುರದ ಹೆಚ್ ಡಿ ರೇವಣ್ಣ ಅವರ ನಿವಾಸ ಹಾಗೂ ಪ್ರಜ್ವಲ್ ರೇವಣ್ಣ ಕ್ವಾರ್ಟರ್ಸ್ ಗೆ ಎಸ್ ಐಟಿಯೊಂದಿಗೆ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸೋಮವಾರ ಭೇಟಿ ನೀಡಿದ್ದಾರೆ.
ಎರಡೂ ಮನೆಗಳಿಂದ ಮಾದರಿಗಳನ್ನು ಎಫ್ಎಸ್ ಎಲ್ ತಂಡ ಸಂಗ್ರಹಿಸಿದೆ. ಮಲಗುವ ಕೋಣೆಗಳು, ಅಡುಗೆಮನೆ ಮತ್ತು ತೊಳೆಯುವ ಪ್ರದೇಶಗಳಿಗೆ ಭೇಟಿ ನೀಡಿದ ತಂಡ, ಛಾಯಾಚಿತ್ರಗಳನ್ನು ತೆಗೆದುಕೊಂಡಿದೆ. ಹೊಳೆನರಸೀಪುರ ಪಟ್ಟಣದ ಎಚ್.ಡಿ.ರೇವಣ್ಣ ನಿವಾಸದಲ್ಲಿ ಎರಡೂವರೆ ಗಂಟೆ ಕಾಲ ಕಳೆದಿದೆ. ಅಧಿಕಾರಿಗಳು ಕೆಲವು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲು ವಶಕ್ಕೆ ಪಡೆದರು.
ಇದಕ್ಕೂ ಮುನ್ನಾ ಇತ್ತೀಚೆಗೆ ಸ್ಪಾಟ್ ಮಹಜರ್ ನಂತರ ಸೀಜ್ ಮಾಡಲಾಗಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರ ಕ್ವಾರ್ಟರ್ಸ್ ಗೆ ಎಫ್ ಎಸ್ ಎಲ್ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಪ್ರಜ್ವಲ್ ರೇವಣ್ಣ ಅವರ ಕ್ವಾರ್ಟರ್ಸ್ ಮತ್ತು ಎಚ್‌ಡಿ ರೇವಣ್ಣ ಅವರ ನಿವಾಸದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
Advertisement