
ಕೊಡಗು: ಮನುಷ್ಯ ವಾಸಸ್ಥಳಕ್ಕೆ ನುಗ್ಗಿದ್ದ ಕಾಡಾನೆಗೆ ರೇಡಿಯೋ ಕಾಲರ್ ಅವಳಡಿಕೆ ಮಾಡಲಾಗಿದ್ದು, ಅದನ್ನು ಮರು ಸ್ಥಳಾಂತರ ಮಾಡಲಾಗಿದೆ.
ವಿರಾಜಪೇಟೆ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ರೇಡಿಯೋ ಕಾಲರ್ ಅಳವಡಿಕೆ ಮಾಡಿದ್ದ ಆನೆಯನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಶೀಘ್ರವೇ ಸ್ಥಳಾಂತರಿಸಲಾಗುತ್ತದೆ.
ಈ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚಿನ ಅರಣ್ಯ ಸಿಬ್ಬಂದಿಗಳು ಭಾಗಿಯಾಗಿದ್ದರು. ಮುಂದಿನ ದಿನಗಳಲ್ಲಿ ಇನ್ನೂ 2 ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಇಲಾಖೆ ಚಿಂತನೆ ನಡೆಸಿದೆ.
ಕಳೆದ 4 ತಿಂಗಳ ಹಿಂದೆ ಜಿಲ್ಲೆಯ ಎಸ್ಟೇಟ್ ನಲ್ಲಿ ಮಹಿಳಾ ಕಾರ್ಮಿಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಅದಷ್ಟೇ ಅಲ್ಲದೇ ಆಸ್ತಿ ಹಾನಿಯೂ ಸಂಭವಿಸಿದ್ದರಿಂದ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹೆಚ್ಚಿನ ಒತ್ತಡ ಇತ್ತು.
ಆನೆಗೆ ದಕ್ಷ ಎಂದು ನಾಮಕರಣ ಮಾಡಲಾಗಿದ್ದು ಅದನ್ನು ಸೆರೆಹಿಡಿಯಲು ಮತ್ತು ರೇಡಿಯೊ ಕಾಲರ್ ಮಾಡಲು ಇಲಾಖೆ ಅನುಮತಿಯನ್ನು ಪಡೆದಿದೆ.
Advertisement