
ಕೊಪ್ಪಳ: ಜಿಲ್ಲೆಯ ತಾವರಗೆರ ಎಂಬಲ್ಲಿ ಕಳೆದ ರಾತ್ರಿ ಸಾರ್ವಜನಿಕ ಶೌಚಾಲಯದ ಗೋಡೆ ಕುಸಿದುಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತರನ್ನು 34 ವರ್ಷದ ಬಾನು ಬೇಗಂ ಮತ್ತು 45 ವರ್ಷದ ಉಮಾ ಬಪ್ಪರಗಿ ಎಂದು ಗುರುತಿಸಲಾಗಿದೆ.
ಶೌಚಾಲಯ ಶಿಥಿಲಾವಸ್ಥೆಯಲ್ಲಿದ್ದರಿಂದ ನಿನ್ನೆ ಸುರಿದ ಮಳೆಗೆ ಕುಸಿದುಬಿದ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
5 ಮಂದಿ ಸಾವು: ಕೊಪ್ಪಳ ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಮಹಿಳೆಯರು ಶೌಚಾಲಯ ಗೋಡೆ ಕುಸಿದುಬಿದ್ದು ಮೃತಪಟ್ಟರೆ ಇನ್ನು ಮೂವರು ಖಾಸಗಿ ಬಸ್ಸೊಂದು ಮುನಿರಾಬಾದ್ ಸಮೀಪ ಸಂಚರಿಸುತ್ತಿದ್ದ ವೇಳೆ ಟ್ರಾಕ್ಟರ್ ಟ್ರಾಲಿ ಮೇಲೆ ಹರಿದು ಜಖಂಗೊಂಡು ಮೂವರು ಮೃತಪಟ್ಟಿದ್ದಾರೆ.
Advertisement