
ಚಿಕ್ಕೋಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮಾರಿ ಸಿದ್ದ ಎಂದು ಲೇವಡಿ ಮಾಡಿದ್ದ ನಟ ಅಹಿಂಸಾ ಚೇತನ್ ಇದೀಗ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕುರಿತಂತೆ ಮತ್ತೊಮ್ಮೆ ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ.
ಬಜೆಟ್ನಲ್ಲಿ ಅಲೆಮಾರಿ ಜನಾಂಗಕ್ಕೆ ಒಂದೇ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಆದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿನ ಅಂಜನಾದ್ರಿ ಹನುಮ ಜನ್ಮ ಭೂಮಿಗೆ 100 ಕೋಟಿ ರೂ. ಕೊಟ್ಟಿದೆ. ಇದು ಸರ್ಕಾರದ ಆದ್ಯತೆನಾ ಎಂದು ಚೇತನ ಪ್ರಶ್ನಿಸಿದ್ದಾರೆ.
ಅಂಜನಾದ್ರಿ ಹನುಮ ಮಂದಿರ ಅಭಿವೃದ್ದಿಗೆ ಕೊಟ್ಟಿರುವ ಹಣವನ್ನು ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಬಳಕೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಚಿಕ್ಕೋಡಿಯಲ್ಲಿ 82 ಕುಟುಂಬಗಳು ಇನ್ನೂ ಕೂಡ ಬಡತನದಲ್ಲಿದ್ದು ಗುಡಿಸಲಿನಲ್ಲಿ ಬದುಕು ಸಾಗಿಸುತ್ತಿವೆ. ಚಿಕ್ಕೋಡಿ ಪಟ್ಟಣದ ರಾಮನಗರ ಅಲೆಮಾರಿ ಜನಾಂಗದವರಿಗೆ ಸೂರು ನೀಡುವಂತೆ ಒತ್ತಾಯಿಸಿದ್ದಾರೆ.
ಇದೇ ವೇಳೆ ಜಾತಿ ಜನಗಣತಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ನಟ ಚೇತನ, ಸಿದ್ದರಾಮಯ್ಯ ಅಹಿಂದ ಪರ ಕೆಲಸ ಮಾಡುತ್ತಿಲ್ಲ ಅವರು ಸೋಮಾರಿ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದ್ದಾರೆ.
ಸಿಎಂ 'ಸೋಮಾರಿ' ಸಿದ್ದು ಈ ಪುಸ್ತಕ ಉಡುಗೊರೆ ನೀಡಿದ್ದು ಎಷ್ಟು ಸರಿ? ನಟ ಚೇತನ್ ಕುಮಾರ್ ವ್ಯಂಗ್ಯ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ ಗಳಿಗೆ ಬಾಬಾಸಾಹೇಬ್ ಅವರ ಅನೀಹಿಲೇಷನ್ ಆಫ್ ಕಾಸ್ಟ್ ಕೃತಿಯ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಗೊರೆಯಾಗಿ ಕೊಟ್ಟಿರುವುದಕ್ಕೆ ನಟ ಚೇತನ್, ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ವ್ಯಂಗ್ಯವಾಡಿದ್ದರು. SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ಗಳಿಗೆ ಬಾಬಾಸಾಹೇಬ್ ಅವರ 'ಅನೀಹಿಲೇಷನ್ ಆಫ್ ಕಾಸ್ಟ್' ಕೃತಿಯ ಪ್ರತಿಯನ್ನು ಸಿಎಂ 'ಸೋಮಾರಿ' ಸಿದ್ದು ನೀಡಿದ್ದಾರೆ. ಎಷ್ಟು ವಿಪರ್ಯಾಸ ಎಂದು ಟೀಕಿಸಿದ್ದಾರೆ.
Advertisement