
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕಪಣದಲ್ಲಿ ಸಂತ್ರಸ್ತೆಯರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ರಕ್ಷಣೆ ನೀಡುತ್ತಿದ್ದೇವೆ, ಈಗಾಗಲೇ ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ, ರೇಂಜ್ ಡಿಐಜಿಗೆ ತಿಳಿಸಿದ್ದೇವೆ. ಮೇ 31ರಂದು ಸಾಹಿತಿಗಳೆಲ್ಲ ಹಮ್ಮಿಕೊಂಡಿರುವ ಹಾಸನ ಚಲೋ ಸಾರ್ವಜನಿಕ ಅರಿವಿಗೆ ಮಾಡುತ್ತಿರಬಹುದು, ಮಾಡಲಿ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೆನ್ ಡ್ರೈವ್ ಪ್ರಕರಣದಲ್ಲಿ ನಿಜವಾದ ಆರೋಪಿ ಯಾರು, ಪ್ರಜ್ವಲ್ ಪಾತ್ರವೇನು ಎಂದು ತಿಳಿಯಲು ಎಸ್ ಐಟಿ ರಚನೆ ಮಾಡಿ ತನಿಖೆ ಮಾಡಿಸುತ್ತಿರುವುದು. ತನಿಖೆಯಾದ ಮೇಲೆ ಪೆನ್ ಡ್ರೈವ್ ತಯಾರು ಮಾಡಿದ್ದು, ಹಂಚಿಕೆ ಮಾಡಿದ್ದು ಯಾರು ಎಂದೆಲ್ಲ ಸರಿಯಾಗಿ ಗೊತ್ತಾಗಲಿದೆ ಎಂದರು.
ಪ್ರಕರಣದ ತನಿಖೆಯಾಗುತ್ತಿದೆ, ಈ ಹಂತದಲ್ಲಿ ನಾವು ಹೇಳಿಕೆಗಳನ್ನು ನೀಡಿದರೆ ಅದು ತನಿಖೆಗೆ ತೊಂದರೆಯಾಗಬಹುದು ಎಂದರು.
ಅನುಮಾನ ಮೂಡಿಸಿದ ಎಸ್ಐಟಿ ನಡೆ: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಸಂಬಂಧ ಎಸ್ಐಟಿ ಪೊಲೀಸರ ನಡೆ ಮೇಲೆ ಅನುಮಾನ ಮೂಡುತ್ತಿದೆ. ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದ ಐವರು ಪ್ರಮುಖ ಆರೋಪಿಗಳನ್ನು ಎಸ್ಐಟಿ ಬಂಧಿಸಿಲ್ಲ. ಹೀಗಾಗಿ ಎಸ್ಐಟಿ ತನಿಖಾ ವೈಖರಿ ಅಚ್ಚರಿ ಮೂಡಿಸಿದೆ. ಪ್ರಕರಣದಲ್ಲಿ ಆರು, ಏಳು, ಎಂಟನೇ ಆರೋಪಿಗಳೆಂದು ಮೂವರನ್ನು ಬಂಧಿಸಲಾಗಿದೆ.
ತಂಗೌಡ ಆಪ್ತ ಲಿಖಿತ್ ಗೌಡ, ಕಚೇರಿ ಸಹಾಯಕ ಚೇತನ್ ಹಾಗೂ ವಕೀಲ ದೇವರಾಜೇಗೌಡನನ್ನು ಬಂಧಿಸಲಾಗಿದೆ. ಆದರೆ ಎಫ್ಐಆರ್ನಲ್ಲಿ ಹೆಸರಿದ್ದ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಆಪ್ತ ಪುಟ್ಟಿ ಅಲಿಯಾಸ್ ಪುಟ್ಟರಾಜ್, ವೀಡಿಯೋ ಹಂಚಿಕೆಯ ಪ್ರಮುಖ ಆರೋಪಿ ನವೀನ್ ಗೌಡ, ಚೇತನ್ ಹಾಗು ಪ್ರೀತಂಗೌಡ ಆಪ್ತ ಶರತ್ನನ್ನು ಬಂಧಿಸಿಲ್ಲ.
Advertisement