
ಬೆಂಗಳೂರು: ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆ ವೇಳೆ ಮೊಬೈಲ್ ಕಳ್ಳತನ ಮಾಡಿದ್ಗ ವ್ಯಕ್ತಿಯನ್ನು ಬಂಧಿಸಿರುವ ಸಿದ್ದಾಪುರ ಠಾಣೆ ಪೊಲೀಸರು 19.50 ಲಕ್ಷ ಮೌಲ್ಯದ 32 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಪಂಕಜ್ ಸಿಂಗ್ ಬಂಧಿತ ಆರೋಪಿ, ಈತ ಜಾರ್ಖಂಡ್ ಮೂಲದವನು, ಕ್ರಿಕೆಟ್ ವೀಕ್ಷಣೆಗೆಂದು ಜಾರ್ಖಂಡ್‌ನಿಂದ ಬಂದು ಲಾಲ್ ಬಾಗ್ ಸೇರಿದಂತೆ ಜನಸಂದಣಿ ಇರುವ ಪ್ರದೇಶ ಹಾಗೂ ಬಸ್‌ಗಳಲ್ಲಿ ಸಾರ್ವಜನಿಕರಂತೆ ವರ್ತಿಸಿ ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡಿದ್ದ.
ಆರೋಪಿ ಪಂಕಜ್ ಸಿಂಗ್, ಮೇ 18ರಂದು ಐಪಿಎಲ್ ಪಂದ್ಯ ವೀಕ್ಷಿಸಲು ಕುಟುಂಬ ಸಮೇತ ಬಂದಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರ ಮೊಬೈಲ್ ಕದ್ದಿದ್ದ. ಕದ್ದ ಮೊಬೈಲ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸೋಮೇಶ್ವರನಗರ ಮುಖ್ಯರಸ್ತೆಯಲ್ಲಿ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಆತನ ಮನೆಯನ್ನು ಶೋಧಿಸಿದಾಗ ಇತರ ಫೋನ್‌ಗಳು ಪೊಲೀಸರಿಗೆ ಸಿಕ್ಕಿವೆ. ಉಳಿದ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Advertisement