ಬೆಂಗಳೂರು: ಜೂನ್ 7 ರಿಂದ ಚಾಲಕ ರಹಿತ ಮೆಟ್ರೋ ರೈಲಿನ ಸಿಗ್ನಲಿಂಗ್ ಪರೀಕ್ಷೆ

BMRCL ಪ್ರಾರಂಭದಲ್ಲಿ ಪ್ರತಿ 20 ನಿಮಿಷಗಳಿಗೊಮ್ಮೆ ಒಂದು ಸಂಚಾರ ನಡೆಸುವ ಯೋಜನೆ ಹೊಂದಿದೆ. 18.82 ಕಿಮೀ ಎತ್ತರದ ಮಾರ್ಗವು ಅದರ ಎಲ್ಲಾ 16 ನಿಲ್ದಾಣಗಳು ಮತ್ತು ಇತರ ಮೂಲಸೌಕರ್ಯಗಳನ್ನು ಸಿದ್ಧಪಡಿಸಿದೆ.
ಚಾಲಕ ರಹಿತ ಮೆಟ್ರೋ ರೈಲು
ಚಾಲಕ ರಹಿತ ಮೆಟ್ರೋ ರೈಲು
Updated on

ಬೆಂಗಳೂರು: ಬಿಎಂಆರ್‌ಸಿಎಲ್‌ನಿಂದ ಚಾಲನೆಗೊಳ್ಳಲಿರುವ ಮೊದಲ ಮಾನವರಹಿತ ರೈಲಿನ ಪರೀಕ್ಷೆಯು ಮುಕ್ತಾಯದ ಹಂತದಲ್ಲಿದೆ, ಸಿಗ್ನಲಿಂಗ್ ವ್ಯವಸ್ಥೆಯನ್ನು ಪ್ರೋಟೋಟೈಪ್ ರೈಲಿನೊಂದಿಗೆ ಸಂಯೋಜಿಸಲು ಸಂಬಂಧಿಸಿದ ಪರೀಕ್ಷೆಗಳು ಜೂನ್ 7 ರಂದು ಪ್ರಾರಂಭವಾಗಲಿವೆ.

ಇವುಗಳು ಚಾಲಕ ರಹಿತ ರೈಲಿನ ಮುಖ್ಯ ಪರೀಕ್ಷೆಯ ಭಾಗವಾಗಿದೆ ಎಂದು ಹಿರಿಯ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ (ಹಳದಿ ರೇಖೆ) ವಾಣಿಜ್ಯ ಕಾರ್ಯಾಚರಣೆಗಳನ್ನು ಯೋಜಿಸಿದಂತೆ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

BMRCL ಪ್ರಾರಂಭದಲ್ಲಿ ಪ್ರತಿ 20 ನಿಮಿಷಗಳಿಗೊಮ್ಮೆ ಒಂದು ಸಂಚಾರ ನಡೆಸುವ ಯೋಜನೆ ಹೊಂದಿದೆ. 18.82 ಕಿಮೀ ಎತ್ತರದ ಮಾರ್ಗವು ಅದರ ಎಲ್ಲಾ 16 ನಿಲ್ದಾಣಗಳು ಮತ್ತು ಇತರ ಮೂಲಸೌಕರ್ಯಗಳನ್ನು ಸಿದ್ಧಪಡಿಸಿದೆ. ಆದರೆ ಚೀನಾದ ಸಂಸ್ಥೆಯಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್‌ನಿಂದ ಸಂವಹನ ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ರೈಲುಗಳ ಪೂರೈಕೆಯಲ್ಲಿ ವಿಳಂಬದಿಂದಾಗಿ ಬಹುನಿರೀಕ್ಷಿತ ಪ್ರಯಾಣಕ್ಕೆ ಇನ್ನೂ ಚಾಲನೆ ದೊರೆತಿಲ್ಲ.

ಹೆಬ್ಬಗೋಡಿ ಡಿಪೋದ ಕಾರ್ಯಾಚರಣೆಗಳ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ವಿಶೇಷ ಪ್ರವೇಶವನ್ನು ನೀಡಲಾಯಿತು, ಅಲ್ಲಿ ಶಾಂಘೈನಿಂದ ಚೆನ್ನೈ ಮೂಲಕ ಫೆಬ್ರವರಿ 14 ರಂದು ಆಗಮಿಸಿದ ರೈಲು ವಿವಿಧ ಸ್ಥಿರ ಪರೀಕ್ಷೆಗಳಿಗೆ ಒಳಗಾಗುತ್ತಿದೆ. ರೈಲು ನಿಂತಾಗ ಸ್ಥಿರ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅವುಗಳು ಸಿಗ್ನಲ್ ಮತ್ತು ಸಾಫ್ಟ್ವೇರ್ ಚೆಕ್, ವೈರಿಂಗ್, ಕೆಲವು ಇಂಟರ್ಫೇಸ್ (ವಿವಿಧ ಸಾಧನಗಳ ನಡುವಿನ ಸಂವಹನ) ಮತ್ತು ಕ್ರಿಯಾತ್ಮಕ ತಪಾಸಣೆಗಳನ್ನು ಒಳಗೊಂಡಿವೆ. ನಾವು ಅವುಗಳನ್ನು ಬಹುತೇಕ ಪೂರ್ಣಗೊಳಿಸಿದ್ದೇವೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.

ಚಾಲಕ ರಹಿತ ಮೆಟ್ರೋ ರೈಲು
ಶಕ್ತಿ ಯೋಜನೆ ಹೊರತಾಗಿಯೂ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಶೇ. 30 ರಷ್ಟು ಹೆಚ್ಚಳ: ಸಚಿವ ರಾಮಲಿಂಗಾ ರೆಡ್ಡಿ

ಬೊಮ್ಮಸಂದ್ರ ಮತ್ತು ಬೊಮ್ಮನಹಳ್ಳಿ ನಡುವೆ ಚಾಲಕ ರಹಿತ ರೈಲಿನ ಸರಳ ಪರೀಕ್ಷಾರ್ಥ ಸಂಚಾರ ನಡೆಸಲಾಯಿತು. ಬೊಮ್ಮನಹಳ್ಳಿ ಮತ್ತು ಆರ್‌ವಿ ರಸ್ತೆ ನಡುವಿನ ಸ್ಟ್ರೆಚ್‌ನ ವಿದ್ಯುತ್ ಪೂರೈಕೆ ಮೇ 20 ರಂದು ಪೂರ್ಣಗೊಂಡಿದೆ. ಈಗ ಸಂಪೂರ್ಣ ಸ್ಟ್ರೆಚ್‌ನಲ್ಲಿ ಮುಖ್ಯ ಪರೀಕ್ಷೆಯನ್ನು ಮಾಡಬಹುದು ಎಂದು ಮೂಲಗಳು ತಿಳಿಸಿವೆ.

ಸಿಗ್ನಲ್ ಏಕೀಕರಣದ ಹೊರತಾಗಿ, ಮೂರನೇ ರೈಲು (ರೈಲು ಓಡಿಸಲು ಶಕ್ತಿಯನ್ನು ಪೂರೈಸುವ 750 ವೋಲ್ಟ್ ಟ್ರ್ಯಾಕ್) ಮತ್ತು ರೈಲು ಕಾರ್ಯಕ್ಷಮತೆ ಪರೀಕ್ಷೆಗಳನ್ನು ಮಾಡಲಾಗುತ್ತದೆ. "ರೈಲನ್ನು ಆರಂಭದಲ್ಲಿ ನಿಧಾನಗತಿಯ ವೇಗದಲ್ಲಿ ಮತ್ತು ನಂತರ ಶಿಫಾರಸು ಮಾಡಿದ ವೇಗದಲ್ಲಿ ಓಡಿಸಲಾಗುತ್ತದೆ ಎಂದು ಮತ್ತೊಂದು ಮೂಲವು ತಿಳಿಸಿದೆ. CBTC ರೈಲನ್ನು ನಿರ್ವಾಹಕರೊಂದಿಗೆ ಅಥವಾ ಇಲ್ಲದೆ ಓಡಿಸಬಹುದು ಎಂದು ಅವರು ಹೇಳಿದರು. ಸಿಆರ್‌ಆರ್‌ಸಿಯ ಭಾರತೀಯ ಪಾಲುದಾರರಾಗಿರುವ ಪಶ್ಚಿಮ ಬಂಗಾಳದ ಟಿಟಾಗರ್ ರೈಲ್ ಸಿಸ್ಟಮ್ಸ್, ಬೆಂಗಳೂರು ಮೆಟ್ರೋಗೆ ರೈಲುಗಳನ್ನು ನಿಗದಿತ ರೀತಿಯಲ್ಲಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ರೋಬೋಟಿಕ್ ಸ್ವಯಂಚಾಲಿತ ಜೋಡಣೆ ಮಾರ್ಗವನ್ನು ಸ್ಥಾಪಿಸಿದೆ. ಎರಡನೇ ರೈಲು ಆಗಸ್ಟ್‌ನಲ್ಲಿ, ಮುಂದಿನ ಸೆಪ್ಟೆಂಬರ್‌ನಲ್ಲಿ ಮತ್ತು ಮೂರು ಡಿಸೆಂಬರ್‌ನೊಳಗೆ ಬರಲಿವೆ. ಆರು ರೈಲುಗಳಲ್ಲಿ, ಬಿಎಂಆರ್‌ಸಿಎಲ್ ಐದನ್ನು ಓಡಿಸಲಿದೆ ಮತ್ತು ಒಂದನ್ನು ಬ್ಯಾಕಪ್ ಆಗಿ ಇರಿಸುತ್ತದೆ ಎಂದು ಇನ್ನೊಂದು ಮೂಲವು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com