ಕಾರವಾರ: ರಸ್ತೆ ವಿಸ್ತರಣೆಗಾಗಿ ಶಿರಸಿ-ಕುಮಟಾ ಹೆದ್ದಾರಿಯನ್ನು ಮುಚ್ಚಿರುವ ವಿಚಾರವಾಗಿ ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರು ಹಿರಿಯ ಐಎಎಸ್ ಅಧಿಕಾರಿ ಮತ್ತು ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಅಧಿಕಾರಿ ರಿತೇಶ್ ಕುಮಾರ್ ಸಿಂಗ್ ಅವರನ್ನು "ಸೆಟಲ್ಮೆಂಟ್ ಅಧಿಕಾರಿ" ಎಂದು ಕರೆಯುವ ಮೂಲಕ ವಿವಾದವನ್ನು ಎಬ್ಬಿಸಿದ್ದಾರೆ.
ಸಿರ್ಸಿ ಮತ್ತು ಕುಮಟಾವನ್ನು ಸಂಪರ್ಕಿಸುವ NH-766E ಅಗಲೀಕರಣದ ಬಗೆಗಿನ ಭಿನ್ನಾಭಿಪ್ರಾಯದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಸಚಿವರಾಗಿರುವ ವೈದ್ಯ ಸಿಂಗ್ ಅವರನ್ನು "ಸೆಟಲ್ಮೆಂಟ್ ಆಫೀಸರ್" ಎಂದು ಹೇಳಿಕೆ ನೀಡುವುದರೊಂದಿಗೆ ರಾಜಕಾರಣಿಗಳು ಮತ್ತು ಅಧಿಕಾರಶಾಹಿ ನಡುವಿನ ಜಟಾಪಟಿ ಮುಂಚೂಣಿಗೆ ಬಂದಿದೆ. 2021 ರಲ್ಲಿ ಪ್ರಾರಂಭವಾದ ರಸ್ತೆ ವಿಸ್ತರಣೆ ಯೋಜನೆಯು ನಿಗದಿತ ಸಮಯಕ್ಕಿಂತ ಹಿಂದೆ ಸರಿಯುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ ಸಚಿವರು, ನಾನು ಈ ರಸ್ತೆಯನ್ನು ಮುಚ್ಚುವುದನ್ನು ವಿರೋಧಿಸುತ್ತೇನೆ. ನಮ್ಮ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ರಸ್ತೆಯನ್ನು ಮುಚ್ಚಲು ಆದೇಶಿಸಿದರು. ಅವರು ಐಆರ್‌ಬಿ ಮತ್ತು ಆರ್‌ಎನ್‌ಎಸ್ ನಿರ್ಮಾಣ ಸಂಸ್ಥೆಗಳ ಉಸ್ತುವಾರಿ ಅಧಿಕಾರಿಯೇ ಅಥವಾ ವಸಾಹತು ಅಧಿಕಾರಿಯೇ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬೇಕಾಗಿದೆ. ಇಲ್ಲಿ ಸೆಟ್ಲ್ ಮೆಂಟ್ ಗೆ ಬರುತ್ತಿರುವಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದರು.
ಸೆಪ್ಟೆಂಬರ್‌ನಲ್ಲಿ ರಸ್ತೆಯನ್ನು ಮುಚ್ಚಬೇಕಿತ್ತು, ಆದರೆ ನವೆಂಬರ್‌ನಲ್ಲಿ ಅದನ್ನು ಮುಚ್ಚಲು ಸಿಂಗ್ ಆದೇಶಿಸಿದ್ದಾರೆ ಎಂದು ವೈದ್ಯ ಹೇಳಿದ್ದಾರೆ. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ರಸ್ತೆ ನಿರ್ಮಾಣ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಂಡಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ನಾನು ಕರೆದ ಯಾವುದೇ ಸಭೆಗೆ ಉಸ್ತುವಾರಿ ಕಾರ್ಯದರ್ಶಿ ಬರುವುದಿಲ್ಲ. ಶಿರಸಿ-ಕುಮಟಾ ರಸ್ತೆ ಬಂದ್ ಮಾಡಬಾರದು ಎಂದು ವೈದ್ಯ ಹೇಳಿದರು. ಉತ್ತರ ಕನ್ನಡ ಸಂಸದರು ರಸ್ತೆ ಬಂದ್ ಮಾಡುವಂತೆ ಆದೇಶ ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಸದರ ಹಿತಾಸಕ್ತಿ ಏನೆಂಬುದು ನನಗೆ ಗೊತ್ತಿಲ್ಲ. ನಾನು ಹೆದ್ದಾರಿ ಮುಚ್ಚುವುದನ್ನು ವಿರೋಧಿಸುತ್ತೇನೆ. ದೇವಿಮನೆ ಘಾಟ್‌ಗಳ ಮೂಲಕ ಶಿರಸಿ-ಕುಮಟಾ ರಸ್ತೆ ವಿಸ್ತರಣೆ ಯೋಜನೆಯು 440 ಕೋಟಿ ರೂಪಾಯಿ ವೆಚ್ಚದಲ್ಲಿ 2021 ರಲ್ಲಿ ಪ್ರಾರಂಭವಾಯಿತು. ಹೆದ್ದಾರಿ ಬಂದ್ ಮಾಡಿ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸುವಂತೆ ಆರ್ ಎನ್ ಎಸ್ ಗ್ರೂಪ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾದ ಕಾರಣ ಆದೇಶವನ್ನು ಹಿಂಪಡೆದಿದ್ದು, ಕನಿಷ್ಠ ಒಂದು ತಿಂಗಳ ಕಾಲ ರಸ್ತೆಯನ್ನು ಮುಚ್ಚುವಂತೆ ನಿರ್ಮಾಣ ಸಂಸ್ಥೆ ಮನವಿ ಮಾಡಿದೆ. ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ್ ಸಹ ಈ ಕ್ರಮವನ್ನು ಬೆಂಬಲಿಸಿ, ಇದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗುತ್ತದೆ, ಆದರೆ ರಸ್ತೆ ಬಳಕೆಗೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.
Advertisement