ಒಂದಲ್ಲ, ಎರಡಲ್ಲ... ಕಾಳಿಂಗ ಸರ್ಪದಲ್ಲಿ 4 ವಿಭಿನ್ನ ಪ್ರಭೇದ: ಹೊಸ ಅಧ್ಯಯನದಿಂದ ಸಾಬೀತು

ಕಾಳಿಂಗ ಸರ್ಪವನ್ನು ಇಲ್ಲಿಯವರೆಗೆ ಒಂದೇ ಜಾತಿಯೆಂದು ಪರಿಗಣಿಸಲಾಗಿತ್ತು. ಕಿಂಗ್ ಕೊಬ್ರಾ ಸಂರಕ್ಷಣೆಯ ಕೆಲಸಕ್ಕಾಗಿ ಹೆಸರುವಾಸಿಯಾಗಿರುವ ಗೌರಿ ಶಂಕರ್ ಅವರು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಲವಾರು ದೇಶಗಳಲ್ಲಿ ಸುಮಾರು 10 ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ.
wildlife biologist P Gowri Shankar
ವನ್ಯ ಜೀವಿ ತಜ್ಞ ಗೌರಿ ಶಂಕರ್
Updated on

ಹುಬ್ಬಳ್ಳಿ: ಜಗತ್ತಿನಲ್ಲಿ ನಾಲ್ಕು ಪ್ರಭೇದಗಳ ಕಾಳಿಂಗ ಸರ್ಪಗಳಿರುವುದು ತಿಳಿದುಬಂದಿದೆ. ವಿಶ್ವದ ಅತಿ ಉದ್ದದ ವಿಷಕಾರಿ ಹಾವು ನಾಲ್ಕು ವಿಭಿನ್ನ ಜಾತಿಗಳನ್ನು ಹೊಂದಿದೆ ಎಂದು ಶಿವಮೊಗ್ಗದ ವನ್ಯ ಜೀವಿ ತಜ್ಞ ಗೌರಿಶಂಕರ್‌ ಸಾಬೀತುಪಡಿಸಿದ್ದಾರೆ. 1836 ರಲ್ಲಿ ಮೊದಲು ಆವಿಷ್ಕಾರವಾಗಿದ್ದರೂ ಈಗ ಅಂದರೆ 185 ವರ್ಷಗಳ ನಂತರ ಈ ಹೊಸ ಅಧ್ಯಯನ ಸಾಬೀತಾಗಿದೆ.

ಕಾಳಿಂಗ ಸರ್ಪವನ್ನು ಇಲ್ಲಿಯವರೆಗೆ ಒಂದೇ ಜಾತಿಯೆಂದು ಪರಿಗಣಿಸಲಾಗಿತ್ತು. ಕಿಂಗ್ ಕೊಬ್ರಾ ಸಂರಕ್ಷಣೆಯ ಕೆಲಸಕ್ಕಾಗಿ ಹೆಸರುವಾಸಿಯಾಗಿರುವ ಗೌರಿ ಶಂಕರ್ ಅವರು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಲವಾರು ದೇಶಗಳಲ್ಲಿ ಸುಮಾರು 10 ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ. ಗೌರಿ ಶಂಕರ್ ಅವರಿಗೆ ಕಾಳಿಂಗ ಸರ್ಪಗಳು ವ್ಯಾಪಕವಾಗಿ ಹರಡಿರುವುದನ್ನು ಗಮನಸಿದ್ದಾರೆ. ಹೀಗಾಗಿ ಕಾಳಿಂಗ ಸರ್ಪಗಳು ಬಹು ಜಾತಿಗಳನ್ನು ಹೊಂದಿರಬಹುದು ಎಂದು ಊಹಿಸಿದರು. ಅನೇಕ ವಿಜ್ಞಾನಿಗಳು ಈ ಹಿಂದೆ ಇದೇ ರೀತಿಯ ಊಹೆಗಳನ್ನು ಪ್ರಸ್ತಾಪಿಸಿದ್ದರು, ಆದರೆ ಅವುಗಳನ್ನು ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ, ಹೀಗಾಗಿ ಈ ಸಂಬಂಧ ಗೌರಿ ಶಂಕರ್ ಅವರ ಪಿಎಚ್‌ಡಿ ಸಂಶೋಧನೆ ಆರಂಭಿಸಿದರು. 2012 ರಲ್ಲಿ, ಅವರು ತಮ್ಮ ಅಧ್ಯಯನಕ್ಕಾಗಿ ವಿವಿಧ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಸೇರಿಕೊಂಡರು.

ಐಐಎಸ್‌ಸಿಯ ಡಾ ಕಾರ್ತಿಕ್ ಶಂಕರ್ ಅವರ ಮೇಲ್ವಿಚಾರಣೆಯಲ್ಲಿ, ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯದ ಡಾ ಎಸ್‌ಕೆ ದತ್ತಾ (ಪ್ರೊ. ಎಮೆರಿಟಸ್) ಮತ್ತು ಪ್ರೊ ಜೇಕಬ್ ಹೊಗ್ಲುಂಡ್ ಅವರು ವಿವಿಧ ಆವಾಸಸ್ಥಾನಗಳಲ್ಲಿ ಕಾಳಿಂಗ ಸರ್ಪಗಳ ಅಂಗಾಂಶ ಮಾದರಿಗಳನ್ನು ಸಂಗ್ರಹಿಸಿದರು. DNA ವಿಶ್ಲೇಷಣೆಯನ್ನು ಪ್ರಿಯಾಂಕಾ ಸ್ವಾಮಿ ಮತ್ತು ಟ್ಯಾಕ್ಸಾನಮಿಸ್ಟ್ ಎಸ್‌ಆರ್ ಗಣೇಶ್ ಅವರು ರೂಪವಿಜ್ಞಾನವನ್ನು ಬೆಂಬಲಿಸಿದರು. "ನಾವು ಪ್ರಾಣಿಸಂಗ್ರಹಾಲಯಗಳು ಮತ್ತು ವಸ್ತುಸಂಗ್ರಹಾಲಯಗಳಿಂದ ಕಾಳಿಂಗ ಸರ್ಪದ ತಲೆಯ ಕೆಳಗಿನ ಭಾಗದುಂದ ಅಂಗಾಂಶ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ನಂತರ ಡಿಎನ್ಎ ಅನುಕ್ರಮಗಳನ್ನು ಪಡೆಯಲು ಈ ಮಾದರಿಗಳನ್ನು ಸಂಸ್ಕರಿಸಿದೆವು. ನಾವು ವಿವಿಧ ಪ್ರದೇಶಗಳ ಕಾಳಿಂಗ ಸರ್ಪಗಳ ಫೋಟೋ ತೆಗೆದುಕೊಂಡಿದ್ದೇವೆ ಮತ್ತು ಅವುಗಳ ಭೌತಿಕ ಗುಣಲಕ್ಷಣಗಳನ್ನು ಅಧ್ಯಯನ ಮಾಡಿದ್ದೇವೆ. ವರ್ಷಗಳ ವಿಶ್ಲೇಷಣೆಯ ನಂತರ, ಒಗಟನ್ನು ಪರಿಹರಿಸಲಾಯಿತು ಎಂದು ಗೌರಿ ಶಕರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

wildlife biologist P Gowri Shankar
ಆಗುಂಬೆ ಬಳಿ 15 ಅಡಿ ಉದ್ದದ ಅಪರೂಪದ ಕಾಳಿಂಗ ಸರ್ಪ ರಕ್ಷಣೆ; ವಿಡಿಯೋ!

ನಾಲ್ಕು ಜಾತಿಗಳಲ್ಲಿ ಎರಡು ಭಾರತದಲ್ಲಿ ಕಂಡುಬರುತ್ತವೆ. ಗೌರಿ ಶಂಕರ್ ಅವರು ಕನ್ನಡದಲ್ಲಿ ಭಾರತಕ್ಕೆ ಸ್ಥಳೀಯವಾಗಿರುವ ಕಾಳಿಂಗ ಸರ್ಪಗಳಲ್ಲಿ ಒಂದನ್ನು ಓಫಿಯೋಫಾಗಸ್ ಕಾಳಿಂಗ ಎಂದು ಹೆಸರಿಸಿದ್ದಾರೆ. ರಾಜ್ಯ ಅರಣ್ಯ ಇಲಾಖೆ ಈ ತಿಂಗಳು ಘೋಷಣೆ ಮಾಡುವ ನಿರೀಕ್ಷೆಯಿದೆ.

IUCN ರೆಡ್ ಲಿಸ್ಟ್ ಆಫ್ ಥ್ರೆಟೆನ್ಡ್ ಸ್ಪೀಷೀಸ್ ಅಸೆಸ್‌ಮೆಂಟ್ (IUCN, 2012) ಅಡಿಯಲ್ಲಿ ಕಾಳಿಂಗ ಸರ್ಪವನ್ನು "ಅಪಾಯಗೊಳಿಸುವ" ಎಂದು ವರ್ಗೀಕರಿಸಲಾಗಿದೆ ಮತ್ತು ಅಳಿವಿನಂಚಿನಲ್ಲಿರುವ ಜಾತಿಯ ಕಾಡು ಪ್ರಾಣಿಗಳು ಮತ್ತು ಸಸ್ಯಗಳ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶದಲ್ಲಿ ಪಟ್ಟಿಮಾಡಲಾಗಿದೆ ಎಂದು ಗೌರಿ ಶಂಕರ್ ಹೇಳಿದರು.

ಆವಾಸಸ್ಥಾನ ನಾಶ, ಚರ್ಮದ ಮಾರಾಟ, ಆಹಾರ, ಔಷಧ ಮತ್ತು ಸಾಕುಪ್ರಾಣಿಯಾಗಿ ಅವುಗಳ ಬಳಕೆ ಮಾಡುತ್ತಿರುವುದರಿಂದ ಕಾಳಿಂಗ ಸರ್ಪದ ಸಂತತಿ ಅಳಿವಿನ ಅಂಚಿಗೆ ಬರುತ್ತಿದೆ ಎಂದು ಅವರು ಹೇಳಿದರು.

ಮೂಲಭೂತ ಮತ್ತು ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಿಸುವುದರ ಹೊರತಾಗಿ, ಈ ಅಧ್ಯಯನವು ಯಾವ ಜಾತಿಯ ಕಾಳಿಂಗ ಸರ್ಪಗಳಿಗೆ ತಕ್ಷಣದ ಗಮನ ನೀಡ ಬೇಕು ಮತ್ತು ಯಾವ ಸಂರಕ್ಷಣಾ ಕ್ರಮಗಳ ಅನುಷ್ಠಾನದ ಅಗತ್ಯವಿದೆ ಎಂಬುದನ್ನು ನಿರ್ಣಯಿಸಲು ತಕ್ಷಣವೇ ಸಹಾಯ ಮಾಡುತ್ತದೆ.

ಇದು ಈ ವಿವಿಧ ಜಾತಿಗಳ ವಿಷದ ಸಂಯೋಜನೆಯನ್ನು ಸಹ ಅಧ್ಯಯನ ಮಾಡುತ್ತದೆ. ವಿಷ ತೆಗೆಯುವ ಮತ್ತು ಹಾವು ಕಡಿತದ ತಗ್ಗಿಸುವಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com