ವಕ್ಫ್ ಭೂಮಿ ವಿವಾದ: ಆದಷ್ಟು ಬೇಗ ಬಗೆಹರಿಸದಿದ್ದರೆ ರೈತರಿಂದ ಸಿಎಂ ನಿವಾಸಕ್ಕೆ ಮುತ್ತಿಗೆ- ಕುಮಾರಸ್ವಾಮಿ

ನನ್ನ ಕಾಲದಲ್ಲಿ ರೈತರ ಜಮೀನು, ಹಿಂದೂ ದೇವಾಲಯಗಳ ಜಮೀನು, ರಾಮನಗರದ ಬೆಟ್ಟಗಳನ್ನು ವಕ್ಫ್‌ಗೆ ನೀಡಿಲ್ಲ. ಸಿಎಂ ಯಾವ ಆಧಾರದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.
Union Minister HD Kumaraswamy
ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ
Updated on

ರಾಮನಗರ: ವಕ್ಫ್ ಭೂಮಿ ವಿವಾದವನ್ನು ಆದಷ್ಟು ಬೇಗ ಬಗೆಹರಿಸದಿದ್ದರೆ ರೈತರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ಸೋಮವಾರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡನಹಳ್ಳಿಯ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಒಂದು ಸಮುದಾಯವನ್ನು ಮಾತ್ರ ಓಲೈಸುತ್ತಿದ್ದು, ಇತರರನ್ನು ನಿರ್ಲಕ್ಷಿಸುತ್ತಿದೆ. ರೈತರು ಕಾನೂನು ತೆಗೆದುಕೊಂಡು ನಿಮ್ಮ ಮನೆಗಳಿಗೆ ಮುತ್ತಿಗೆ ಹಾಕುವ ಮುನ್ನಾ ಸಾರ್ವಜನಿಕವಾಗಿ ಕ್ಷಮೆ ಕೇಳಿ, ವಕ್ಪ್ ಭೂಮಿ ವಿವಾದವನ್ನು ಬಗೆಹರಿಸಿ ಎಂದು ಎಚ್ಚರಿಸಿದರು.

ಹಿಂದಿನ ಮುಖ್ಯಮಂತ್ರಿಗಳ ಕಾಲದಲ್ಲಿಯೂ ವಕ್ಫ್ ಭೂಮಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಸಿಎಂ ಆಗಿದ್ದಾಗ ವಕ್ಫ್ ಸಂಬಂಧಿತ ಯಾವುದೇ ಕಡತಗಳು ನನ್ನ ಮುಂದೆ ಬಂದಿರುವುದನ್ನು ನೋಡಿಲ್ಲ. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಜವಾಬ್ದಾರಿಯ ಕೊರತೆಯಿಂದ ಕೂಡಿದೆ ಎಂದರು.

ನನ್ನ ಕಾಲದಲ್ಲಿ ರೈತರ ಜಮೀನು, ಹಿಂದೂ ದೇವಾಲಯಗಳ ಜಮೀನು, ರಾಮನಗರದ ಬೆಟ್ಟಗಳನ್ನು ವಕ್ಫ್‌ಗೆ ನೀಡಿಲ್ಲ. ಸಿಎಂ ಯಾವ ಆಧಾರದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನಿಮ್ಮ ಸ್ವಂತ ತಪ್ಪುಗಳಿಗಾಗಿ ಇತರರನ್ನು ದೂಷಿಸಬೇಡಿ. ನನ್ನಿಂದ ಏನಾದರೂ ತಪ್ಪಿದ್ದರೆ ಅದನ್ನು ಜನರ ಮುಂದಿಡಲಿ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.

ನನ್ನ ಅಧಿಕಾರಾವಧಿಯಲ್ಲಿ ವಕ್ಫ್ ಸಂಬಂಧಿತ ನಿರ್ಧಾರಗಳು ನಡೆದಿದ್ದಲ್ಲಿ ಅದಕ್ಕೆ ಕಾಂಗ್ರೆಸ್ ನಾಯಕರೇ ಹೊಣೆಯಾಗುತ್ತಾರೆ. ಆ ಸಮಯದಲ್ಲಿ ಕೃಷ್ಣ ಬೈರೇಗೌಡ ಅವರು ಕಂದಾಯ ಸಚಿವರಾಗಿದ್ದರು ಮತ್ತು ಆಗಲೂ ಜಮೀರ್ ಅಹ್ಮದ್ ಖಾನ್ ಅವರೇ ವಕ್ಫ್ ಸಚಿವರಾಗಿದ್ದರು. ಅವರು ನನಗೆ ತಿಳಿಯದಂತೆ ಮಾಡಿದ್ದರೆ ಅದು ಅವರಿಗೆ ಸಂಬಂಧಿಸಿದ್ದು, ನನಗೆ ಸಂಬಂಧಿಸಿದ್ದಲ್ಲು. ನಾನು ಯಾವುದೇ ಕಾನೂನುಬಾಹಿರ ಕ್ರಮಗಳಿಗೆ ಅನುಮತಿ ನೀಡಿಲ್ಲ ಮತ್ತು ಅಂತಹ ವಿಷಯಗಳಲ್ಲಿ ನಾನು ರಾಜಕೀಯದಲ್ಲಿ ತೊಡಗಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಪಪಡಿಸಿದರು.

ಈ ವಿಚಾರದಲ್ಲಿ ಅನಗತ್ಯವಾಗಿ ನನ್ನನ್ನು ಎಳೆದುಕೊಂಡು ಬಂದರೆ ಅದನ್ನು ಎದುರಿಸಲು ನಾನು ಸಿದ್ಧ, ನಾನು ಪಲಾನಯವಾಗಲ್ಲ. ಮುಖ್ಯಮಂತ್ರಿ ಸುಳ್ಳು ಹೇಳಬಾರದು. ಸಿದ್ದರಾಮಯ್ಯ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು ಎಂದು ಟೀಕಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಧರ್ಮ ಮತ್ತು ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದೆ ಎಂದು ಕಿಡಿಕಾರಿದರು.

Union Minister HD Kumaraswamy
ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ವಕ್ಫ್ ಆಸ್ತಿ ಕಾಪಾಡುವುದಾಗಿ ಘೋಷಿಸಿತ್ತು: ಸಿಎಂ ಸಿದ್ದರಾಮಯ್ಯ ತಿರುಗೇಟು

ಈ ವಿಚಾರದಲ್ಲಿ ಅನಗತ್ಯವಾಗಿ ನನ್ನನ್ನು ಎಳೆದುಕೊಂಡು ಬಂದರೆ ಅದನ್ನು ಎದುರಿಸಲು ನಾನು ಸಿದ್ಧ, ನಾನು ಪಲಾನಯವಾಗಲ್ಲ. ಮುಖ್ಯಮಂತ್ರಿ ಸುಳ್ಳು ಹೇಳಬಾರದು. ಸಿದ್ದರಾಮಯ್ಯ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು ಎಂದು ಟೀಕಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಧರ್ಮ ಮತ್ತು ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದೆ ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com