ಎಚ್ಚರ: ಹಣ್ಣುಗಳು ಮೃದುವಾಗಿ, ಸುಂದರವಾಗಿ ಕಾಣುವಂತೆ ಮಾಡಲು ಯಥೇಚ್ಛವಾಗಿ ರಾಸಾಯನಿಕ ಬಳಕೆ!

ನಗರಗಳಲ್ಲಿ ಅನೇಕ ವ್ಯಾಪಾರಿಗಳು, ಎಥೆಫೋನ್ ಪುಡಿ ರೂಪದಲ್ಲಿ ಬಳಸುವ ಬದಲು, ಈ ರಾಸಾಯನಿಕಗಳ ದ್ರಾವಣಗಳಲ್ಲಿ ಹಣ್ಣುಗಳನ್ನು ನೆನೆಸಿ, ಮೃದುವಾಗಿ, ಸುಂದರವಾಗಿ ಹಣ್ಣಾದಂತೆ ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಣ್ಣಬಣ್ಣದ ಆಕರ್ಷಕ ಹಣ್ಣುಗಳು, ಕಣ್ಣಿಗೆ ಖುಷಿ ಕಾಣುತ್ತದೆ, ಹೊಟ್ಟೆಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಣ ಕೊಟ್ಟು ಖರೀದಿಸಿ ಮನೆಗೆ ತಂದು ತಿನ್ನುತ್ತೇವೆ. ಬೆಂಗಳೂರಿನಂತಹ ನಗರದ ಮಾರುಕಟ್ಟೆಗಳಲ್ಲಿ ಆಕರ್ಷಕವಾದ ಹಣ್ಣುಗಳು ಜನರನ್ನು ಆಕರ್ಷಿಸುವುದು ಹೆಚ್ಚು. ಕಾಯಿಲೆ ಬಂದಾಗ ವೈದ್ಯರು ಚೆನ್ನಾಗಿ ಹಣ್ಣು-ತರಕಾರಿ ತಿನ್ನಿ ಎಂದು ಹೇಳುತ್ತಾರೆ ಎಂದು ದಿನಕ್ಕೊಂದು ಬಗೆಯ ಹಣ್ಣನ್ನು ಖರೀದಿಸಿ ತರುತ್ತೇವೆ.

ಆದರೆ ಇವುಗಳಲ್ಲಿ ಹಲವು ಹಣ್ಣುಗಳು ಸ್ವಾಭಾವಿಕವಾಗಿ ಹಣ್ಣಾಗಿರುವುದಿಲ್ಲ, ಕೃತಕವಾಗಿ ಹಣ್ಣು ಮಾಡಲಾಗುತ್ತದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಎಚ್ಚರಿಸಿದ್ದಾರೆ. ರಾಜ್ಯದಾದ್ಯಂತ ಎಫ್‌ಎಸ್‌ಎಸ್‌ಎಐ ಅನುಮತಿಸಿದ ಸಸ್ಯ ಬೆಳವಣಿಗೆ ನಿಯಂತ್ರಕವಾದ ‘ಎಥೆಫೋನ್’ ನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಇದನ್ನು ಪುಡಿ ರೂಪದಲ್ಲಿ ಬಳಸಿ ಕಾಯಿ ಹಣ್ಣಾಗಲು ಎಥಿಲೀನ್ ಅನಿಲ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ನಗರಗಳಲ್ಲಿ ಅನೇಕ ವ್ಯಾಪಾರಿಗಳು, ಎಥೆಫೋನ್ ಪುಡಿ ರೂಪದಲ್ಲಿ ಬಳಸುವ ಬದಲು, ಈ ರಾಸಾಯನಿಕಗಳ ದ್ರಾವಣಗಳಲ್ಲಿ ಹಣ್ಣುಗಳನ್ನು ನೆನೆಸಿ, ಮೃದುವಾಗಿ, ಸುಂದರವಾಗಿ ಹಣ್ಣಾದಂತೆ ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತಿದ್ದಾರೆ. ಈ ದುರುಪಯೋಗದಿಂದ ಹಣ್ಣುಗಳಲ್ಲಿ ಅಪಾಯಕಾರಿ ಅಂಶ ಸೇರಿ ಮನುಷ್ಯರ ಆರೋಗ್ಯಕ್ಕೆ ಹಾನಿಕಾರವಾಗಿದೆ. ಕಳೆದ ವರ್ಷ ಕ್ಯಾಲ್ಸಿಯಂ ಕಾರ್ಬೈಡ್‌ನ ನಿಷೇಧವನ್ನು ಅನುಸರಿಸಿ ಎಥೆಫೋನ್‌ಗೆ ಅನುಮೋದನೆ ನೀಡಲಾಯಿತು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿದ ತೋಟಗಾರಿಕಾ ಇಲಾಖೆಯ ಮೂಲಗಳು ಎಥೆಫೋನ್‌ನ ದುರುಪಯೋಗ ಇತ್ತೀಚೆಗೆ ಹೆಚ್ಚಾಗಿದೆ. ರಾಜ್ಯದಲ್ಲಿ ಅದನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಕೊರತೆಯಿದೆ. ಈ ಹಣ್ಣುಗಳನ್ನು ಸರಿಯಾಗಿ ತೊಳೆಯದೆ ಅಥವಾ ಸ್ವಚ್ಛಗೊಳಿಸದೆ ಸೇವಿಸುವವರಿಗೆ ನಿಧಾನವಾಗಿ ಹಲವು ಕಾಯಿಲೆಗಳು ಬರುತ್ತಿವೆ ಎಂದರು.

ಕಿರಿಯ ಆಹಾರ ವಿಶ್ಲೇಷಕ ಚೇತನ್ ಟಿಪಿ, ಎಥೆಫಾನ್ ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡಲು ಒಡೆಯುತ್ತದೆ, ಇದು ನೈಸರ್ಗಿಕ ಸಸ್ಯ ಹಾರ್ಮೋನ್ ಉತ್ಪನ್ನಗಳ ಪಕ್ವತೆಯನ್ನು ವೇಗಗೊಳಿಸಿ ಪೂರೈಕೆ ಸರಪಳಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ, ಎಥೆಫಾನ್‌ನ ಅತಿಯಾದ ಬಳಕೆಯು ತೋಟಗಾರಿಕೆ ಕೃಷಿಯಲ್ಲಿ ಸಮಸ್ಯೆಯಾಗಿದೆ ಎಂದರು.

ಎಫ್‌ಎಸ್‌ಎಸ್‌ಎಐ ಪ್ರಕಾರ 10 ಕೆಜಿ ಹಣ್ಣಿಗೆ ಗರಿಷ್ಠ 0.5 ಗ್ರಾಂ ಎಥೆಫೋನ್ ಬಳಸಬಹುದು. ಆದರೆ ಕೆಲವು ರೈತರು ಮತ್ತು ವ್ಯಾಪಾರಿಗಳು ಹಣ್ಣನ್ನು ತ್ವರಿತವಾಗಿ ಮಾಗಿಸಲು ಶಿಫಾರಸು ಮಾಡಿದ ಸಾಂದ್ರತೆಯನ್ನು ಮೀರುತ್ತಾರೆ. ರಾಸಾಯನಿಕವು ಹಣ್ಣಿನೊಂದಿಗೆ ನೇರವಾಗಿ ಸಂಪರ್ಕಕ್ಕೆ ಬರಬಾರದು ಎಂಬ ಷರತ್ತಿನ ಮೇಲೆ ಮಾತ್ರ ಬಳಸಲು ಅನುಮತಿಸಲಾಗಿದೆ, ಆದ್ದರಿಂದ ಅದು ಸಿಪ್ಪೆಗಳ ಮೇಲೆ ರಾಸಾಯನಿಕ ಶೇಷವನ್ನು ಬಿಡುವುದಿಲ್ಲ, ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ ಎಂದರು.

Representational image
ಗರ್ಭಧಾರಣೆ-ಮಗುವಿಗೆ 2 ವರ್ಷ ತುಂಬುವವರೆಗೆ ಸಕ್ಕರೆ ಸೇವನೆಗೆ ನಿರ್ಬಂಧ; ಶೇ.35ರಷ್ಟು ಮಧುಮೇಹ ಅಪಾಯ ಕಡಿಮೆ: ಅಧ್ಯಯನ

ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಮುಖ್ಯಸ್ಥ ಡಾ ಕಾರ್ತಿಗೈ ಸೆಲ್ವಿ ಎ, ಎಥೆಫಾನ್ ಅವಶೇಷಗಳು ಅಂತಃಸ್ರಾವಕ ಕ್ರಿಯೆಗೆ ಅಡ್ಡಿಪಡಿಸಬಹುದು ಮತ್ತು ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡಬಹುದು ಎಂದು ಸಂಶೋಧನೆ ತೋರಿಸುತ್ತದೆ ಎನ್ನುತ್ತಾರೆ,

ಈ ರಾಸಾಯನಿಕದೊಂದಿಗೆ ಸಂಸ್ಕರಿಸಿದ ಉತ್ಪನ್ನಗಳ ದೀರ್ಘಾವಧಿಯ ಸೇವನೆಯು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದರು. ಆಸ್ಟರ್ ಸಿಎಂಐ ಆಸ್ಪತ್ರೆಯ ಸೇವೆಗಳು, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಮುಖ್ಯಸ್ಥ ಎಡ್ವಿನಾ ರಾಜ್, ಮಾರುಕಟ್ಟೆಯಲ್ಲಿ ಖರೀದಿಸಿ ತಂದ ಹಣ್ಣುಗಳನ್ನು ನೀರಿನಲ್ಲಿ ಸಾಕಷ್ಟು ನೆನೆಸಿ ಚೆನ್ನಾಗಿ ತೊಳೆಯಬೇಕು ಎಂದು ಸಲಹೆ ನೀಡುತ್ತಾರೆ. ಹಣ್ಣಿನ ಸಿಪ್ಪೆಗಳು ಫೈಬರ್ ಪ್ರಯೋಜನಗಳನ್ನು ನೀಡುತ್ತವೆ, ಆದ್ದರಿಂದ ತರಕಾರಿಗಳು ಮತ್ತು ಹಣ್ಣುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು, ವಿಶೇಷವಾಗಿ ಒಂದು ವರ್ಷದೊಳಗಿನ ಶಿಶುಗಳು ಮತ್ತು ಗರ್ಭಿಣಿಯರಿಗೆ ನೀಡುವಾಗ ಚೆನ್ನಾಗಿ ಸ್ವಚ್ಛಗೊಳಿಸಿ ನೀಡಬೇಕು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com