ನವೆಂಬರ್ 7 ರಂದು ಹುಬ್ಬಳ್ಳಿ, ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ, ರೈತರೊಂದಿಗೆ ಸಂವಾದ

ವಕ್ಫ್ ಭೂ ವಿವಾದ ಸಂಬಂಧ ವಿಜಯಪುರ ಜಿಲ್ಲೆಯ ರೈತರನ್ನು ಭೇಟಿ ಮಾಡಿ, ಚರ್ಚಿಸುವಂತೆ ತೇಜಸ್ವಿ ಸೂರ್ಯ ಅವರು ಪಾಲ್ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡುತ್ತಿದ್ದಾರೆ.
ಜಗದಾಂಬಿಕಾ ಪಾಲ್
ಜಗದಾಂಬಿಕಾ ಪಾಲ್
Updated on

ಬೆಂಗಳೂರು: ವಕ್ಫ್(ತಿದ್ದುಪಡಿ) ಮಸೂದೆ 2024ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮಂಗಳವಾರ ತಿಳಿಸಿದ್ದಾರೆ.

ವಕ್ಫ್ ಭೂ ವಿವಾದ ಸಂಬಂಧ ವಿಜಯಪುರ ಜಿಲ್ಲೆಯ ರೈತರನ್ನು ಭೇಟಿ ಮಾಡಿ, ಚರ್ಚಿಸುವಂತೆ ತೇಜಸ್ವಿ ಸೂರ್ಯ ಅವರು ಪಾಲ್ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡುತ್ತಿದ್ದಾರೆ.

“ವಕ್ಫ್‌ ಅತಿಕ್ರಮಣದಿಂದ ಸಂತ್ರಸ್ತರಾದ ರೈತರೊಂದಿಗೆ ಸಂವಾದ ನಡೆಸಲು ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡುವಂತೆ ನಾನು ಮಾಡಿದ್ದ ಮನವಿಗೆ ಜೆಪಿಸಿ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ ಎಂದರು.

ಜೆಪಿಸಿ ಅಧ್ಯಕ್ಷರು ರೈತ ಸಂಘಟನೆಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮಠಾಧೀಶರು ಮತ್ತು ಇತರರು ನೀಡಿದ ಮನವಿಗಳನ್ನು ಜೆಪಿಸಿ ಮುಂದೆ ಇಡಲಾಗುವುದು” ಎಂದು ಜೆಪಿಸಿ ಸದಸ್ಯರಾದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.

ಜಗದಾಂಬಿಕಾ ಪಾಲ್
ವಕ್ಫ್ ಬೋರ್ಡ್‌ ಆಸ್ತಿ ವಿವಾದ: ಅಮಿತ್ ಶಾ, ಸಂಸತ್‌ ಜಂಟಿ ಸದನ ಸಮಿತಿಗೆ ಆರ್ ಅಶೋಕ್ ಪತ್ರ

“ರೈತರು ಸುಮಾರು ಒಂದು ಶತಮಾನದಿಂದ ತಮ್ಮ ಜಮೀನುಗಳನ್ನು ಸಾಗುವಳಿ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ, ಅವರಲ್ಲಿ ಹಲವರಿಗೆ ಯಾವುದೇ ದಾಖಲೆ ಅಥವಾ ವಿವರಣೆಯಿಲ್ಲದೆ ಅವರ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲು ನೋಟಿಸ್ ನೀಡಲಾಗಿದೆ ಎಂದು ಬಿಜೆಪಿ ಸಂಸದ ದೂರಿದ್ದಾರೆ.

ವಕ್ಫ್‌ ಅತಿಕ್ರಮಣ ಮಾಡಿದ ಆಸ್ತಿಯ ಪ್ರಮಾಣವು ಗಣನೀಯವಾಗಿದೆ. ಸುಮಾರು 1,500 ಎಕರೆ ಆಸ್ತಿಯನ್ನು ಅವರ ಹಳ್ಳಿಯಲ್ಲಿಯೇ ವಕ್ಫ್ ಆಸ್ತಿ ಎಂದು ಗೊತ್ತುಪಡಿಸಲಾಗಿದೆ” ಎಂದು ಪಾಲ್‌ಗೆ ಬರೆದ ಪತ್ರದಲ್ಲಿ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com