'ಮ್ಯಾಚ್ ಫಿಕ್ಸಿಂಗ್' ಎಂದು ಹೇಳುವ ಮೂಲಕ ಸಂವಿಧಾನಾತ್ಮಕ ಹುದ್ದೆಗೆ ಅವಮಾನ: ಅಶೋಕ್ ವಿರುದ್ಧ ಡಿಕೆಶಿ ಕಿಡಿ

ಬಿಜೆಪಿ ನಾಯಕರ ಹೇಳಿಕೆ ನ್ಯಾಯಾಂಗ ಮತ್ತು ಸಾಂವಿಧಾನಿಕ ಹುದ್ದೆಯಾದ ಲೋಕಾಯುಕ್ತಕ್ಕೆ ಮಾಡಿದ ಅವಮಾನವಾಗಿದೆ ಎಂದು ಅಶೋಕ್‌ಗೆ ತಿರುಗೇಟು ನೀಡಿದರು.
DK Shivakumar
ಡಿಸಿಎಂ ಡಿ.ಕೆ ಶಿವಕುಮಾರ್
Updated on

ಹುಬ್ಬಳ್ಳಿ: ಮುಡಾ ಹಗರಣದ ತನಿಖೆಯಲ್ಲಿ ಲೋಕಾಯುಕ್ತ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಮ್ಯಾಚ್ ಫಿಕ್ಸಿಂಗ್ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ನಾಯಕರ ಹೇಳಿಕೆ ನ್ಯಾಯಾಂಗ ಮತ್ತು ಸಾಂವಿಧಾನಿಕ ಹುದ್ದೆಯಾದ ಲೋಕಾಯುಕ್ತಕ್ಕೆ ಮಾಡಿದ ಅವಮಾನವಾಗಿದೆ ಎಂದು ಅಶೋಕ್‌ಗೆ ತಿರುಗೇಟು ನೀಡಿದರು. ಅಶೋಕ್ ಅವರು ನ್ಯಾಯಾಂಗದ ವಿರುದ್ಧ ಈ ರೀತಿ ಮಾತನಾಡಬಾರದಿತ್ತು. ಅವರೇ ಸಾಂವಿಧಾನಿಕ ಸ್ಥಾನವನ್ನು ಹೊಂದಿದ್ದು, ಮತ್ತೊಂದು ಸಾಂವಿಧಾನಿಕ ಹುದ್ದೆಯ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದು ಖಂಡನೀಯ. ಅಶೋಕ ವಿರುದ್ಧ ಲೋಕಾಯುಕ್ತ ಕ್ರಮ ಕೈಗೊಳ್ಳಬೇಕು' ಎಂದು ಶಿವಕುಮಾರ್ ಒತ್ತಾಯಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಿಎ ವಿರುದ್ಧ ಸರ್ಕಾರಿ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪದ ಕುರಿತು ಶಿವಕುಮಾರ್, “ಚುನಾವಣೆ ಸಮಯದಲ್ಲಿ ಇಂತಹ ಆರೋಪಗಳು ಸಾಮಾನ್ಯ. ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಸಚಿವರ ಸಂಗಡಿಗರಾಗಲಿ, ನೀವಾಗಲಿ, ನಾನು ಆಗಲಿ ಅಥವಾ ಯಾರೇ ರಸ್ತೆಯಲ್ಲಿ ಓಡಾಡಿದರೂ ಅವರ ವಿರುದ್ಧ ಕಾನೂನು ಲೋಕಾಯುಕ್ತರ ಮ್ಯಾಚ್‌ ಫಿಕ್ಸಿಂಗ್‌ ಬಗ್ಗೆ ಮಾತನಾಡುವ ಮೂಲಕ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ನ್ಯಾಯಾಲಯಕ್ಕೆ ಹಾಗೂ ನ್ಯಾಯಪೀಠಗಳಿಗೆ ಅವಮಾನಿಸಿದ್ದಾರೆ. ಅವರ ವಿರುದ್ಧ ಲೋಕಾಯುಕ್ತರು ಕ್ರಮ ಕೈಗೊಳ್ಳಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದರು. ‘ಲೋಕಾಯುಕ್ತ ಹುದ್ದೆಯು ಸಾಂವಿಧಾನಿಕ ಹುದ್ದೆ. ಅವರ ಬಗ್ಗೆ ಈ ರೀತಿ ಮಾತನಾಡಿರುವುದು ಖಂಡನೀಯ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತರ ವಿಚಾರಣೆಗೆ ಹಾಜರಾಗಿದ್ದಾರೆ. ಲೋಕಾಯುಕ್ತ ಸಂಸ್ಥೆಗೆ ಗೌರವ ಕೊಟ್ಟು ಮುಖ್ಯಮಂತ್ರಿ ಅವರು ವಿಚಾರಣೆ ಎದುರಿಸಿ ಬಂದಿದ್ದಾರೆ. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇಂತಹ ಗೌರವಾನ್ವಿತ ಮುಖ್ಯಮಂತ್ರಿ ಇದ್ದಾರೆ ಎಂದು ನಾವು ಖುಷಿ ಪಡಬೇಕು’ ಎಂದು ಹೇಳಿದರು.

DK Shivakumar
ಮುಡಾ ಪ್ರಕರಣ: ಲೋಕಾಯುಕ್ತ ಪೊಲೀಸರಿಂದ ಸಿದ್ದರಾಮಯ್ಯ ವಿಚಾರಣೆ 'ಮ್ಯಾಚ್ ಫಿಕ್ಸಿಂಗ್' ಎಂದ ಬಿಜೆಪಿ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com