ಬೆಂಗಳೂರು: ಕಾರ್ಯಾಚರಣೆಯ ವೆಚ್ಚವನ್ನು ಕಡಿತಗೊಳಿಸಲು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಶೇಕಡಾ 10 ಕ್ಕಿಂತ ಹೆಚ್ಚು ಬಸ್‌ಗಳನ್ನು ಕಂಡಕ್ಟರ್‌ಗಳಿಲ್ಲದೆ ನಿರ್ವಹಿಸುತ್ತಿದೆ. ಹೀಗಾಗಿ ಪ್ರತಿ ಕಿಲೋಮೀಟರ್‌ಗೆ (CPKM) ವೆಚ್ಚವನ್ನು 10 ರೂ.ಗಳಷ್ಟು ಕಡಿಮೆ ಮಾಡಲು ಸಾಧ್ಯವಾಗುತ್ತಿದೆ. ಬಸ್ ನಿಗಮ ಪ್ರಸ್ತುತ 850 ಕ್ಕೂ ಹೆಚ್ಚು ಬಸ್‌ಗಳಲ್ಲಿ 'ಏಕ-ಸಿಬ್ಬಂದಿ ಮಾದರಿ'ಯನ್ನು ಅಳವಡಿಸಿಕೊಂಡಿದೆ.
ಈ ಮಾದರಿಯ ಬಗ್ಗೆ ವಿವರಗಳನ್ನು ಹಂಚಿಕೊಂಡ ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್, “ಬೆಂಗಳೂರು-ಮೈಸೂರು, ಬೆಂಗಳೂರು-ಹಾಸನ, ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗದಂತಹ ಆಯ್ದ ಮಾರ್ಗಗಳಲ್ಲಿ ಕೆಲವು ಅಥವಾ ಯಾವುದೇ ನಿಲುಗಡೆಗಳಿಲ್ಲದ ಪಾಯಿಂಟ್-ಟು-ಪಾಯಿಂಟ್ ಮಾರ್ಗಗಳಲ್ಲಿ ನಿರ್ವಾಹಕ ರಹಿತ ಒಬ್ಬರೇ ಸಿಬ್ಬಂದಿ ಇರುವ ಮಾದರಿಯನ್ನು ಪರಿಚಯಿಸಲಾಗಿದೆ. ಬೆಂಗಳೂರು-ಮಡಿಕೇರಿ, ಬೆಂಗಳೂರು-ಕೋಲಾರ ಮತ್ತು ಇತರೆ ಬೋರ್ಡಿಂಗ್ ಪಾಯಿಂಟ್‌ನಲ್ಲಿ ಮತ್ತು ಹೆಚ್ಚುವರಿ ಪ್ರಯಾಣಿಕರು ದಾರಿಯುದ್ದಕ್ಕೂ ಹತ್ತಿದಾಗ ಚಾಲಕರಿಂದ ಟಿಕೆಟ್‌ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಏಕ ಸಿಬ್ಬಂದಿ ಮಾದರಿಯನ್ನು ಪರಿಚಯಿಸುವ ಹಿಂದಿನ ಉದ್ದೇಶವನ್ನು ವಿವರಿಸಿದ ಕುಮಾರ್, “ಕೆಎಸ್‌ಆರ್‌ಟಿಸಿ ಸಾಮಾನ್ಯ ಮತ್ತು ಪ್ರೀಮಿಯಂ ಬಸ್‌ಗಳು ಸೇರಿದಂತೆ ಪ್ರತಿದಿನ 8,000 ಕ್ಕೂ ಹೆಚ್ಚು ಬಸ್‌ಗಳನ್ನು ನಿರ್ವಹಿಸುತ್ತದೆ. ಪ್ರತಿದಿನ 28 ಲಕ್ಷ ಕಿಲೋಮೀಟರ್‌ಗಳನ್ನು ಕ್ರಮಿಸುತ್ತದೆ. ಪ್ರತಿ ಕಿಲೋಮೀಟರ್‌ಗೆ ವೆಚ್ಚ, ಬಂಡವಾಳ ವೆಚ್ಚಗಳು, ಬಡ್ಡಿ, ಡೀಸೆಲ್, ಆಡಳಿತಾತ್ಮಕ ವೆಚ್ಚಗಳು ಮತ್ತು ಕಂಡಕ್ಟರ್ ಮತ್ತು ಡ್ರೈವರ್ ವೆಚ್ಚಗಳನ್ನು ಒಳಗೊಂಡಂತೆ ನಮ್ಮ ಬಸ್‌ಗಳನ್ನು ನಿರ್ವಹಿಸಲು ಪ್ರತಿ ಕಿಮೀಗೆ 50 ರೂ.ವರೆಗೆ ವೆಚ್ಚ ಉಂಟಾಗಲಿದೆ. ನಮ್ಮ ಗಳಿಕೆ (ಇಪಿಕೆಎಂ) ಪ್ರತಿ ಕಿಮೀಗೆ 50 ರೂ.ಗಿಂತ ಹೆಚ್ಚಿದ್ದರೆ ಮಾತ್ರ ಬಸ್ ನಿಗಮಕ್ಕೆ ಲಾಭವಾಗುತ್ತದೆ. ಆದಾಗ್ಯೂ, 8,000 ಬಸ್‌ಗಳಲ್ಲಿ, ಸುಮಾರು 5,000 ಬಸ್‌ಗಳು ಕಡಿಮೆ ಸಂಖ್ಯೆಯ ಪ್ರಯಾಣಿಕರು ಸೇರಿದಂತೆ ಅನೇಕ ಅಂಶಗಳಿಂದ ಪ್ರತಿ ಕಿ.ಮೀ.ಗೆ ರೂ. 50 ಕ್ಕಿಂತ ಕಡಿಮೆ ಆದಾಯವನ್ನು ಪಡೆಯುತ್ತಿವೆ" ಎಂದು ಹೇಳಿದ್ದಾರೆ.
ಸಾರ್ವಜನಿಕ ಬಸ್ ನಿಗಮಗಳು ಜನರಿಗೆ ಸೇವೆ ಸಲ್ಲಿಸಬೇಕು ಮತ್ತು ಹಣ ಮಾಡಬಾರದು ಎಂದು ಒಪ್ಪಿಕೊಂಡೇ, ಪ್ರಯಾಣಿಕರಿಗೆ ಹೊರೆಯಾಗದಂತೆ ಉತ್ತಮವಾಗಿ ಸೇವೆ ಸಲ್ಲಿಸಲು ವೆಚ್ಚವನ್ನು ಕಡಿತಗೊಳಿಸುವ ಮಾರ್ಗಗಳನ್ನು ನಿಗಮವು ಯಾವಾಗಲೂ ಅನ್ವೇಷಿಸುತ್ತಿದೆ ಮತ್ತು ನಿರ್ವಾಹಕ ರಹಿತ ಬಸ್ ಕಾರ್ಯಾಚರಣೆ ಅಂತಹ ಒಂದು ಕ್ರಮದ ಮಾದರಿಯಾಗಿದೆ ಎಂದು ಅವರು ಹೇಳಿದರು.
"ಈ ಮಾದರಿಯಿಂದ ಕೆಎಸ್‌ಆರ್‌ಟಿಸಿಗೆ ಪ್ರತಿ ಕಿ.ಮೀ.ಗೆ ಸುಮಾರು 10 ರೂಪಾಯಿ ಉಳಿಸಲು ಸಾಧ್ಯವಾಗುತ್ತದೆ. ಸುಮಾರು ಐದು ಗಂಟೆಗಳ ಪ್ರಯಾಣದ ಸಮಯವಿರುವ ಮಾರ್ಗಗಳಲ್ಲಿ ಮಾತ್ರ ನಾವು ಈ ಮಾದರಿಯನ್ನು ಪರಿಚಯಿಸಿದ್ದೇವೆ. 5-6 ಗಂಟೆಗಳಿಗಿಂತ ಹೆಚ್ಚಿನ ಪ್ರಯಾಣಕ್ಕಾಗಿ, ಚಾಲಕನಿಗೆ ಸಹಾಯವಿಲ್ಲದೆ ನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ, ”ಎಂದು ಕುಮಾರ್ ಹೇಳಿದರು.
Advertisement