ಗದಗ: ಭಾರತದ ಸ್ವಾತಂತ್ರ್ಯ ಹೋರಾಟದ ಕಥೆ ಹೇಳುವ ತಿರಂಗಾ ಪಾರ್ಕ್

ಗದಗದಲ್ಲಿರುವ ತಿರಂಗ ಪಾರ್ಕ್‌ನ ಧ್ವಜಸ್ತಂಭ ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಎತ್ತರವಾಗಿದೆ ಎಂದು ವರದಿಯಾಗಿದೆ.
Tiranga Park
ತಿರಂಗಾ ಪಾರ್ಕ್online desk
Updated on

ಗದಗ: ಗದಗ ನಗರದಿಂದ ಹೊರಭಾಗದ ಪ್ರದೇಶದಲ್ಲಿ ವಿಶಿಷ್ಟವಾದ L ಆಕಾರದ ತಿರಂಗ ಉದ್ಯಾನವನ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿದೆ.

1.5 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಉದ್ಯಾನವನದಲ್ಲಿ 8 ವರ್ಷಗಳ ಹಿಂದೆ 120 ಅಡಿ ಧ್ವಜಸ್ತಂಭವನ್ನು ಸ್ಥಾಪಿಸಲಾಗಿದ್ದು ಇದು ಚಿಕ್ಕ ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ.

2016ರ ಆಗಸ್ಟ್ 15ರಂದು ಸಚಿವ ಎಚ್.ಕೆ.ಪಾಟೀಲ್ ಈ ಉದ್ಯಾನವನವನ್ನು ಉದ್ಘಾಟಿಸಿದ್ದರು. ಉದ್ಯಾನವನದ ಉದ್ದಗಲಕ್ಕೂ ನೀರಿನ ಕಾರಂಜಿ ಹಾಗೂ ಶುದ್ಧ ಅಲ್ಯೂಮಿನಿಯಂನಿಂದ ಧ್ವಜಸ್ತಂಭ ಅಳವಡಿಸಲಾಗಿದ್ದು, ಹಸಿರಿನಿಂದ ಕಂಗೊಳಿಸುತ್ತಿದೆ. ಸೊಂಪಾದ ಉದ್ಯಾನವನದ ಜೊತೆಗೆ, ಕಂಬವು ಉದ್ಯಾನದ ಮಧ್ಯಭಾಗದಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಂತಿದೆ. 8 ಅಡಿ x12 ಅಡಿ ಅಳತೆ ಹೊಂದಿರುವ ಈ ಧ್ವಜಸ್ತಂಭ ಎಲೆಕ್ಟ್ರಾನಿಕ್ ಯಾಂತ್ರಿಕ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಧ್ವಜಾರೋಹಣವನ್ನು ಸುಲಭಗೊಳಿಸುವುದು ಇದರ ಮತ್ತೊಂದು ವಿಶೇಷತೆಯಾಗಿದೆ. ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಧ್ವಜ ತಯಾರಿಕೆ ಘಟಕಗಳ ಕೊರತೆಯಿಂದಾಗಿ ಮುಂಬೈನಲ್ಲಿ ಇದನ್ನು ತಯಾರಿಸಲಾಗಿದೆ.

ಬೆಂಗಳೂರಿನ ರಾಷ್ಟ್ರೀಯ ಸೇನಾ ಸ್ಮಾರಕ 213 ಅಡಿ ಎತ್ತರದ ಧ್ವಜಸ್ತಂಭವನ್ನು ಹೊಂದಿದ್ದು, ಇದು ಕರ್ನಾಟಕದ ಅತಿ ಎತ್ತರದ ಧ್ವಜಸ್ತಂಭವಾಗಿದೆ, ಗದಗದಲ್ಲಿರುವ ತಿರಂಗ ಪಾರ್ಕ್‌ನ ಧ್ವಜಸ್ತಂಭ ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಎತ್ತರವಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಅತಿರಂಗ ಉದ್ಯಾನವನ ಹೊಂದಿರುವ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಗದಗ ಪಾತ್ರವಾಗಿದೆ. 2.25 ಕೋಟಿ ರೂಪಾಯಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣಗೊಂಡಿದ್ದು, ಅದನ್ನು ಪೂರ್ಣಗೊಳಿಸಲು ಎಚ್‌ಕೆ ಪಾಟೀಲ್ ಮತ್ತು ತಂಡ ಆರು ತಿಂಗಳ ಕಾಲ ನಿರಂತರವಾಗಿ ಶ್ರಮಿಸಿದೆ.

ಮತ್ತೊಂದೆಡೆ, ಈ ಐಕಾನಿಕ್ ಪಾರ್ಕ್ ಕೇವಲ ಸಾಮಾನ್ಯ ಹಸಿರು ತಾಣವಾಗಿರದೆ ಭಾರತದ ಸ್ವಾತಂತ್ರ್ಯದ ಕಥೆಯನ್ನು ಹೇಳುತ್ತದೆ. ಸುಂದರವಾದ ಉದ್ಯಾನವನದ ನಡುವೆ, ಸಂಕ್ಷಿಪ್ತ ಮಾಹಿತಿಯೊಂದಿಗೆ ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರಗಳನ್ನು ಸಹ ಪ್ರದರ್ಶಿಸಲಾಗುತ್ತಿದ್ದು ಈ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಮಹಾನ್ ಪುರುಷರ ಕೊಡುಗೆಗಳನ್ನು ಸಂದರ್ಶಕರು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಉದ್ಯಾನವನವು ಅದರ ಗೋಡೆಗಳ ಮೇಲೆ ಮಾಹಿತಿ ಫಲಕಗಳನ್ನು ಹೊಂದಿದೆ. ಕೆಲವು ಬೋರ್ಡ್‌ಗಳು ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜದ ಅರ್ಥವನ್ನು ವಿವರಿಸಿದರೆ, ಇತರ ಬೋರ್ಡ್ ಗಳು ಅಸಹಕಾರ ಚಳವಳಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಸೈಮನ್ ಕಮಿಷನ್, ದಂಡಿ ಮಾರ್ಚ್, ದ್ವಜ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಬಗ್ಗೆ ಜನರಿಗೆ ತಿಳುವಳಿಕೆ ನೀಡುತ್ತದೆ.

ಈ ಪಾರ್ಕ್ ನಲ್ಲಿ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ ಬಾಬಾಸಾಹೇಬ್ ಅಂಬೇಡ್ಕರ್, ಲೋಕಮಾನ್ಯ ಬಾಲಗಂಗಾಧರ ತಿಲಕ್, ಲಾಲ್ ಬಹದ್ದೂರ್ ಶಾಸ್ತ್ರಿ, ಮೊರಾರ್ಜಿ ದೇಸಾಯಿ, ಬಾಬು ಜಗಜೀವನ್ ರಾಮ್, ಸರ್ದಾರ್ ಭಗತ್ ಸಿಂಗ್ ಮತ್ತು ವೀರಸನ್ಯಾಸಿ ವಿವೇಕಾನಂದರ ಬಗ್ಗೆ ಸಂಕ್ಷಿಪ್ತ ಮಾಹಿತಿಯೂ ಇದೆ. ಕನ್ನಡದಲ್ಲಿ ರಾಷ್ಟ್ರಗೀತೆಯ ಅರ್ಥವನ್ನು ಸಹ ಇಲ್ಲಿ ಪ್ರದರ್ಶಿಸಲಾಗುತ್ತದೆ ಎಂಬುದು ಮತ್ತೊಂದು ವಿಶೇಷವಾಗಿದ್ದು ಜನರು ಹೃದಯದಿಂದ ಹಾಡುವ ಗೀತೆಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

Tiranga Park
ಮಕ್ಕಳ ಆಸೆಗೆ ರೆಕ್ಕೆ ನೀಡುವ 'ಅರ್ಲಿ ಬರ್ಡ್': NCF ನಿಂದ ವಿಶಿಷ್ಟ ಕಾರ್ಯಕ್ರಮ

ಹಿರಿಯ ವೈದ್ಯ ಹಾಗೂ ಪರಿಸರವಾದಿ ಡಾ.ಎಸ್.ಆರ್.ನಾಗನೂರ ಮಾತನಾಡಿ, ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದವರಿಗೆ ಮರಣದಂಡನೆ ಶಿಕ್ಷೆಯಾಗುವ ಕಾಲವಿತ್ತು. ಮಹಾತ್ಮ ಗಾಂಧಿ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟರು ಮತ್ತು ಇಂದು ನಾವು ನಮ್ಮ ಧ್ವಜವನ್ನು ಹೆಮ್ಮೆಯಿಂದ ಹಾರಿಸಲು ಸಮರ್ಥರಾಗಿದ್ದೇವೆ ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಂಡಿದ್ದಾರೆ

ಉದ್ಯಾನವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಗದಗ ಸಹಕಾರಿ ಕೈಗಾರಿಕಾ ವಸಾಹತು ಅಧ್ಯಕ್ಷ ರಂಗಣ್ಣ ಓದುಗೌಡರ್ ಮಾತನಾಡಿ, ‘ಜನರಿಗೆ ಅದರಲ್ಲೂ ಯುವಕರಿಗೆ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರೀಯ ಸಮಗ್ರತೆ, ರಾಷ್ಟ್ರದ ಮಹತ್ವದ ಕುರಿತು ತಿಳುವಳಿಕೆ ನೀಡಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com