ಬೆಳಗಾವಿ: ತನ್ನ ಪತಿಯೊಂದಿಗೆ ಜಗಳವಾಡಿದ ನಂತರ ಮಹಿಳೆಯೊಬ್ಬಳು ತನ್ನ 3 ವರ್ಷದ ಮಗನನ್ನು ಕತ್ತು ಹಿಸುಕಿ ಕೊಂದಿರುವ ಹೃದಯ ವಿದ್ರಾವಕ ಘಟನೆ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮೃತ ಮಗುವನ್ನು ಸಾತ್ವಿಕ್ ರಾಹುಲ್ ಕಟಗೇರಿ ಎಂದು ಗುರುತಿಸಲಾಗಿದೆ. ಮಗುವಿನ ಪೋಷಕರ ನಡುವೆ ಆಗಾಗ್ಗೆ ಜಗಳವಾಡುತ್ತಿದ್ದರು. ಮಗವಿನ ತಂದೆ ರಾಹುಲ್ ಗೆ ಅಕ್ರಮ ಸಂಬಂಧವಿದೆ ಎಂದು ಭಾಗ್ಯಶ್ರೀ ವ್ಯಕ್ತಪಡಿಸಿದ್ದು, ಆಗಾಗ ಅವರಿಬ್ಬರ ಮನಸ್ತಾಪ ಉಂಟಾಗುತ್ತಿತ್ತು. ಘಟನೆಯ ದಿನ, ದಂಪತಿ ತೀವ್ರ ಜಗಳವಾಡಿದರು, ನಂತರ ಭಾಗ್ಯಶ್ರೀ ಕೋಪದ ಭರದಲ್ಲಿ ತನ್ನ ಮಗನನ್ನು ಕತ್ತು ಹಿಸುಕಿದಳು. ಅವಳು ತನ್ನ ಪ್ರಾಣವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಳು, ಆದರೆ ಯಶಸ್ವಿಯಾಗಲಿಲ್ಲ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಗಾಗಿ ಭಾಗ್ಯಶ್ರೀ ಹಾಗೂ ರಾಹುಲ್ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಘಟನೆಯ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ.
ಕಾಲುವೆಯಲ್ಲಿ ಮತ್ತೊಂದು ಶಿಶುವಿನ ಮೃತದೇಹ ಪತ್ತೆ
ಪ್ರತ್ಯೇಕ ಘಟನೆಯಲ್ಲಿ, ಅದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಭಾನುವಾರ ಮೋಳೆ ಗ್ರಾಮದ ಹೊರವಲಯದಲ್ಲಿರುವ ನೀರಿನ ಕಾಲುವೆಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. 3.4 ದಿನಗಳ ಹಿಂದೆ ಜನಿಸಿದ ಮಗುವನ್ನು ನೀರಿನ ಕಾಲುವೆಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಶು ಅಭಿವೃದ್ಧಿ ಅಧಿಕಾರಿ, ಕಾಗವಾಡ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಶಿಶುವನ್ನು ಗುರುತಿಸಲು ಮತ್ತು ಮಗುವಿನ ಸಾವಿನ ಕಾರಣ ತಿಳಿಯಲು ತನಿಖೆ ನಡೆಸುತ್ತಿದ್ದಾರೆ.
Advertisement