ಪ್ಯಾನಿಕ್ ಬಟನ್‌ ಅಳವಡಿಕೆ ಕಡ್ಡಾಯ; ವಾಹನ ಮಾಲೀಕರ ವಿರೋಧ!

ನಿರ್ಭಯಾ ಘಟನೆಯ ನಂತರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಸಾರ್ವಜನಿಕ ಸೇವಾ ವಾಹನಗಳಲ್ಲಿ VLTD ಗಳು ಮತ್ತು ಪ್ಯಾನಿಕ್ ಬಟನ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಿತು ಮತ್ತು ರಾಜ್ಯ ಸಾರಿಗೆ ಇಲಾಖೆಯು ಸೆಪ್ಟೆಂಬರ್ 10 ರೊಳಗೆ ಅಳವಡಿಸಿಕೊಳ್ಳುವಂತೆ ಗಡುವು ನೀಡಿತ್ತು.
Casual Images
ಪ್ಯಾನಿಕ್ ಬಟನ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಸ್‌, ಕ್ಯಾಬ್‌, ಮ್ಯಾಕ್ಸಿ ಕ್ಯಾಬ್‌ , ಶಾಲಾ ಬಸ್‌ಗಳು ಮತ್ತು ರಾಷ್ಟ್ರೀಯ ಪರವಾನಗಿ ಹೊಂದಿರುವ ಎಲ್ಲಾ ಸರಕು ಸಾಗಣೆ ವಾಹನಗಳಲ್ಲಿ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸಸ್ (VLTD) ಮತ್ತು ತುರ್ತು ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಿಕೊಳ್ಳಲು ನೀಡಲಾಗಿದ್ದ ಅಧಿಕೃತ ಗಡುವು ಸೆಪ್ಟೆಂಬರ್ 10 ರಂದೇ ಕೊನೆಗೊಂಡಿದೆ.

ಅನಗತ್ಯ ಹೊರೆಯನ್ನು ಸೃಷ್ಟಿಸುವ ಈ ಕ್ರಮವವನ್ನು ಸಡಿಲಿಸುವಂತೆ ಕ್ಯಾಬ್, ಬಸ್ ಮತ್ತು ಟ್ರಕ್ ಯೂನಿಯನ್‌ಗಳ ಪ್ರತಿನಿಧಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆ ಸಾಧನ ಅಳವಡಿಸಿಕೊಳ್ಳದೆ ಪ್ರತಿದಿನ ಫಿಟ್‌ನೆಸ್ ಪರೀಕ್ಷೆಗೆ ಹೋಗುವ ನೂರಾರು ವಾಹನಗಳಿಗೆ ಕ್ಲಿಯರೆನ್ಸ್ ನೀಡಲು ಆರ್‌ಟಿಒಗಳು ನಿರಾಕರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ನಿರ್ಭಯಾ ಘಟನೆಯ ನಂತರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಸಾರ್ವಜನಿಕ ಸೇವಾ ವಾಹನಗಳಲ್ಲಿ VLTD ಗಳು ಮತ್ತು ಪ್ಯಾನಿಕ್ ಬಟನ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಿತು ಮತ್ತು ರಾಜ್ಯ ಸಾರಿಗೆ ಇಲಾಖೆಯು ಸೆಪ್ಟೆಂಬರ್ 10 ರೊಳಗೆ ಅಳವಡಿಸಿಕೊಳ್ಳುವಂತೆ ಗಡುವು ನೀಡಿತ್ತು.

ತುರ್ತು ಸಂದರ್ಭದಲ್ಲಿ ಪ್ಯಾನಿಕ್ ಬಟನ್ ಒತ್ತಿದಾಗ, ಅದು ಬೆಂಗಳೂರಿನ ಕಮಾಂಡ್ ಸೆಂಟರ್‌ಗೆ ಎಚ್ಚರಿಕೆ ನೀಡುತ್ತದೆ. ನಂತರ ತಂಡ ವಾಹನದ ಸ್ಥಳವನ್ನು ಟ್ರ್ಯಾಕ್ ಮಾಡುವ ಮೂಲಕ ಪ್ರತಿಕ್ರಿಯಿಸುತ್ತದೆ. ಚಾಲಕ ಮತ್ತು ಮಾಲೀಕರನ್ನು ಸಂಪರ್ಕಿಸಿ, ಪರಿಸ್ಥಿತಿಗೆ ಅನುಗುಣವಾಗಿ ಪೊಲೀಸರಿಗೆ ಮಾಹಿತಿ ನೀಡುತ್ತದೆ.

ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ​​ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ ಮಾತನಾಡಿ, 'ಎಲ್ಲಾ ಹೊಸ ವಾಹನಗಳಿಗೆ ವಿಎಲ್‌ಟಿಡಿ ಮತ್ತು ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗಿದೆ. ಎಲ್ಲಾ ಹಳೆಯ ವಾಹನಗಳಿಗೂ ಅಳವಡಿಸಲು ನಿರ್ದೇಶಿಸುವುದು ಅನ್ಯಾಯವಾಗಿದೆ. ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್ ಹೊಂದಿದ್ದಾರೆ ಮತ್ತು ಪ್ಯಾನಿಕ್ ಬಟನ್‌ಗಳಿಗಿಂತ ತುರ್ತು ಸಂದರ್ಭಗಳಲ್ಲಿ ಇದು ಹೆಚ್ಚಿನ ಸಹಾಯವನ್ನು ನೀಡುತ್ತದೆ. ಸಾರಿಗೆ ಇಲಾಖೆಯಿಂದ ಗುರುತಿಸಲಾದ ಮಾರಾಟಗಾರರಿಂದ ಮಾತ್ರ ನಾವು ಸಾಧನಗಳನ್ನು ಅಳವಡಿಸಿಕೊಳ್ಳಬೇಕು. ಮಾರುಕಟ್ಟೆಗಳಲ್ಲಿ ಆ ಸಾಧನಗಳ ಬೆಲೆ ರೂ.4,000ಕ್ಕಿಂತ ಕಡಿಮೆಯಿದೆ. ಆದರೆ, ನಮ್ಮ ಬಸ್ ಗಳಲ್ಲಿ ಅದನ್ನು ಅಳವಡಿಸಲು ಸುಮಾರು 18,000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ ಎಂದರು.

Casual Images
ಸಾರ್ವಜನಿಕ ವಾಹನಗಳಿಗೆ ಜಿಪಿಎಸ್-ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ: 6 ಲಕ್ಷ ಪೈಕಿ 1,109 ವಾಹನಗಳಿಂದ ಮಾತ್ರ ನಿಯಮ ಪಾಲನೆ!

ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಟ್ರಕ್ ಸೇರಿದಂತೆ ಎಲ್ಲಾ ವಾಹನಗಳಲ್ಲಿ ಇಂತಹ ಸಾಧನಗಳು ಬೇಕೇ ಎಂದು ಪ್ರಶ್ನಿಸಿದರು. ಸಾರಿಗೆಯು ಸಮವರ್ತಿ ಪಟ್ಟಿ ಮಾಡಲಾದ ವಿಷಯವಾಗಿದೆ ಮತ್ತು ಕೇಂದ್ರದ ಆದೇಶವನ್ನು ಅನುಸರಿಸುವ ಅಥವಾ ತಿರಸ್ಕರಿಸುವ ವಿವೇಚನೆಯನ್ನು ರಾಜ್ಯ ಸಾರಿಗೆ ಇಲಾಖೆ ಹೊಂದಿದೆ. ಕರ್ನಾಟಕ ಹೊರತುಪಡಿಸಿ ಭಾರತದಲ್ಲಿ ಎಲ್ಲಿಯೂ ಈ ನಿಯಮವನ್ನು ಕಡ್ಡಾಯಗೊಳಿಸಿಲ್ಲ. ಎಂಪನೆಲ್ ಮಾಡಲಾದ ಮಾರಾಟಗಾರರ ಸಾಧನಗಳು ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ದುಬಾರಿಯಾಗಿದೆ ಎಂದು ಅವರು ಹೇಳಿದರು.

ಈ ಸಾಧನಗಳನ್ನು ಅಳವಡಿಸಬೇಕಾದ 6,04,863 ವಾಹನಗಳಲ್ಲಿ 10,000 ವಾಹನಗಳು ಸಹ ಅಳವಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರಿಗೆ ಹೆಚ್ಚುವರಿ ಆಯುಕ್ತ (ಆಡಳಿತ) ಬಿ. ಉಮಾಶಂಕರ್ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com