ಎದೆ ನಡುಗಿಸುವ ದೃಶ್ಯ: ವೇಗವಾಗಿ ಬಂದ ಕಾರು ಡಿಕ್ಕಿ; 10 ಅಡಿ ದೂರಕ್ಕೆ ಚಿಮ್ಮಿದ ಸವಾರ; ವಿಡಿಯೋ ನೋಡಿ!

ಡಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು ಬೈಕ್ ಸವಾರ 10 ಅಡಿ ದೂರಕ್ಕೆ ಎಗರಿ ಬಿದ್ದಿದ್ದಾನೆ. ಆದರೆ ಅದೃಷ್ಠವಶಾತ್ ಸವಾರ ಬದುಕುಳಿದಿದ್ದಾನೆ.
ಅಪಘಾತದ ಭೀಕರ ದೃಶ್ಯ
ಅಪಘಾತದ ಭೀಕರ ದೃಶ್ಯ
Updated on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಂಬಳಬೆಟ್ಟು ಎಂಬಲ್ಲಿ ಬೈಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಖ್ಯ ರಸ್ತೆಗೆ ಬರುತ್ತಿದ್ದ ಬೈಕ್​​ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದ ಕಾರಿನ ಚಾಲಕ ನಿಯಂತ್ರಣ ತಪ್ಪಿ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು ಬೈಕ್ ಸವಾರ 10 ಅಡಿ ದೂರಕ್ಕೆ ಎಗರಿ ಬಿದ್ದಿದ್ದಾನೆ. ಆದರೆ ಅದೃಷ್ಠವಶಾತ್ ಸವಾರ ಬದುಕುಳಿದಿದ್ದಾನೆ.

ಇನ್ನು ಕಾರು ಮತ್ತೊಂದು ಭಾಗದಲ್ಲಿ ನಿಲ್ಲಿಸಿದ್ದ ಬೈಕ್​​ಗೂ ಡಿಕ್ಕಿಯಾಗಿ ಪಲ್ಟಿಯಾಗಿದ್ದು ಮಣ್ಣಿನ‌ ದಿಬ್ಬದ ಮೇಲೆ ಮಗುಚಿ ಬಿದ್ದಿದೆ. ಘಟನೆಯಲ್ಲಿ ಕಾರು ಚಾಲಕ ಸನತ್ ಪವಾಡ ಸದೃಶವಾಗಿ ಪಾರಾಗಿದ್ದು, ಬೈಕ್ ಸವಾರ ಯತೀಶ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.

ಅಪಘಾತದ ಭೀಕರ ದೃಶ್ಯ
ರೀಲ್ಸ್ ಹುಚ್ಚಾಟ: ದೀಪಾವಳಿ ಆಚರಣೆ ಹೆಸರಿನಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿದ ವಿದ್ಯಾರ್ಥಿಗಳು, ವೀಡಿಯೋ ವೈರಲ್

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com