ಹುಬ್ಬಳ್ಳಿ: ಕಬ್ಬಿಣದ ಅದಿರನ್ನು ಅರಣ್ಯೇತರ ಉತ್ಪನ್ನ ಎಂದು ವರ್ಗೀಕರಿಸಬೇಕೆಂಬ ಕರ್ನಾಟಕ ಸರ್ಕಾರದ ಪ್ರಸ್ತಾಪದ ಬಗ್ಗೆ ವನ್ಯಜೀವಿ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ, ಅಂತಹ ಕ್ರಮವು ಕಾನೂನುಬದ್ಧವಾಗಿ ಅನೂರ್ಜಿತವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಖನಿಜಗಳು, ಗಣಿ ಮತ್ತು ಕ್ವಾರಿಗಳ ಎಲ್ಲಾ ಉತ್ಪನ್ನಗಳು ಅರಣ್ಯ ಉತ್ಪನ್ನಗಳ ಅಡಿಯಲ್ಲಿ ಬರುತ್ತವೆ ಎಂದು ಹೇಳುವ 1927ರ ಭಾರತೀಯ ಅರಣ್ಯ ಕಾಯಿದೆ ತಿದ್ದುಪಡಿ ಮಾಡಲು ರಾಜ್ಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೆಚ್ಚುವರಿಯಾಗಿ, ವನ್ಯಜೀವಿ ಪ್ರದೇಶಗಳ ವ್ಯಾಪ್ತಿಗೆ ಒಳಪಡದ ಪ್ರದೇಶಗಳಲ್ಲಿ 24/7 ಗಣಿಗಾರಿಕೆಯನ್ನು ಪ್ರಸ್ತಾಪಿಸಲು ರಾಜ್ಯ ಸರ್ಕಾರವು ಚಿಂತಿಸುತ್ತಿದೆ. ಎರಡೂ ಪ್ರಸ್ತಾವನೆಗಳನ್ನು ನವೆಂಬರ್ 14 ರಂದು ಸಚಿವ ಸಂಪುಟದ ಮುಂದೆ ಇಡಲಾಗಿದೆ.
1927 ರ ಭಾರತೀಯ ಅರಣ್ಯ ಕಾಯಿದೆಗೆ ತಿದ್ದುಪಡಿ ಮಾಡಲು ಕರ್ನಾಟಕ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ವನ್ಯಜೀವಿ ಮತ್ತು ರಾಷ್ಟ್ರೀಯ ಮಂಡಳಿಯ ಮಾಜಿ ಸದಸ್ಯ ಪ್ರವೀಣ್ ಭಾರ್ಗವ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಅರಣ್ಯ ಕಾಯಿದೆ, 1963 ಅನ್ನು ತಿದ್ದುಪಡಿ ಮಾಡಿದರೂ, ಅದು ಚಾಲ್ತಿಯಲ್ಲಿರುವ ಕೇಂದ್ರ ಶಾಸನಕ್ಕೆ ಹೊಂದಿಕೆಯಾಗುವುದಿಲ್ಲ, ಹೀಗಾಗಿ ರಾಜ್ಯದ ಅಂತಹ ಪ್ರಯತ್ನ ವ್ಯರ್ಥವಾಗುತ್ತದೆ ಎಂದಿದ್ದಾರೆ. ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರವು ಉದ್ದೇಶಿತ ಪ್ರಯತ್ನವನ್ನು ಕೈಬಿಡಬೇಕು ಎಂದು ಸಲಹೆ ನೀಡಿದ್ದಾರೆ. ರಾಜ್ಯ ಸರ್ಕಾರದ ಈ ಕ್ರಮ 48-ಎ ವಿಧಿಯ ಅಡಿಯಲ್ಲಿ ಸಾಂವಿಧಾನಿಕ ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಭಾರ್ಗವ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಾಲ್ಕು ಸಮೃದ್ಧ ಗಣಿಗಳಿವೆ. ದಿನದ 24 ಗಂಟೆಯೂ ಗಣಿಗಾರಿಕೆ ನಡೆಸುವ ಸರ್ಕಾರದ ಮತ್ತೊಂದು ಪ್ರಸ್ತಾಪದ ಬಗ್ಗೆ ಕೂಡ ತಜ್ಞರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.‘ಗಣಿ ಸುರಕ್ಷತಾ ಮಾರ್ಗಸೂಚಿಗಳ ಅಡಿಯಲ್ಲಿ ಸಮಯಕ್ಕೆ ಕೆಲವು ನಿಯಮಗಳಿವೆ. ಉದಾಹರಣೆಗೆ, ಎಲ್ಲಾ ಬ್ಲಾಸ್ಟಿಂಗ್ ಚಟುವಟಿಕೆಗಳನ್ನು ಮಧ್ಯಾಹ್ನದ ಸಮಯದಲ್ಲಿ ನಡೆಸಬೇಕು. ಗಣಿಗಾರಿಕೆ ಉದ್ಯಮವು ಹಲವಾರು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಏಜೆನ್ಸಿಗಳಿಂದ ನಿಯಂತ್ರಿಸಲ್ಪಡುತ್ತದೆ. ವನ್ಯಜೀವಿಗಳ ಹಿತದೃಷ್ಟಿಯಿಂದ 24X7 ಗಣಿಗಾರಿಕೆ ಚಟುವಟಿಕೆ ನಡೆಸುವುದು ಕಾರ್ಯಸಾಧ್ಯವಲ್ಲ. ಗಣಿಗಾರಿಕೆ ಪ್ರದೇಶದ ವ್ಯಾಪ್ತಿಯಲ್ಲಿ ವನ್ಯಜೀವಿ ರಕ್ಷಣಾ ವಲಯವಿಲ್ಲದಿದ್ದರೂ ಆ ಪ್ರದೇಶದಲ್ಲಿ ಕಾಡು ಪ್ರಾಣಿಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಬಳ್ಳಾರಿಯ ಗಣಿ ತಜ್ಞರು ಹೇಳಿದ್ದಾರೆ.
Advertisement