ತುಮಕೂರಿನ ವಸಂತಪುರದಲ್ಲಿ ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಾಣ!

ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಜಪಾನಿನ ಕಂಪನಿಗಳಿಂದ ಜಾಗಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
Gunjan Krishna(IAS Officer)
ಗುಂಜನ್ ಕೃಷ್ಣ (ಐಎಎಸ್ ಅಧಿಕಾರಿ)
Updated on

ಬೆಂಗಳೂರು: ತುಮಕೂರಿನ ವಸಂತನರಸಾಪುರದಲ್ಲಿ ಎರಡನೇ ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಕೈಗಾರಿಕಾ ಅಭಿವೃದ್ಧಿ ಆಯುಕ್ತ ಮತ್ತು ಇನ್ವೆಸ್ಟ್ ಕರ್ನಾಟಕ ಫೋರಂನ ಸಿಇಒ ಗುಂಜನ್ ಕೃಷ್ಣ ಘೋಷಿಸಿದ್ದಾರೆ.

ಇಂಡಿಯಾ ಜಪಾನ್ ಬಿಸಿನೆಸ್ ಶೃಂಗಸಭೆಯಲ್ಲಿ (ಐಜೆಬಿಎಸ್) ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಹೊಸ ಕ್ಲೀನ್ ಮೊಬಿಲಿಟಿ ನೀತಿಯನ್ನು ಪರಿಚಯಿಸಲಿದೆ ಎಂದು ಹೇಳಿದರು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಜಪಾನಿನ ಕಂಪನಿಗಳಿಂದ ಹೆಚ್ಚುತ್ತಿರುವ ಜಾಗದ ಬೇಡಿಕೆ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಹಯೋಗವನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ಈ ಪಾರ್ಕ್ ಹೊಂದಿದೆ ಎಂದು ಗುಂಜನ್ ಹೇಳಿದರು, ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಹೊಸ ಕ್ಲೀನ್ ಮೊಬಿಲಿಟಿ ನೀತಿಯನ್ನು ಪರಿಚಯಿಸಲಿದೆ, ಅದು ವಿದ್ಯುತ್ ವಾಹನಗಳನ್ನು (ಇವಿ) ಬೆಂಬಲಿಸುವುದಿಲ್ಲ ಆದರೆ ಹೈಡ್ರೋಜನ್ ಮತ್ತು ಹೈಬ್ರಿಡ್ ವಾಹನಗಳನ್ನು ಉತ್ತೇಜಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಜಪಾನ್ 5 ಟ್ರಿಲಿಯನ್ ಯೆನ್ ಹೂಡಿಕೆ ಮಾಡಲಿದೆ ಎಂದು ಬೆಂಗಳೂರಿನಲ್ಲಿ ಜಪಾನ್ ಕಾನ್ಸುಲ್ ಜನರಲ್ ನಕಾನೆ ಟ್ಸುಟೊಮು ಘೋಷಿಸಿದರು. ಫೆಬ್ರವರಿ 12-14 ರಂದು ನಿಗದಿಯಾಗಿರುವ ಜಾಗತಿಕ ಹೂಡಿಕೆದಾರರ ಸಭೆಯು ಕರ್ನಾಟಕ ಮತ್ತು ಜಪಾನ್‌ನಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ.

Gunjan Krishna(IAS Officer)
ಕೋವಿಡ್ -19 ವೇಳೆ ಇಂಡೋ-ಜಪಾನೀಸ್ ಸಹಭಾಗಿತ್ವ ಜಾಗತಿಕ ಸ್ಥಿರತೆಗೆ ಹೆಚ್ಚು ಪ್ರಸ್ತುತ: ಪ್ರಧಾನಿ ನರೇಂದ್ರ ಮೋದಿ

ಜಪಾನ್‌ನೊಂದಿಗೆ ಬೆಳವಣಿಗೆಯನ್ನು ಮರುರೂಪಿಸುವುದು- ನಿರೀಕ್ಷೆಗಳು ಮತ್ತು ಸಾಧ್ಯತೆಗಳು ಮತ್ತು 'ಭಾರತ ಮತ್ತು ಜಪಾನ್‌ನಲ್ಲಿನ SME ಗಳ ನಡುವಿನ ಸಹಕಾರವನ್ನು ವೇಗಗೊಳಿಸಲು ಇರುವ ಸವಾಲುಗಳು ಮತ್ತು ಪರಿಹಾರಗಳು' ಎಂಬ ಬಗ್ಗೆ ಶೃಂಗಸಭೆಯು ಚರ್ಚೆ ನಡೆಸಲಿದೆ. ಎರಡೂ ರಾಷ್ಟ್ರಗಳಲ್ಲಿ SME ಗಳ ಬೆಳವಣಿಗೆಯನ್ನು ಉತ್ತೇಜಿಸಲು ಪರಿಹಾರಗಳ ಬಗ್ಗೆ ಸಮಾಲೋಚಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com