ವಕ್ಫ್ ವಿವಾದ: ಗ್ರಾಮೀಣ ಭಾಗಗಳಲ್ಲಿ ಉದ್ವಿಗ್ನ ವಾತಾವರಣ, ಜನರ ಮಧ್ಯೆ ಕದಡಿದ ಸಾಮರಸ್ಯ

ಇತ್ತೀಚೆಗೆ ಕಲಘಟಗಿಯಲ್ಲಿ ವಕ್ಫ್ ಬೋರ್ಡ್ ಪ್ರಕ್ರಿಯೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಹಿಂದೂಪರ ಸಂಘಟನೆಗಳು ರಾಜ್ಯ ಸರ್ಕಾರವನ್ನು ಪ್ರಶ್ನಿಸಿ ಘೋಷಣೆಗಳನ್ನು ಕೂಗಿ ಬೇರೆ ಸಮುದಾಯದ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದು, ಮಾರಾಮಾರಿ ನಡೆದಿದೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಧಾರವಾಡ :ಗ್ರಾಮೀಣ ಪ್ರದೇಶಗಳಲ್ಲಿ ವಕ್ಫ್ ಆಸ್ತಿ ಗುರುತು ಹಾಕುವ ಮೂಲಕ ಸಮುದಾಯಗಳನ್ನು ವಿಭಜಿಸಲಾಗುತ್ತಿದ್ದು, ಹಳ್ಳಿಭಾಗಗಳಲ್ಲಿ ಜಾತ್ಯತೀತ ತತ್ವದಡಿಯಲ್ಲಿ ಬದುಕುವ ಜನರ ಜೀವನದ ಮೇಲೆ ಕುಂದುಂಟಾಗುತ್ತಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಕಲಘಟಗಿಯಲ್ಲಿ ವಕ್ಫ್ ಬೋರ್ಡ್ ಪ್ರಕ್ರಿಯೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಹಿಂದೂಪರ ಸಂಘಟನೆಗಳು ರಾಜ್ಯ ಸರ್ಕಾರವನ್ನು ಪ್ರಶ್ನಿಸಿ ಘೋಷಣೆಗಳನ್ನು ಕೂಗಿ ಬೇರೆ ಸಮುದಾಯದ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದು, ಮಾರಾಮಾರಿ ನಡೆದಿದೆ.

ಇದೀಗ ಕಲಘಟಗಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ವಕ್ಫ್ ತನ್ನ ಆಸ್ತಿಗಳನ್ನು ಗುರುತಿಸಲು ಅದಾಲತ್‌ಗಳನ್ನು ಆಯೋಜಿಸಲು ಪ್ರಾರಂಭಿಸಿದಾಗಿನಿಂದ ಪ್ರತಿಭಟನೆಗಳು ಮತ್ತು ಪರಸ್ಪರ ನಿಂದನೆಗಳು ಇಲ್ಲಿ ನಡೆಯುತ್ತಲೇ ಇವೆ. ಕಲಘಟಗಿಯಲ್ಲಿ ಪರಿಸ್ಥಿತಿ ಎಲ್ಲೆ ಮೀರಿದ್ದು, ಜನರು ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದು, ಹಳ್ಳಿಗಳಲ್ಲಿದ್ದ ಭಾತೃತ್ವ ಹಾಗೂ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದೆ.

ಪ್ರತಿಭಟನೆ ನಡೆಸುತ್ತಾ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದರು. ರಾಷ್ಟ್ರದ ಆಸ್ತಿ ಯಾರಿಗೂ ಸೇರಿದ್ದಲ್ಲ ಎಂದು ಹೇಳುತ್ತಿದ್ದರು. ಇದು ತಮ್ಮ ತಂದೆಯ ಆಸ್ತಿಯಲ್ಲ ಎನ್ನುತ್ತಿದ್ದರು. ಶೀಘ್ರದಲ್ಲೇ, ಇನ್ನೊಂದು ಸಮುದಾಯದ ವ್ಯಕ್ತಿಯೊಬ್ಬರು ಆಸ್ತಿ ನಿಮ್ಮ ತಂದೆಯಲ್ಲ ಎನ್ನುತ್ತಿದ್ದರು. ಹೀಗಾಗಿ ಪ್ರತಿಭಟನಾಕಾರರು ಪರಸ್ಪರ ಆರೋಪ ಮಾಡುತ್ತಿದ್ದು, ಸಮಯೋಚಿತ ಪೋಲಿಸ್ ಮಧ್ಯಸ್ಥಿಕೆ ಅಹಿತಕರ ಘಟನೆಯನ್ನು ತಪ್ಪಿಸಿತು, ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಆರೋಪಿಗಳನ್ನು ಶೀಘ್ರದಲ್ಲೇ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಮುದಾಯದ ಸದಸ್ಯರೊಂದಿಗೆ ಸಭೆಗಳನ್ನು ಸಹ ನಡೆಸಲಾಗುವುದು ಎಂದರು. ಭ್ರಷ್ಟ ರಾಜಕೀಯ ನಾಯಕರು ಮತ್ತು ಅವರ ಹಿಂಬಾಲಕರಿಗೆ ತಕ್ಕ ಪಾಠ ಕಲಿಸುವ ಮೂಲಕ ಸಮಸ್ಯೆ ಬಗೆಹರಿಸುವ ಸಮಯ ಬಂದಿದೆ ಎಂದು ಹಿಂದೂ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಕೆಲವು ರಾಜಕೀಯ ಪಕ್ಷದ ನಾಯಕರು ಬಣ್ಣ, ಧರ್ಮ, ಜಾತಿ ಮತ್ತು ಇತರ ಆಧಾರದ ಮೇಲೆ ದೇಶವನ್ನು ಹಲವಾರು ಭಾಗಗಳಾಗಿ ವಿಭಜಿಸಲು ಸಿದ್ಧರಿದ್ದಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com