BDA ಜಮೀನು ಹರಾಜು: 19 ಎಕರೆಗೆ 630 ಕೋಟಿ ರೂ ಬೆಲೆ!

ದಾಸನಾಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆಯಿಂದಾಗಿ 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ವಿಲ್ಲಾಗಳನ್ನು ಮಾರಾಟ ಮಾಡದಿರಲು ಬಿಡಿಎ ನಿರ್ಧರಿಸಿದ್ದು, ಇ-ಹರಾಜು ಮಾಡಲಿದೆ.
BDA
ಬಿಡಿಎ
Updated on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇತ್ತೀಚೆಗೆ ನಡೆಸಿದ ಇ-ಹರಾಜಿನಲ್ಲಿ ಕೊನ್ನದಾಸಪುರದಲ್ಲಿ ಒಟ್ಟು 19 ಎಕರೆ ವಿಸ್ತೀರ್ಣದ ಎರಡು ಜಮೀನುಗಳು 630 ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿದ್ದು, ಇದು ಪ್ರದೇಶದ ಮಾರ್ಗದರ್ಶಿ ಮೌಲ್ಯಕ್ಕಿಂತ ಶೇಕಡಾ 250ಕ್ಕಿಂತ ಹೆಚ್ಚಾಗಿದೆ.

ದಾಸನಾಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆಯಿಂದಾಗಿ 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ವಿಲ್ಲಾಗಳನ್ನು ಮಾರಾಟ ಮಾಡದಿರಲು ಬಿಡಿಎ ನಿರ್ಧರಿಸಿದ್ದು, ಇ-ಹರಾಜು ಮಾಡಲಿದೆ.

ಒಂದು ಜಮೀನು 11 ಎಕರೆ ಅಳತೆಯದ್ದಾಗಿದ್ದರೆ, ಇನ್ನೊಂದು ಪ್ಲಾಟ್ 8 ಎಕರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿನ ಮಾರ್ಗದರ್ಶಿ ಮೌಲ್ಯವು ಪ್ರತಿ ಚದರ ಅಡಿಗೆ ಕೇವಲ 3,000 ರೂಪಾಯಿ ಆಗಿದ್ದು, ಅಕ್ಟೋಬರ್ 30 ರಂದು ನಮ್ಮ ಹರಾಜಿನಲ್ಲಿ, ನಾವು ಪ್ರತಿ ಚದರ ಅಡಿಗೆ 6,500 ರೂ.ಗೆ ಮೂಲ ಬೆಲೆಯನ್ನು ನಿಗದಿಪಡಿಸಿದ್ದೇವೆ.

ಬಿಡ್ಡರ್ ಅನಂತಯ್ ಪ್ರಾಪರ್ಟೀಸ್ ಪ್ರತಿ ಚದರ ಅಡಿಗೆ 7,500 ರೂಪಾಯಿ. ಇದು ಮಾರುಕಟ್ಟೆ ಮೌಲ್ಯಕ್ಕಿಂತ 2.5 ಪಟ್ಟು ಹೆಚ್ಚು ಮತ್ತು ಬಿಡಿಎಗೆ ಆದಾಯದ ನಿರ್ಣಾಯಕ ಮೂಲವಾಗಿದೆ. ನಮ್ಮ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲು ನಾವು ಹಣವನ್ನು ಬಳಸಿಕೊಳ್ಳಬಹುದು. ಡೆವಲಪರ್ ಈಗಾಗಲೇ ಮೊತ್ತದ ಶೇಕಡಾ 25ನ್ನು ಪಾವತಿಸಿದ್ದಾರೆ. ಉಳಿದ ಹಣವನ್ನು ಶೀಘ್ರದಲ್ಲೇ ಪಾವತಿಸಲಾಗುವುದು ಎಂದರು.

ಇದು ಬಿಡಿಎಗೆ ಅನುಕೂಲವಾಗಲಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಸಾಮಾನ್ಯವಾಗಿ, ನಾವು ಸೈಟ್‌ಗಳನ್ನು ಲೇಔಟ್‌ಗಳಾಗಿ ಅಭಿವೃದ್ಧಿಪಡಿಸುತ್ತೇವೆ. ನಂತರ ಅವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತೇವೆ. ಅಂತಹ ಸಂದರ್ಭಗಳಲ್ಲಿ, ಅಗತ್ಯವಿರುವ ಮೂಲಸೌಕರ್ಯಗಳೊಂದಿಗೆ ಲೇಔಟ್ ನ್ನು ಅಭಿವೃದ್ಧಿಪಡಿಸಲು ಉಳಿದಿರುವಂತೆ ನಾವು ಕೇವಲ ಶೇಕಡಾ 55ರಷ್ಟು ಆದಾಯವನ್ನು ಪಡೆಯುತ್ತೇವೆ. ನಿವೇಶನಗಳ ನೇರ ಹರಾಜಿನಿಂದ ಶೇ 100ರಷ್ಟು ಆದಾಯ ಬರುತ್ತಿದೆ ಎಂದು ವಿವರಿಸಿದರು.

ಹುಣ್ಣಿಗೆರೆ ವಿಲ್ಲಾಗಳಿಗೆ ಉತ್ತಮ ಪ್ರತಿಕ್ರಿಯೆ

ತುಮಕೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವೆ ಇರುವ ಹುಣ್ಣಿಗೆರೆಯಲ್ಲಿನ ವಿಲ್ಲಾಗಳಿಗಾಗಿ ಸಾರ್ವಜನಿಕರಿಂದ ಹಲವು ಪ್ರಶ್ನೆಗಳು ಬಂದಿದ್ದು, ಮನೆ ಖರೀದಿದಾರರಿಗೆ 'ಮೊದಲು ಬಂದವರು ಮೊದಲು ಸೇವೆ' ಎಂಬ ನಿಯಮಿತ ಹಂಚಿಕೆ ವಿಧಾನವನ್ನು ಕೈಬಿಡಲು ಬಿಡಿಎ ನಿರ್ಧರಿಸಿದೆ.

ನಾವು ವಿಲ್ಲಾಗಳನ್ನು ಇ-ಹರಾಜು ಮಾಡಲು ನಿರ್ಧರಿಸಿದ್ದೇವೆ. ಇದು ನಮಗೆ ಉತ್ತಮ ಆದಾಯವನ್ನು ಪಡೆಯಲು ಸಹಾಯ ಮಾಡುತ್ತದೆ. ಇ-ಹರಾಜಿಗೆ ನೋಂದಾಯಿಸಲು ಸಾರ್ವಜನಿಕರನ್ನು ಒತ್ತಾಯಿಸುವ ಅಧಿಸೂಚನೆಯನ್ನು ನವೆಂಬರ್ 9 ರಂದು ಹೊರಡಿಸಲಾಗಿದ್ದು, ಡಿಸೆಂಬರ್ 13 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿದೆ. ನೇರ ಹರಾಜು ಡಿಸೆಂಬರ್ 16 ಮತ್ತು 17 ರಂದು ಸಂಜೆ 5 ಗಂಟೆಯವರೆಗೆ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೋಜನೆಯು 170 4BHK ಮನೆಗಳು, 152 3BHK ಮನೆಗಳು ಮತ್ತು 320 1BHK ಮನೆಗಳನ್ನು ಒಳಗೊಂಡಿದೆ. BDA 4BHK ಮನೆಗಳಿಗಾಗಿ 1 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣವನ್ನು ಗಳಿಸಲು ಉತ್ಸುಕವಾಗಿದೆ ಎಂದು ಅವರು ಹೇಳಿದರು.

ಬಿಡಿಎ ತನ್ನ ಆಸ್ತಿಗಳ ಮೇಲಿನ ಅಕ್ರಮ ಒತ್ತುವರಿಯನ್ನು ನೆಲಸಮಗೊಳಿಸಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com