ಉಡುಪಿ: ಮುಂಬೈನಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು 63 ಲಕ್ಷ ಮೌಲ್ಯದ 900 ಗ್ರಾಂ ಚಿನ್ನಾಭರಣಗಳನ್ನು ಕಳೆದುಕೊಂಡಿದೆ.
ಮುಂಬೈನ ನಿವಾಸಿ ಅವಿನಾಶ್ ಈ ಸಂಬಂಧ ದೂರು ನೀಡಿದ್ದಾರೆ. ನವೆಂಬರ್ 15ರಂದು ತನ್ನ ಕುಟುಂಬದೊಂದಿಗೆ ಮುಂಬೈನಿಂದ ಸಿಎಸ್‌ಟಿ ಮಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12133, ಕೋಚ್ ನಂ ಎಸ್ 3) ನಲ್ಲಿ ಪ್ರಯಾಣಿಸಿದ್ದೇವು. ಬಟ್ಟೆ ಮತ್ತು ಚಿನ್ನಾಭರಣಗಳಿದ್ದ ನಾಲ್ಕು ಸೂಟ್‌ಕೇಸ್‌ಗಳನ್ನು ತೆಗೆದುಕೊಂಡು ಹೋಗಿದ್ದು ಅದನ್ನು ಸೀಟಿನ ಕೆಳಗೆ ಇಟ್ಟಿದ್ದೇವು.
ನವೆಂಬರ್ 16ರಂದು ಇಂದ್ರಾಳಿ ರೈಲು ನಿಲ್ದಾಣಕ್ಕೆ ತೆರಳಿದ್ದೇವು. ಮನೆಗೆ ಹಿಂತಿರುಗಿ ಸಂಜೆ ಸೂಟ್‌ಕೇಸ್‌ಗಳನ್ನು ತೆರೆದಾಗ ಎರಡು ಸೂಟ್‌ಕೇಸ್‌ಗಳಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.
ಪನ್ವೇಲ್ ಮತ್ತು ಕಂಕಾವ್ಲಿ ರೈಲು ನಿಲ್ದಾಣಗಳ ನಡುವೆ ಎಲ್ಲೋ ಕಳ್ಳತನ ನಡೆದಿದೆ ಎಂದು ದೂರುದಾರರು ಶಂಕಿಸಿದ್ದಾರೆ. ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement